Site icon Vistara News

No Government Rules : ಸಿದ್ದು ಸರ್ಕಾರದಲ್ಲಿ ಬೇಕಾಬಿಟ್ಟಿ ಅಧಿಕಾರಿಗಳ ನಿಯೋಜನೆ; IAS ಜಾಗದಲ್ಲಿ KAS ಅಧಿಕಾರಿ!

KAS Officer chidananda sadashiva vatare infront of vidhana soudha

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿವಾದಗಳಿಗೆ ತುತ್ತಾಗುತ್ತಲೇ ಇದೆ. ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರದಲ್ಲಿ ಬೇಕಾಬಿಟ್ಟಿಯಾಗಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂಬ ಅಂಶ ಗೊತ್ತಾಗಿದೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ (No Government Rules) ಅಧಿಕಾರಿ ನಿಯೋಜನೆ ಮಾಡಿರುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ದಾಖಲೆಗಳು ಲಭ್ಯವಾಗಿವೆ.

ಸಿದ್ದರಾಮಯ್ಯ ಸರ್ಕಾರದಲ್ಲಿ (Siddaramaiah government) ಬೇಕಾಬಿಟ್ಟಿಯಾಗಿ ಅಧಿಕಾರಿಗಳನ್ನು ನಿಯೋಜನೆ ಮಾಡಿರುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ಮಾಹಿತಿ ಸಿಕ್ಕಿದ್ದು, ಐಎಎಸ್‌ ಅಧಿಕಾರಿಯನ್ನು (IAS Officer) ನಿಯೋಜನೆ ಮಾಡುವ ಜಾಗಕ್ಕೆ ಕೆಎಎಸ್ ಅಧಿಕಾರಿಯನ್ನು (KAS Officer) ನೇಮಕ ಮಾಡಿ ಆದೇಶಿಸಲಾಗಿದೆ. ಇದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ: Lok Sabha Election 2024 : ಬಿಜೆಪಿ ಟಿಕೆಟ್‌ ಪಾಲಿಟಿಕ್ಸ್; 3 ಕ್ಷೇತ್ರ, 3 ನಾಯಕರು!‌ ಏನಿದೆ ಬೊಮ್ಮಾಯಿ ಲೆಕ್ಕಾಚಾರ?

ಯಾವ ಇಲಾಖೆಯಲ್ಲಿ ನಡೆದಿದೆ ಈ ಎಡವಟ್ಟು?

ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಕೆಎಎಸ್ ದರ್ಜೆ ಅಧಿಕಾರಿಯನ್ನು ನೇಮಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ನಿರ್ದೇಶಕ ಹುದ್ದೆಗೆ ನಿಯಮದ ಪ್ರಕಾರ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಬೇಕಾಗಿತ್ತು.

ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ನಿಯಮದಂತೆ ನಿಗಮದ ಎಂಡಿ ಹುದ್ದೆಗೆ ಐಎಎಸ್ ಅಧಿಕಾರಿಯನ್ನು ನೇಮಿಸಬೇಕಿತ್ತು. ಆದರೆ, ಐಎಎಸ್ ಅಧಿಕಾರಿಯನ್ನು ನೇಮಿಸುವ ಬದಲು ಕೆಎಎಸ್ ಅಧಿಕಾರಿಯಾದ ಚಿದಾನಂದ ಸದಾಶಿವ ವಟಾರೆ ಅವರನ್ನು ಈ ಹುದ್ದೆಗೆ ತಂದು ಕೂರಿಸಲಾಗಿದೆ. ಜೂ. 30ರಂದು ನಿಗಮದ ಎಂಡಿಯನ್ನಾಗಿ ಅವರನ್ನು ನೇಮಿಸಲಾಗಿದೆ. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.

ನಿಗಮದಲ್ಲಿ ಇದುವರೆಗೆ ಐಎಎಸ್ ಅಧಿಕಾರಿಯನ್ನು ನಿಯೋಜನೆ ಮೇರೆಗೆ ನೇಮಿಸಿಕೊಂಡು ಬರಲಾಗುತ್ತಿದೆ. ಇದುವರೆಗೆ ಸಾಕಷ್ಟು ಐಎಎಸ್ ಅಧಿಕಾರಿಗಳು ನಿಗಮದ ಎಂಡಿ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಈಗ ಸಿ ಆ್ಯಂಡ್ ಆರ್ ಉಲ್ಲಂಘಿಸಿ ಕೆಎಎಸ್ ಶ್ರೇಣಿಯ ಅಧಿಕಾರಿಯನ್ನು ತಂದು ಕೂರಿಸಿರುವುದು ಬಹಿರಂಗವಾಗಿದೆ. ಆದೇಶ ಪತ್ರದಲ್ಲಿ ಎಂಡಿ ಹುದ್ದೆಗೆ ಐಎಎಸ್ ಅಧಿಕಾರಿಯನ್ನು ನಿಯೋಜನೆ ಮೇರೆಗೆ ನೇಮಿಸಬೇಕೆಂದು ನಮೂದಿಸಲಾಗಿದೆ. ಹೀಗಾಗಿ ಕೆಎಎಸ್ ದರ್ಜೆ ಅಧಿಕಾರಿಯನ್ನು ನೇಮಕ ಮಾಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಂತಾಗಿದೆ.

ಇದನ್ನೂ ಓದಿ: Weather report : ಬೆಂಗಳೂರು ಸೇರಿ ಐದು ಜಿಲ್ಲೆಗಳಲ್ಲಿ ಗಾಳಿ-ಮಳೆ!

ನಿಗಮದ ವಿವರ

ಕೆಎಸ್‌ಎಂಎಸ್‌ಸಿಎಲ್ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತದೆ. ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆ್ಯಂಟಿಬಯೋಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸೇರಿ ವಿವಿಧ ಔಷಧಗಳನ್ನು ಖರೀದಿಸಿ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಪೂರೈಸುವ ಕಾರ್ಯ ಮಾಡುತ್ತಿದೆ.

Exit mobile version