Site icon Vistara News

ಸಿದ್ದರಾಮೋತ್ಸವಕ್ಕೆ ತೆರಳಿ ಅಪಘಾತದಲ್ಲಿ ಮೃತಪಟ್ಟ ಸ್ವಾಮಿಗೌಡ ಕುಟುಂಬಕ್ಕೆ ಸಿದ್ದರಾಮಯ್ಯ ಸಾಂತ್ವನ

siddaramaiah

ಮಂಡ್ಯ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಭಾಗವಹಿಸಿ ಮನೆಗೆ ಮರಳುವ ವೇಳೆ ನಡೆದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದ ಪಾಂಡವಪುರ ತಾಲೂಕಿನ ಅರಳಕುಪ್ಪೆಯ ಸ್ವಾಮಿ ಗೌಡ ಅವರ ನಿವಾಸಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು. ಮತ್ತು ಎರಡು ಲಕ್ಷ ರೂಪಾಯಿ ಪರಿಹಾರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ʻʻನನ್ನ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಸ್ವಾಮಿಗೌಡ ಬಂದಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಇಲ್ಲಿಗೆ ಬರುವ ಬಸ್‌ನಲ್ಲಿ ಬಂದಿಲ್ಲ. ಆ ಮೇಲೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಅವರು ಅಭಿಮಾನದಿಂದ ದಾವಣಗೆರೆಗೆ ಬಂದಿದ್ದರು. ನಾನು ಅವರ ಅಭಿಮಾನಕ್ಕೆ ಚಿರ ಋಣಿಯಾಗಿದ್ದಾನೆʼʼ ಎಂದರು.

ʻʻಇದು ದುರದೃಷ್ಟಕರ ಸಾವು. ಹೋಗಿದ್ದ ಬಸ್‌ನಲ್ಲೇ ಮರಳುತ್ತಿದ್ದರೆ ಸಾವು ಸಂಭವಿಸುತ್ತಿರಲಿಲ್ಲವೋ ಏನೋ. ಅವರಿಗೆ ಪತ್ನಿ ಮತ್ತು ಮಗಳಿದ್ದಾರೆ. ಅವರಿಗೆ ನಾವು ನೆರವು ನೀಡಬೇಕು, ಸಾಂತ್ವನ ಹೇಳಬೇಕು. ಆ ಕಾರಣಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಶಾಂತಿ ಸಿಗಲಿʼʼ ಎಂದು ಸಿದ್ದರಾಮಯ್ಯ ಹೇಳಿದರು.

ಮೃತನ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ
ಅರಳಕುಪ್ಪೆ ಗ್ರಾಮದ ಸ್ವಾಮಿಗೌಡ ಕುಟುಂಬಕ್ಕೆ ಸಿದ್ದರಾಮಯ್ಯ ಅವರು 2 ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡಿದರು.

Exit mobile version