Site icon Vistara News

Siddheshwar Swamiji | ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ, ಮಠದತ್ತ ಭಕ್ತರ ದಂಡು

Siddheshwar Swamiji

ವಿಜಯಪುರ: ಸಿದ್ದೇಶ್ವರ ಶ್ರೀಗಳಿಗೆ ಅನಾರೋಗ್ಯ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಇಂದು ಮಠದತ್ತ ಮತ್ತಷ್ಟು ಭಕ್ತರ ದಂಡು ಹೆಚ್ಚಿದೆ. ಬೆಳಗಿನಿಂದಲೇ ಶ್ರೀಮಠದತ್ತ ಭಕ್ತಾದಿಗಳು ಧಾವಿಸುತ್ತಿದ್ದಾರೆ. ಮಠದ ಒಳಗೆ ಹಾಗೂ ಹೊರಗೆ ನಾಲ್ಕು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ವಿಯಜಪುರ ನಗರಲ್ಲಿರುವ ಸಿದ್ದೇಶ್ವರ ಶ್ರೀಗಳ ಜ್ಞಾನಯೋಗಾಶ್ರಮದಲ್ಲಿ ಭಕ್ತಾದಿಗಳು ಶ್ರೀಗಳ ದರ್ಶನ ಪಡೆಯಲು ಧಾವಿಸಿ ಬಂದಿದ್ದಾರೆ. ಶ್ರೀಗಳ ಆರೋಗ್ಯದ ಕುರಿತು ಭಕ್ತರಲ್ಲಿ ಆತಂಕ ಮೂಡಿದೆ. ಇಂದು ಮಧ್ಯಾಹ್ನ ಶ್ರೀಮಠಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಹಲವು ಗಣ್ಯರು ಕೂಡ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಅಲರ್ಟ್ ಆಗಿದ್ದಾರೆ. ೨ ಎಸ್ಪಿ, ೫ ಡಿಎಸ್ಪಿ, ೨೦ ಸಿಪಿಐ, ೫೦ ಪಿಎಸ್ಐ, ೧೦೦ ಎಎಸ್ಐ ಸೇರಿದಂತೆ ೧೦೦೦ ಪೊಲೀಸರ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ; ವೈದ್ಯರಿಂದ 3ನೇ ಹೆಲ್ತ್ ಬುಲೆಟಿನ್

Exit mobile version