Site icon Vistara News

Siddaramaiah Vs BJP | ಪುಸ್ತಕ ಬಿಡುಗಡೆ ಜತೆಗೇ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಪೋಸ್ಟರ್‌ ವಾರ್‌

siddaramaiah poster front

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಪ್ರಬಲ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಸೈದ್ಧಾಂತಿಕ ಹೋರಾಟಕ್ಕೆ ಮುಂದಾಗಿರುವ ಬಿಜೆಪಿ ಸೋಮವಾರ ʻಸಿದ್ದು ನಿಜ ಕನಸುಗಳುʼ ಎಂಬ ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ. ಇದರ ವಿರುದ್ಧ ಕಾಂಗ್ರೆಸ್‌ ಕೂಡಾ ಬುಕ್‌ ವಾರ್‌ ನಡೆಸುತ್ತಿದೆ. ಒಂದು ಕಡೆ ಸಿದ್ದರಾಮಯ್ಯ ಅವರ ಸಾಧನೆಗೆ ಸಂಬಂಧಿಸಿದ ಪುಸ್ತಕವೊಂದನ್ನು ಅತ್ಯಂತ ತ್ವರಿತ ಗತಿಯಲ್ಲಿ ಸಿದ್ಧಪಡಿಸಿರುವ ಕಾಂಗ್ರೆಸ್‌ ಸೋಮವಾರವೇ ಅದನ್ನು ಬಿಡುಗಡೆ ಮಾಡುವ ಪ್ಲ್ಯಾನ್‌ನಲ್ಲಿದೆ. ಅದರ ಜತೆಗೆ ಬಿಜೆಪಿಯ ಕಳ್ಳ ಮಾರ್ಗಗಳು ಎಂಬ ಇನ್ನೊಂದು ಪುಸ್ತಕವನ್ನು ಕಾಂಗ್ರೆಸ್‌ ಸಿದ್ಧಪಡಿಸಿದೆ. ಬಿಜೆಪಿಯಂತೆಯೇ ಇದು ಸಂಪುಟ ೧, ಸಂಪುಟ ೨ ಎಂಬ ಮಾದರಿಯಲ್ಲಿ ರೂಪುಗೊಂಡಿದೆ.

ಇಷ್ಟೆಲ್ಲದರ ನಡುವೆ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಪೋಸ್ಟರ್‌ ವಾರ್‌ ಒಂದನ್ನು ಶುರು ಮಾಡಿದೆ. ಸಿದ್ದರಾಮಯ್ಯ ಟೀಮ್‌ ಬೆಳಗ್ಗೆ ಬಿಜೆಪಿ ವಿರುದ್ಧ ಕೆಲವು ಪೋಸ್ಟರ್‌ಗಳನ್ನು ಬಿಟ್ಟ ಬೆನ್ನಿಗೇ ಸಿದ್ದರಾಮಯ್ಯ ವಿರುದ್ಧ ಸುಮಾರು ೨೦ ಪೋಸ್ಟರ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ ಅವರು ಕನಸು ಕಾಣುವಂತೆ ಚಿತ್ರಿಸಲಾಗಿದ್ದು, ಟಿಪ್ಪು ಪರವಾಗಿ, ಅಲ್ಪಸಂಖ್ಯಾತರ ಪರವಾಗಿ ಭಯೋತ್ಪಾದಕರ ಪರವಾಗಿ ಏನೆಲ್ಲ ಚಟುವಟಿಕೆಗಳನ್ನು ನಡೆಸಲು ಪ್ಲ್ಯಾನ್‌ ಮಾಡುತ್ತಿದೆ ಎನ್ನುವುದನ್ನು ಚಿತ್ರಿಸಲಾಗಿದೆ.

ಸಿದ್ದರಾಮಯ್ಯ ನಿಜ ಕನಸುಗಳು, ಸಿದ್ದರಾಮಯ್ಯ ಸಿಎಂ ಆದರೆ ಎಂಬ ಟ್ಯಾಗ್‌ಲೈನ್‌ ಮೂಲಕ ನಾನಾ ರೀತಿಯಲ್ಲಿ ಸಿದ್ದು ಮತ್ತು ಕಾಂಗ್ರೆಸ್‌ನ್ನು ಕಾಲೆಳೆಯಲಾಗಿದೆ.

ಏನೇನಿದೆ ಪೋಸ್ಟರ್‌ನಲ್ಲಿ?
– ನಾನು ಸಿಎಂ ಆದ್ರೆ ಭಾನುವಾರ ಬದಲು ಶುಕ್ರವಾರ ರಜಾ ದಿನ!
– ನಾನು ಸಿಎಂ ಆದರೆ ಮುಸ್ಲಿಂ ಗಂಡಸರು ಎರಡು ಮದುವೆಯಾದರೆ ಲವ್‌ ಜಿಹಾದ್‌ ಫಂಡ್‌ನಿಂದ ಅನುದಾನ ಬಿಡುಗಡೆ, ಐದು ಮಕ್ಕಳ ಪಡೆದವರಿಗೆ ವಿಶೇಷ ಅನುದಾನ
-ನಾನು ಸಿಎಂ ಆದ್ರೆ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಬಜೆಟ್‌ ಮಂಡನೆ
– ನಾನು ಸಿಎಂ ಆದರೆ ರಾಜ್ಯದಲ್ಲಿ ಹಲಾಲ್‌ ಕಟ್‌ ಕಡ್ಡಾಯ
– ನಾನು ಸಿಎಂ ಆದರೆ ಕರ್ನಾಟಕದಲ್ಲಿ ಷರಿಯತ್‌ ಕಾನೂನು ಜಾರಿ
– ನಾನು ಸಿಎಂ ಆದರೆ ಪಾಕಿಸ್ತಾನ ಜಿಂದಾಬಾದ್‌ ಎಂದದವರಿಗೆ ಸರಕಾರದಿಂದ ರಕ್ಷಣೆ
– ನಾನು ಸಿಎಂ ಅದರೆ ಟಿಪ್ಪು ಜಯಂತಿ, ಟಿಪ್ಪು ಪ್ರತಿಮೆ, ಟಿಪ್ಪು ವಿವಿ ಸ್ಥಾಪನೆ


-ನಾನು ಸಿಎಂ ಆದರೆ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ
-ನಾನು ಸಿಎಂ ಆದರೆ ಮೊಹಮ್ಮದ್‌ ನಲಪಾಡ್‌ಗೆ ಗೃಹ ಇಲಾಖೆಯ ಜವಾಬ್ದಾರಿ
– ನಾನು ಸಿಎಂ ಆದರೆ ಶಾದಿ ಭಾಗ್ಯದಲ್ಲಿ ಮದುವೆಯಾಗುವ ಗಂಡಿಗೆ ಉಚಿತ ಫ್ರಿಜ್‌
– ನಾನು ಸಿಎಂ ಆದರೆ ಪಿಎಫ್‌ಐ ತರಬೇತಿ ಹೊಂದಿದವರಿಗೆ ಪೊಲೀಸ್‌ ಇಲಾಖೆಯಲ್ಲಿ ಮೀಸಲು
– ನಾನು ಸಿಎಂ ಆದರೆ ಕುಕ್ಕರ್‌ ಖರೀದಿಗೆ ಸಬ್ಸಿಡಿ
-ನಾನು ಸಿಎಂ ಆದರೆ ಸುಲಭ ಮತಾಂತರಕ್ಕೆ ಸರ್ಕಾರದ ವತಿಯಿಂದ ಏಕ ಗವಾಕ್ಷಿ ಯೋಜನೆ
-ನಾನು ಸಿಎಂ ಆದರೆ ಹಣೆಗೆ ಕುಂಕುಮ ಹಚ್ಚುವವರಿಗೆ ನಿಷೇಧ
– ನಾನು ಸಿಎಂ ಆದರೆ ದೇವಸ್ಥಾನದಲ್ಲಿ ಗಂಟೆ ಹೊಡೆಯೋಕೆ ೫೦೦ ರೂ. ಶುಲ್ಕ
– ನಾನು ಸಿಎಂ ಆದರೆ ಕುವೆಂಪು ರಸ್ತೆ ಮತ್ತು ನಗರಗಳಿಗೆ ರಾಹುಲ್‌ ಗಾಂಧಿಯ ಹೆಸರು ಮರು ನಾಮಕರಣ
– ನಾನು ಸಿಎಂ ಆದರೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದು ಕಡ್ಡಾಯ, ಹಿಂದು ಹುಡುಗಿಯರಿಗೂ ಅನ್ವಯ

ಇದನ್ನೂ ಓದಿ | Siddu Nijakanasugalu : ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಪಕ್ಕಾ; ಕಾನೂನು ಕ್ರಮದ ಬಗ್ಗೆ ನೋಡ್ತೀನಿ ಅಂದ್ರು ಸಿದ್ದರಾಮಯ್ಯ

Exit mobile version