ಬೆಂಗಳೂರು: ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ ಅವರು 73645 ಪಡೆದುಕೊಂಡು ಬಿಜೆಪಿಯ ವಿರುದ್ಧ ಜಯ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ದ 21942 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಜೆಡಿಎಸ್‌ನ ವೆಂಕಟರಾವ್ ನಾಡಗೌಡ 43461 ಮತಗಳು ಸಂದಿವೆ. ಬಿಜೆಪಿಯ ಕೆ ಕರಿಯಪ್ಪ ಅವರಿಗೆ 51703 ಮತಗಳು ಸಂದಿವೆ(Sindhanur Election Results).
2023ರ ಚುನಾವಣೆಯ ಅಭ್ಯರ್ಥಿಗಳು
ಈ ಬಾರಿ ಕಾಂಗ್ರೆಸ್‌ನಿಂದ ಹಂಪನಗೌಡ ಬಾದರ್ಲಿ, ಬಿಜೆಪಿಯಿಂದ ಕೆ ಕರಿಯಪ್ಪ ಹಾಗೂ ಜೆಡಿಎಸ್‌ನಿಂದ ವೆಂಕಟರಾವ್ ನಾಡಗೌಡರು ಕಣದಲ್ಲಿದ್ದರು.
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ಹೈದ್ರಾಬಾದ್ ಕರ್ನಾಟಕದ ಪ್ರಮುಖ ಕ್ಷೇತ್ರಗಳ ಪೈಕಿ ರಾಯಚೂರು ಜಿಲ್ಲೆಯ ಸಿಂಧನೂರು ಒಂದಾಗಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಅವರು 71,514 ಮತಗಳನ್ನು ಪಡೆದುಕೊಂಡಿದ್ದರು. ಇವರ ಪ್ರತಿಸ್ಪರ್ಧಿ ಬಾದರ್ಲಿ ಹಂಪನಗೌಡ ಅವರು 69,917 ಮತಗಳನ್ನು ಪಡೆದುಕೊಂಡು 1597 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಬಿಜೆಪಿಯ ಕೊಳ್ಳ ಶೇಷಗಿರಿರಾವ್ ಅವರು 14,795 ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನದಲ್ಲಿದ್ದರು. ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೊಮ್ಮೆ ಗೆದ್ದಿಲ್ಲ.