Site icon Vistara News

Mysore Dasara : ಅಪ್ಪನ ಹೆಗಲ ಮೇಲೆ ಕೂತು ದಸರಾ ನೋಡ್ತಿದ್ದೆ; ಸಿದ್ದರಾಮಯ್ಯ ನೆನಪು

CM Siddaramaiah invited to Mysore Dasara

ಬೆಂಗಳೂರು: ʻʻದಸರಾ ನನ್ನೂರ ಹಬ್ಬ. ನಾನು ಬಾಲ್ಯದಲ್ಲಿ ಅಪ್ಪನ ಹೆಗಲು ಮೇಲೆ ಕೂತು ದಸರಾ (Mysore Dasara) ನೋಡುತ್ತಿದ್ದೆ, ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತದ್ದು ನನ್ನ ಸೌಭಾಗ್ಯʼʼ-ಹೀಗೆಂದು ಖುಷಿ ಹಂಚಿಕೊಂಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು.

ಅಕ್ಟೋಬರ್‌ 15ರಿಂದ 24ರವರೆಗೆ ಮೈಸೂರಿನಲ್ಲಿ ನಡೆಯುತ್ತಿರುವ ನಾಡಿನ ಪ್ರಖ್ಯಾತ ದಸರಾ ವೈಭವಕ್ಕೆ ತಮ್ಮನ್ನು ಆಹ್ವಾನಿಸಲು ಅಧಿಕಾರಿಗಳ ತಂಡ ಆಗಮಿಸಿದ ವೇಳೆ ಸಿದ್ದರಾಮಯ್ಯ ಈ ಮಾತು ಹೇಳಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪ ಅವರ ನೇತೃತ್ವದ ನಿಯೋಗವು ಬುಧವಾರ ವಿಶ್ವ ವಿಖ್ಯಾತ ದಸರಾದ ಆಹ್ವಾನಪತ್ರಿಕೆ ನೀಡಿದ ಸಂದರ್ಭದಲ್ಲಿ ಅತ್ಯಂತ ಸಂತೋಷದಿಂದ ಅವರ ಆಹ್ವಾನ ಸ್ವೀಕರಿಸಿ, ಆಗಮಿಸುವುದಾಗಿ ತಿಳಿಸಿದೆ ಎಂದು ಸಿದ್ದರಾಮಯ್ಯ ಅವರು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಉದ್ಘಾಟಕ ಹಂಸಲೇಖ ಅವರಿಗೂ ಆಹ್ವಾನ

ಮೈಸೂರು ಜಿಲ್ಲಾಧಿಕಾರಿ ರಾಜೇಂದ್ರ, ಪೊಲೀಸ್ ಕಮಿಷನರ್ ಬಿ.ರಮೇಶ್ ಅವರ ತಂಡ ಮೈಸೂರು ದಸರಾ ಉದ್ಘಾಟನೆಗೆ ನಿಯೋಜಿತರಾಗಿರುವ ನಾದ ಬ್ರಹ್ಮ ಹಂಸಲೇಖ (Nadabrahma Hamsalekha) ಅವರಿಗೂ ಆಹ್ವಾನ ಪತ್ರಿಕೆಯನ್ನು ನೀಡಿ ಗೌರವಪೂರ್ವಕವಾಗಿ ಆಹ್ವಾನ ನೀಡಿತು.

ಹಂಸಲೇಖ ಅವರ ಮನೆಗೆ ಭೇಟಿ ನೀಡಿದ ತಂಡ ಅವರಿಗೆ ಮೈಸೂರು ಪೇಟ ತೊಡಿಸಿ ಆಹ್ವಾನ ಪತ್ರಿಕೆ ನೀಡಿ ಆಹ್ವಾ ನೀಡಿತು. ಕರ್ನಾಟಕ ಸರ್ಕಾರದ ಪ್ರತಿನಿಧಿಗಳಾಗಿ ನಾವು ಬಂದಿದ್ದೇವೆ. ಹಂಸಲೇಖ ಅವರಿಗೆ ಆಹ್ವಾನ ನೀಡಿದ್ದೇವೆ. ಚಾಮುಂಡೇಶ್ವರಿ ದೇವಸ್ಥಾನದ ಬಳಿ ಉದ್ಘಾಟನೆ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರಾಜೇಂದ್ರ ಮಾಹಿತಿ ನೀಡದರು.

ವೃತ್ತಿಜೀವನ ಪರಿಪೂರ್ಣ ಎಂದ ಹಂಸಲೇಖ

ಆಮಂತ್ರಣ ಪತ್ರಿಕೆಯನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ ಹಂಸಲೇಖ ಅವರು, ಇದು ಚಂದನವನಕ್ಕೆ ಸಿಕ್ಕ ದೊಡ್ಡ ಗೌರವ. ನನ್ನ ವೃತ್ತಿಜೀವನ ಪರಿಪೂರ್ಣವಾಯಿತು ಎಂದುಹೇಳಿದರು.

ಇದನ್ನೂ ಓದಿ: Mahisha Dasara : ಮಹಿಷ ದಸರಾವೂ ಇಲ್ಲ, ಚಾಮುಂಡಿ ಚಲೋವೂ ಇಲ್ಲ; ಎರಡಕ್ಕೂ ಸರ್ಕಾರ ಬ್ರೇಕ್‌

ನಾಲ್ವಡಿ ಕೊಡುಗೆಗಳ ಬಗ್ಗೆ ಹಾಡು ಬರೆದ ಹಂಸಲೇಖ

ಈ ನಡುವೆ, ಹಂಸಲೇಖ ಅವರು ನಾಲ್ವಡಿ ಕೃಷ್ಣದೇವರಾಯರ ಕೊಡುಗೆಗಳ ಬಗ್ಗೆ ಹಾಡು ಬರೆದಿದ್ದಾರಂತೆ. ನಾಲ್ವಡಿಯರ ಕಥೆ ಹೇಳುವ ಮಾದರಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತೇವೆ. 300 ಜನ ವಾದ್ಯ ಸಿಬ್ಬಂದಿಗಳನ್ನು ಒಳಗೊಂಡ ಕಾರ್ಯಕ್ರಮ ಇದಾಗಿರುತ್ತದೆ. ಅಕ್ಟೋಬರ್‌ 22ರಂದು ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

Exit mobile version