Site icon Vistara News

Karnataka Politics : ಘರ್ ವಾಪ್ಸಿಗೆ ಸಿದ್ದರಾಮಯ್ಯ ಅಡ್ಡಗಾಲು; ಡಿಕೆಶಿ-ಸಿದ್ದು ಮಧ್ಯೆ ನೀನಾ-ನಾನಾ ಫೈಟ್!

DCM DK Shivakumar and CM Siddaramaiah infront of vidhanasoudha

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) “ಆಪರೇಷನ್‌” ಸುದ್ದಿ ಕೇಳಿ ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಕಾಂಗ್ರೆಸ್‌ 135 ಸ್ಥಾನಗಳನ್ನು ಪಡೆದು ಅಧಿಕಾರ ವಹಿಸಿಕೊಂಡರೂ ನಾನಾ ರಾಜಕೀಯ ಲೆಕ್ಕಾಚಾರಗಳೊಂದಿಗೆ (Political calculations) ಆಪರೇಷನ್‌ ಹಸ್ತ ಮಾಡಲು ಮುಂದಾಗಿದೆ (Operation Hasta) ಎಂಬ ಸುದ್ದಿ ದಟ್ಟವಾಗಿತ್ತು. ಅಲ್ಲದೆ, ಬಿಜೆಪಿ ಸಹ ಆಪರೇಷನ್‌ ಕಮಲ (Operation Kamala) ಮಾಡಿ ಕಾಂಗ್ರೆಸ್‌ ಅಸಮಾಧಾನಿತ ಶಾಸಕರನ್ನು ಸೆಳೆದು ಜೆಡಿಎಸ್‌ ಒಡಗೂಡಿ ಸರ್ಕಾರ ರಚಿಸುವ ಪ್ಲ್ಯಾನ್‌ ಮಾಡಿಕೊಂಡಿದೆ ಎಂದೂ ಹೇಳಲಾಗುತ್ತಿತ್ತು. ಬೆಂಗಳೂರನ್ನೇ ಮುಖ್ಯ ಟಾರ್ಗೆಟ್‌ ಮಾಡಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ (DCM DK Shivakumar), ಆಪರೇಷನ್‌ ಹಸ್ತಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಕಾಂಗ್ರೆಸ್‌ನಿಂದಲೇ ಬಿಟ್ಟು ಹೋದವರ ಘರ್‌ ವಾಪ್ಸಿಗೆ (Ghar Wapsi) ವೇದಿಕೆ ಸಜ್ಜುಗೊಳಿಸಿದ್ದರು. ಆದರೀಗ ಇದಕ್ಕೆ ಸ್ವತಃ ಸಿಎಂ ಸಿದ್ದರಾಮಯ್(CM Siddaramaiah) ಅಡ್ಡಗಾಲು ಹಾಕಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಘರ್ ವಾಪ್ಸಿಗೆ ಸಿದ್ದರಾಮಯ್ಯ ಅಡ್ಡಗಾಲು?

ಆಪರೇಷನ್‌ ಹಸ್ತ ವಿಚಾರದಲ್ಲಿ ಇಬ್ಬರು ನಾಯಕರಲ್ಲಿ ವಿಭಿನ್ನ ನಿಲುವು ವ್ಯಕ್ತವಾಗಿದೆ. ಮಂಗಳವಾರ (ಆಗಸ್ಟ್‌ 15) ರಾತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಕೆಲವರ ಸೇರ್ಪಡೆಗೆ ಸಿಎಂ ಸಿದ್ದರಾಮಯ್ಯ ಸುತಾರಾಂ ಒಪ್ಪಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Karnataka Politics : ಕಾಂಗ್ರೆಸ್‌ ವಿರುದ್ಧ ಸಿಡಿದ ಸಂಕೇತ್‌ ಏಣಗಿ; ಯುವ ನಾಯಕರು ಕೈ ಬಿಡುವ ಎಚ್ಚರಿಕೆ!

ಲೋಕಸಭಾ ಚುನಾವಣೆಯನ್ನು (Lok Sabha Election 2024) ಟಾರ್ಗೆಟ್ ಮಾಡಿರುವ ಡಿ.ಕೆ. ಶಿವಕುಮಾರ್, ಬೆಂಗಳೂರು ಶಾಸಕರನ್ನು ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದ್ದರು. ಬಿಜೆಪಿ ಭದ್ರಕೋಟೆಯಂತೆ ಆಗಿರುವ ಬೆಂಗಳೂರಿನಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬೇಕಾದ ತಯಾರಿ ನಡೆಸಿದ್ದರು. ಇದಕ್ಕೆ ತಮ್ಮದೇ ಪಕ್ಷದಿಂದ ಬಿಜೆಪಿ ವಲಸೆ ಹೋಗಿದ್ದ ಶಾಸಕರು ಮೊದಲ ಟಾರ್ಗೆಟ್‌ ಆಗಿದ್ದರು. ಶಾಸಕರಾದ ಎಸ್‌.ಟಿ. ಸೋಮಶೇಖರ್, ಬೈರತಿ ಬಸವರಾಜು ಮತ್ತು ಕೆ. ಗೋಪಾಲಯ್ಯ ಅವರನ್ನು ಸೆಳೆದುಕೊಳ್ಳಲು ಡಿ.ಕೆ. ಶಿವಕುಮಾರ್‌ ಮುಂದಾಗಿದ್ದರು ಎನ್ನಲಾಗಿದೆ.

ಆಪರೇಷನ್‌ ಹಸ್ತಕ್ಕೆ ಸಿದ್ದರಾಮಯ್ಯ ವಿರೋಧ!

ಡಿ.ಕೆ. ಶಿವಕುಮಾರ್ ನಡೆಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ‌ವ್ಯಕ್ತಪಡಿಸಿದ್ದಾರೆ. ಆಪರೇಷನ್ ಹಸ್ತ ಪಾಲಿಟಿಕ್ಸ್‌ ನಮಗೆ ಬೇಡವೇ ಬೇಡ. ನಾನು ಈಗಾಗಲೇ ಈ ಬಗ್ಗೆ ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಸದನದಲ್ಲಿ ಘರ್ ವಾಪ್ಸಿ ಮಾಡಲ್ಲ ಎಂದಿದ್ದೇನೆ. ಆಗ ಸ್ಪೀಕರ್ ಕೇಳಿದಾಗ ಪಕ್ಷ ಬಿಟ್ಟು ಹೋದವರನ್ನು ವಾಪಸ್‌ ಕರೆಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದೇನೆ. ಹೀಗಾಗಿ ಆಪರೇಷನ್ ಹಸ್ತ ಮಾಡುವುದು ಬೇಡ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಶಾಸಕರ ಪುನರ್‌ ಸೇರ್ಪಡೆಗೆ ನನ್ನ ವಿರೋಧ ಇದೆ ಎಂದು ಸಿದ್ದರಾಮಯ್ಯ ಖಡಕ್‌ ಆಗಿಯೇ ಹೇಳಿದ್ದಾರೆ ಎನ್ನಲಾಗಿದೆ.

ಬೈರತಿ ಬಸವರಾಜ್ ಸೇರ್ಪಡೆಗೆ ಮತ್ತಷ್ಟು ವಿರೋಧ

ಬೈರತಿ ಬಸವರಾಜ್ (Byrathi Basavaraj) ಸೇರ್ಪಡೆಗೆ ನನ್ನ ವಿರೋಧ ಇದ್ದೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬೈರತಿ ವಿಚಾರದಲ್ಲಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಲು ಕಾರಣವೂ ಇದೆ. 2017ರಲ್ಲಿ ಸಿದ್ದರಾಮಯ್ಯ ನಿವಾಸದಲ್ಲಿ ಕೆ.ಜೆ. ಜಾರ್ಜ್‌ ಹಾಗೂ ಬೈರತಿ ಬಸವರಾಜ್ ನಡುವೆ ಗಲಾಟೆ ನಡೆದಿತ್ತು. ಆಗ ಕೆ.ಜೆ. ಜಾರ್ಜ್‌ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. ಈ ಗಲಾಟೆಯಲ್ಲಿ ಬೈರತಿ ಬಸವರಾಜ್ ವಿರುದ್ಧ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು.

ಬೈರತಿ ಬಸವರಾಜ್ ಒಂದು ಹಂತದಲ್ಲಿ ಜಾರ್ಜ್ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದರು. ಅಂದಿನಿಂದಲೂ ಬಸವರಾಜ್‌ ಅವರನ್ನು ದೂರ ಇಟ್ಟಿದ್ದ ಸಿದ್ದರಾಮಯ್ಯ ಅವರು ಬೈರತಿ ಸುರೇಶ್‌ಗೆ ಆದ್ಯತೆ ನೀಡಿದ್ದರು. ಇನ್ನು ಕಾಂಗ್ರೆಸ್ ಬಿಟ್ಟು ಹೋಗುವಾಗಲೂ ಸಿದ್ದರಾಮಯ್ಯ ಮಾತಿಗೆ ಬಸವರಾಜ್‌ ಡೋಂಟ್ ಕೇರ್ ಅಂದಿದ್ದರು. ಹೀಗಾಗಿ ಬಸವರಾಜ್ ವಿಚಾರದಲ್ಲಿ ಸಿದ್ದರಾಮಯ್ಯ ಭಾರಿ ವಿರೋಧ‌ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Gruha Lakshmi : ಗೃಹಲಕ್ಷ್ಮಿ ಅಡಿ ಹಾಕಿಕೊಂಡಿದ್ದ ಸ್ಕೀಂ ಫ್ಲಾಪ್!‌ ಡಿ.ಕೆ. ಶಿವಕುಮಾರ್‌ ಅಸಮಾಧಾನ

ನೀನಾ-ನಾನಾ ಫೈಟ್!

ಸಿದ್ದರಾಮಯ್ಯ ವಿರೋಧದ ನಡುವೆಯೂ‌ ಇವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲು ಡಿ.ಕೆ. ಶಿವಕುಮಾರ್ ಕಸರತ್ತು‌ ನಡೆಸಿದ್ದಾರೆ. ನನಗೆ ಲೋಕಸಭಾ ಚುನಾವಣೆ ಮುಖ್ಯವಾಗಿದೆ. ವಲಸಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಬೆಂಗಳೂರಿನಲ್ಲಿ ಹಲವು ಕ್ಷೇತ್ರಗಳನ್ನು ಗೆಲ್ಲಬಹುದು ವಿಚಾರದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ನಾನಾ – ನೀನಾ ಫೈಟ್ ಶುರುವಾಗಿದೆ.

Exit mobile version