ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್ (Siddaramaiah Vs BJP) ನಡುವೆ ಬುಕ್ ವಾರ್ ಶುರುವಾಗಿದೆ. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರಿತoವಾಗಿ ಸಂಘರ್ಷ ಪ್ರಾರಂಭವಾಗಿದೆ. ಈಗ ಬಿಜೆಪಿ ವತಿಯಿಂದ “ಸಿದ್ದು ನಿಜ ಕನಸುಗಳು” ಪುಸ್ತಕ ಪ್ರಕಟಿಸುತ್ತಿರುವುದರಿಂದ ಕಾಂಗ್ರೆಸ್ ಅದಕ್ಕೆ ಎದಿರೇಟು ಕೊಡಲು ಮುಂದಾಗಿದ್ದು, ಬಿಜೆಪಿ ಸಿದ್ಧಪಡಿಸಿದ ಪುಸ್ತಕದ ಮುಖಪುಟವನ್ನೇ ಹೋಲುವಂತೆ ಅದೇ ಹೆಸರಿನಲ್ಲಿ “ಸಿದ್ದು ನಿಜ ಕನಸುಗಳು” ಸಂಪುಟ ೧ ಅನ್ನು ಹೊರತರುತ್ತಿದೆ. ಇದರ ಭಾಗವಾಗಿ ಸೋಮವಾರ (ಜ. ೯) ಬೆಳಗ್ಗೆಯೇ ಸಿದ್ದರಾಮಯ್ಯ ಟ್ವೀಟ್ ಮೂಲಕ ಕೌಂಟರ್ ಕೊಟ್ಟಿದ್ದಾರೆ.
ಈಗಾಗಲೇ ಬಿಜೆಪಿ ಹೊರತರುತ್ತಿರುವ “ಸಿದ್ದು ನಿಜ ಕನಸುಗಳು” ಪುಸ್ತಕಕ್ಕೆ ಪ್ರತಿಯಾಗಿ “ಬಿಜೆಪಿ ಕಳ್ಳಮಾರ್ಗ”- ಸಂಪುಟ 1 ಕೃತಿ ಬಿಡುಗಡೆಗೆ ಕಾಂಗ್ರೆಸ್ ಸಜ್ಜಾಗಿದೆ. ಆ ನಡುವೆ ಇದೇ ನಿಜವಾದ “ಸಿದ್ದು ನಿಜ ಕನಸುಗಳು” ಎಂದು ಹೇಳಿಕೊಂಡು ಸಿದ್ದರಾಮಯ್ಯ ಮಾಧ್ಯಮ ಸಂಯೋಜಕರು ಅಧಿಕೃತವಾಗಿ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಸಿದ್ದರಾಮಯ್ಯ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕಾಲದ ಯೋಜನೆಗಳನ್ನು ಪ್ರಸ್ತಾಪ ಮಾಡಲಾಗಿದೆ. ಅನ್ನಭಾಗ್ಯ, ವಸತಿ ಭಾಗ್ಯ, ಕೌಶಲ್ಯ ಕರ್ನಾಟಕ, ಕ್ಷೀರಧಾರೆ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್, ಕನ್ನಡಕ್ಕೆ ಕೊಡುಗೆ, ಹಸಿವು ಮುಕ್ತ ಕರ್ನಾಟಕದ ಕನಸು, ಬಡವರಿಗೆ ಉದ್ಯೋಗದ ಕನಸು, ಕರ್ನಾಟಕದ ಭಗೀರಥ, ಕೃಷಿರಾಮಯ್ಯನಾಗಿ ಸಿದ್ದು ಕನಸು, ಸಿದ್ದು ಆರೋಗ್ಯ ಕನಸು, ಗುಡಿಸಲು ಮುಕ್ತ ಕರ್ನಾಟಕ ಕನಸು ಎಂಬಿತ್ಯಾದಿ ಶೀರ್ಷಿಕೆ ಅಡಿ ಸಿದ್ದರಾಮಯ್ಯ ಅವರ ಸಾಧನೆಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | Siddaramaiah Vs BJP : ಕಾಂಗ್ರೆಸ್‌ನಿಂದ ಬಿಜೆಪಿ ಕಳ್ಳಮಾರ್ಗ ಪುಸ್ತಕ; ಸಿದ್ದು ವಿರೋಧಿ ಪುಸ್ತಕಕ್ಕೆ ಕೌಂಟರ್