ಹುಬ್ಬಳ್ಳಿ: ಸಿದ್ದರಾಮಯ್ಯ ಅವರೇ ಬಾಲಿಶವಾಗಿ ಮಾತನಾಡಬೇಡಿ. ಜನ ನಿಮ್ಮನ್ನೂ ರಾಹುಲ್ ಗಾಂಧಿಯಂತೆ ಅಪ್ರಬುದ್ಧ ರಾಜಕಾರಣಿಯಾಗಿ ತಿಳಿದುಕೊಳ್ಳುತ್ತಾರೆ. ಸಿದ್ದರಾಮಯ್ಯ 15 ಬಾರಿ ಬಜೆಟ್ ಮಂಡಿಸಿದಂತಹ ರಾಜಕಾರಣಿ. ಕರ್ನಾಟಕದ ಜನ ನಿಮ್ಮನ್ನು ಒಬ್ಬ ಪ್ರಬುದ್ಧ ನಾಯಕ, ರಾಜಕಾರಣಿಯಾಗಿ ನೋಡಿದ್ದಾರೆ. ಜನರು ಬೇರೆ ದೃಷ್ಟಿಕೋನದಿಂದ ನೋಡುವಂತೆ ಮಾಡಿಕೊಳ್ಳಬೇಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರನ್ನು ಒಬ್ಬ ಅಪ್ರಬುದ್ಧ ನಾಯಕನೆಂದು ನೋಡಲಾಗುತ್ತಿದೆ. ಅವರಿರುವುದೇ ಹಾಗೆ. ಹಾಗಾಗಿ ಅವರ ಮಾತನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ನೀವೂ ಹಾಗೇ ಆಡಿದರೆ ನಿಮ್ಮನ್ನೂ ಅವರಂತೆಯೇ ತಿಳಿದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್‌ಗೆ ಇರುವುದು ಒಂದೇ ರಾಜ್ಯ
ಕರ್ನಾಟಕದಲ್ಲಿ ನಾವು ಅನೇಕ ಕಾರಣಗಳಿಂದ ಅಧಿಕಾರ ಕಳೆದುಕೊಂಡಿದ್ದೇವೆ ನಿಜ. ಆದರೆ ದೇಶಾದ್ಯಂತ ನೀವೇಕೆ ಅಧಿಕಾರ ಕಳೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಹಿಮಾಚಲ ಪ್ರದೇಶ, ತೆಲಂಗಾಣ ಬಿಟ್ಟರೆ ಬೇರೆ ಯಾವ ರಾಜ್ಯವೂ ಕಾಂಗ್ರೆಸ್ ಹಿಡಿತದಲ್ಲಿ ಇಲ್ಲ. ರಾಜಸ್ಥಾನ, ಛತ್ತೀಸ್‌ಗಡ, ಮಧ್ಯಪ್ರದೇಶ, ಆಂಧ್ರ ಹೀಗೆ ಎಲ್ಲಾ ಕಡೆ ಏಕೆ ಅಧಿಕಾರ ಕಳೆದುಕೊಂಡ್ರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Pralhad Joshi: ಜಾತಿ ಪದ್ಧತಿ ತೊಡೆದು ಹಾಕಲು ಮತ್ತೊಂದು ಕ್ರಾಂತಿ ಅಗತ್ಯ: ಪ್ರಲ್ಹಾದ್ ಜೋಶಿ
ನಿಮ್ಮ ಪಾರ್ಟಿಯೊಳಗೆ ಮತ್ತು ರಾಹುಲ್ ಗಾಂಧಿ ನೇತತ್ವದಲ್ಲಿ ಎಲ್ಲಾ ಸರಿಯಾಗಿದೆಯೇ? ಹೇಗೆ? ನೋಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಜೋಶಿ ತಿರುಗೇಟು ನೀಡಿದರು.
ಸಿದ್ದರಾಮಯ್ಯ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕೋ ಕನ್ನರಾಮಯ್ಯ
ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಹಿಂದು ದೇವಸ್ಥಾನಗಳ ಹುಂಡಿಗೆ ಕನ್ನ ಹಾಕೋ ಕನ್ನರಾಮಯ್ಯ ಆಗಿದ್ದಾರೆ. ಕಾಂಗ್ರೆಸ್ ಘೋಷಿಸಿದ ಬೋಗಸ್ ಗ್ಯಾರಂಟಿಗಳನ್ನು ನಿರ್ವಹಿಸಲು ಸಾಧ್ಯವಾಗದೇ, ದೇವಸ್ಥಾನಗಳ ಹುಂಡಿಗೆ ಕನ್ನ ಹಾಕುವ ಕೃತ್ಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ವಾಪರ ತಯಾರಿ ಮಾಡದೆ ಘೋಷಿಸಿದ ಗ್ಯಾರಂಟಿಗಳು ಎಲ್ಲಾ ಬೋಗಸ್ ಆಗಿವೆ. ಅವನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಇಂಥದ್ದನ್ನೆಲ್ಲ ಮಾಡುತ್ತಿದ್ದಾರೆ ಎಂದು ಸಚಿವ ಜೋಶಿ ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಿತಿಮೀರಿದೆ. ಇದನ್ನು ನಾವಲ್ಲ, ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ, ಸುಳ್ಳುರಾಮಯ್ಯ ಆದರು, ಸಾಲರಾಮಯ್ಯ ಆದರು, ಈಗ ಹಿಂದು ದೇಗುಲಗಳ ಹುಂಡಿಗಳಿಗೆ ಕನ್ನ ಹಾಕುವಂಥ ಕನ್ನರಾಮಯ್ಯ ಆಗಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನೆಲ್ಲ ಡೈವರ್ಟ್ ಮಾಡಲು ಏನು ಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ಸಚಿವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | N Ravikumar: ರಾಜ್ಯ ಸರ್ಕಾರ ಮೋಜು, ಮಸ್ತಿಯಲ್ಲಿ ತೊಡಗಿದೆ: ಎನ್.ರವಿಕುಮಾರ್
ಯುಪಿಎ ಕಾಲದಲ್ಲಿ ಬಂದ ಅನುದಾನದ ಲೆಕ್ಕ ಕೊಡಿ
ಯುಪಿಎ ಅವಧಿಯಲ್ಲಿ ನೀವೇ ಅಧಿಕಾರದಲ್ಲಿ ಇದ್ದಿರಿ. ಆಗ ಎಷ್ಟು ಅನುದಾನ ಬಂದಿದೆ?. ಈಗಲೂ ನೀವೇ ಇದ್ದೀರಿ. ಈಗ NDA ಅವಧಿಯಲ್ಲಿ ಎಷ್ಟು ಬಂದಿದೆ ಮೊದಲು ಲೆಕ್ಕ ಕೊಡಿ. ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 60,000 ಲಕ್ಷ ಕೋಟಿ ಬಂದಿದೆ. NDA ಅವಧಿಯಲ್ಲಿ 2.85 ಲಕ್ಷ ಕೋಟಿ ತೆರಿಗೆ ಹಂಚಿಕೆ ಕೊಟ್ಟಿದೆ. ಇದನ್ನೆಲ್ಲ ವಿಧಾನಸಭೆಗೆ ವಿವರಣೆ ಕೊಟ್ಟಿದ್ದೇವೆ ಎಂದು ಸಚಿವ ಜೋಶಿ ಹೇಳಿದರು.