ಚಿಂತಾಮಣಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಪಾದಯಾತ್ರೆ, ಬೈಕ್ ರ‍್ಯಾಲಿಗಳಿಂದ ಸಹಜವಾಗಿಯೇ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹೇಳಿದ್ದಾರೆ.
ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್‌ನ ಪಾದಯಾತ್ರೆ ಕಾರ್ಯಕ್ರಮದ ವೇಳೆ ಅವರು ವಿಸ್ತಾರ ನ್ಯೂಸ್ ಜತೆ ಮಾತನಾಡಿದರು. ಶನಿವಾರ ಮುಂಜಾನೆ ಕೈವಾರದಿಂದ ಚಿಂತಾಮಣಿವರೆಗೆ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಏಳು ಕಿಮೀ ಬೈಕ್ ರ‍್ಯಾಲಿ ಬಳಿಕ ಚಿಂತಾಮಣಿ ಸರ್ಕಲ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ ನಡೆಯಿತು. ಇದರ ನಡುವೆ ವಿಸ್ತಾರ ಜತೆ ಮಾತನಾಡಿದ ಸಿದ್ದರಾಮಯ್ಯ ಪಾದಯಾತ್ರೆಯ ರಾಜಕೀಯ ಆಯಾಮಗಳ ಬಗ್ಗೆಯೂ ಮಾತನಾಡಿದರು.
ʻʻಜನರಿಗೆ ರಾಜ್ಯ ಮತ್ತು ದೇಶದಲ್ಲಿ ಇರೋ ಸರ್ಕಾರದ ವೈಫಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಹೀಗಾಗಿಯೇ ನಾವು ಕ್ಷೇತ್ರದಲ್ಲಿ ಪಾದಯಾತ್ರೆ ಮಾಡ್ತಿದ್ದೇವೆ. ಇದರಿಂದ ರಾಜಕೀಯ ಲಾಭ ಆಗುತ್ತದೆ. ನಾವೇನೂ ಸನ್ಯಾಸಿಗಳಲ್ಲ. ಪಾದಯಾತ್ರೆಯಿಂದ ಸಹಜವಾಗಿ ರಾಜಕೀಯ ಲಾಭ ಆಗುತ್ತದೆʼʼ ಎಂದ ಸಿದ್ದರಾಮಯ್ಯ, ಭ್ರಷ್ಟ ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದು 2023ಕ್ಕೆ ನಿರ್ಧಾರ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ ಎಂದರು.
ಜನರಿಗೆ ಮನವರಿಕೆ ಮಾಡುತ್ತೇವೆ
ʻʻದೇಶದಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದು ಎಲ್ಲರಿಗೂ ಮನವರಿಕೆ ಆಗಿದೆ. ೭0 ವರ್ಷದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ ಅಂತಿರುವ ಬಿಜೆಪಿ ಅವರು ಜನರ ಪಿಕ್ ಪಾಕೇಟ್ ಮಾಡಿದ್ದಾರೆ. ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ನಾವು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆʼʼ ಎಂದುರ ಹೇಳಿದರು ಡಿ.ಕೆ. ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ. ಸರ್ಕಾರ ನಡೆಸುತ್ತಿರುವವರು ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಲ್ಲವೂ ಜನರಿಗೆ ಮನವರಿಕೆ ಆಗಿದೆ. ಮುಂದೆ ಜನ ಬುದ್ಧಿ ಕಲಿಸಲು ಸಿದ್ಧರಿದ್ದಾರೆʼʼ ಎಂದರು.
ವೇದಿಕೆ ಕಾರ್ಯಕ್ರಮಕ್ಕೆ ಮಳೆ ಅಡ್ಡಿ
ಈ ನಡುವೆ, ಚಿಂತಾಮಣಿಯ ಹೈಸ್ಕೂಲ್ ಬಳಿ ಆಯೋಜಿಸಿದ ವೇದಿಕೆ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ. ಆದರೂ ಸ್ವಲ್ಪ ಹೊತ್ತು ಕಾರ್ಯಕರ್ತರು ತಲೆಯ ಮೇಲೆ ಚೆಯರ್ ಹಿಡಿದುಕೊಂಡು ನಿಂತುಕೊಂಡರು. ಕೊನೆಗೆ ನಾಯಕರೇ ವೇದಿಕೆ ಬಿಟ್ಟು ತೆರಳಿದರು. ಡಿ.ಕೆ. ಶಿವಕುಮಾರ್, ಕೃಷ್ಣ ಭೈರೇಗೌಡ ಮೊದಲಾದ ನಾಯಕರು ಕೆಲವೇ ನಿಮಿಷ ಮಾತನಾಡಿ ಸಭೆ ಮುಕ್ತಾಯಗೊಳಿಸಲಾಯಿತು.
ಇದನ್ನೂ ಓದಿ | Amrit mahothsav: ಕೈವಾರದಿಂದ ಚಿಂತಾಮಣಿಗೆ ಕಾಂಗ್ರೆಸ್ ಬೈಕ್ ರ‍್ಯಾಲಿ, 10000ಕ್ಕೂ ಅಧಿಕ ಮಂದಿ ಭಾಗಿ