ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯರ ಸಹೋದರಿ ಶಿವಮ್ಮ ಅವರ ಪತಿ ಮೃತಪಟ್ಟಿದ್ದಾರೆ. ರಾಮೇಗೌಡ (69) ಮೃತರು.
ಅನಾರೋಗ್ಯದಿಂದ ಬಳಲುತ್ತಿದ್ದ ರಾಮೇಗೌಡ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಶನಿವಾರ ಸಂಜೆ ಸಿದ್ದರಾಮನಹುಂಡಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ. ವಿಧಾನಸಭೆ ಚುನಾವಣೆಯ ಗೆಲುವಿನ ನಾಗಾಲೋಟದಲ್ಲಿ ಕಾಂಗ್ರೆಸ್ ಪಕ್ಷವಿದ್ದು, ಇದನ್ನು ಸಂಭ್ರಮಿಸಬೇಕಿದ್ದ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಮಂಕಾಗಿದೆ.
ಇದನ್ನೂ ಓದಿ: Karnataka Election Results 2023: ವರುಣದಲ್ಲಿ ಸಿದ್ದರಾಮಯ್ಯ ಮುನ್ನಡೆ; ಮಾಧ್ಯಮಗಳಿಗೆ ಪ್ರತಿಕ್ರಿಯಿಸದೆ ಹೊರಟ ಸೋಮಣ್ಣ
ರಾಮೇಗೌಡ ಸಿದ್ದರಾಮನಹುಂಡಿಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿದ್ದರು. ಪತ್ನಿ, ಮೂವರು ಹೆಣ್ಣು ಮಕ್ಕಳು, ಓರ್ವ ಮಗನನ್ನು ಅಗಲಿದ್ದಾರೆ.