ಬಾಗಲಕೋಟೆ: ಸುಧಾಕರ್‌ನ ಎಂಎಲ್‌ಎ ಮಾಡಿದ್ದು ನಾನೇ, ಆದರೆ ಮಂತ್ರಿ ಆಗಲು ಬಿಜೆಪಿಗೆ ಹೋಗಿದ್ದಾನೆ. ಸಚಿವ ಸುಧಾಕರ ನನ್ನ ಮಾತು ಕೇಳುತ್ತಾನೆ ಎಂದು ಯಾರು ಹೇಳಿದ್ದು? ಅವನು ಸುಳ್ಳ, ಮಹಾಕಳ್ಳ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯ ಕಿತ್ತಲಿ ಗ್ರಾಮಕ್ಕೆ ಕುಂದುಕೊರತೆ ಆಲಿಸಲು ಸಿದ್ದರಾಮಯ್ಯ ಶನಿವಾರ ತೆರಳಿದ್ದಾಗ, ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರ ಆರಂಭಿಸಿ, ಆಸ್ಪತ್ರೆಗೆ ಅಗತ್ಯವಿರುವ ಜಾಗವಿದೆ ಎಂದು ಸ್ಥಳೀಯರು ಮನವಿ ಮಾಡಿದರು. ಅಲ್ಲದೆ, ಆರೋಗ್ಯ ಸಚಿವರು ನಿಮ್ಮ ಮಾತು ಕೇಳುತ್ತಾರೆ. ಅವರಿಗೆ ಒಮ್ಮೆ ನೀವು ಹೇಳಿ ಮಂಜೂರು ಮಾಡಿಸಿ ಎಂದಾಗ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸಚಿವ ಸುಧಾಕರ ನನ್ನ ಮಾತು ಕೇಳುತ್ತಾನೆ ಎಂದು ಯಾರು ಹೇಳಿದ್ದು? ಅವನು ಸುಳ್ಳ, ಮಹಾಕಳ್ಳ ಎಂದು ಹೇಳಿದ್ದಾರೆ.
ಆಸ್ಪತ್ರೆ ಬಗ್ಗೆ ಪತ್ರ ಬರೆದಿದ್ದೇನೆ. ಅವನು ನನ್ನ ಮಾತು ಕೇಳಲ್ಲ, ನನ್ನ ಮಾತು ಕೇಳುತ್ತಾನೆ ಎಂದು ಯಾರು ಹೇಳಿದ್ದು? ಕಾಂಗ್ರೆಸ್‌ನಿಂದ ಶಾಸಕ ಮಾಡಿದ್ದೇ ನಾನು. ಆದರೆ ಮಂತ್ರಿಯಾಗುವ ಆಸೆಗಾಗಿ ಬಿಜೆಪಿಗೆ ಹೋಗವನೆ ಎಂದು ತಮ್ಮದೇ ದಾಟಿಯಲ್ಲಿ ಏಕವಚನದಲ್ಲಿಯೇ ವ್ಯಂಗ್ಯವಾಡಿದ್ದಾರೆ.
ನಾ ಕಂಡರೆ ಭಯ ಅವರಿಗೆ
ಕಾಂಗ್ರೆಸ್‌ನ ಎಲ್ಲ ಹಗರಣ ಬಯಲು ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಈ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಇಷ್ಟು ದಿನ ಏನು ಮಾಡುತ್ತಿದ್ದರು. ಅವರದ್ದೇ ಸರ್ಕಾರ ಇದೆಯಲ್ಲ ಎಂದು ತಿರುಗೇಟು ನೀಡಿದ್ದಾರೆ. ಜನಸ್ಪಂದನದಲ್ಲಿ ಜನ ಸೇರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಎಷ್ಟು ಜನ ಇರುತ್ತಾರೋ ಅಷ್ಟು ಜನ ಸೇರುತ್ತಾರೆ ಎಂದರು. ಬಿಜೆಪಿಗರಿಗೆ ನೀವೇ ಟಾರ್ಗೆಟ್ ಆಗುತ್ತಿದ್ದೀರಾ ಎಂಬ ಪ್ರಶ್ನೆಗೆ ಸ್ಪಂದಿಸಿ, ನನ್ನನ್ನು ಕಂಡರೆ ಭಯ ಅವರಿಗೆ ಎಂದಿದ್ದಾರೆ.
ಇದನ್ನೂ ಓದಿ | BJP ಜನಸ್ಪಂದನ | ಸಮಾವೇಶಕ್ಕೆ ಬಂದಿದ್ದ ಹಿರಿಯ ನಾಗರಿಕ ಹೃದಯಾಘಾತದಿಂದ ಸಾವು