Site icon Vistara News

Snake Bite: ಚಿಕ್ಕೋಡಿ ಬಳಿ ಹಾವು ಕಚ್ಚಿ ಎರಡೂವರೆ ವರ್ಷದ ಬಾಲಕಿ ಸಾವು

Snake Bite

ಚಿಕ್ಕೋಡಿ: ಹಾವು ಕಚ್ಚಿ ಎರಡೂವರೆ ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ (Snake Bite) ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ. ಮನೆ ಹೊರಗೆ ಆಟ ಆಡುತ್ತಿದ್ದಾಗ ಬಾಲಕಿಗೆ ಹಾವು ಕಚ್ಚಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜವಾಗಿಲ್ಲ.

ಹಾವು ಕಚ್ಚಿದ ಪರಿಣಾಮ 2.6 ವರ್ಷದ ತ್ರಿವೇಣಿ ಮೃತಪಟ್ಟಿದ್ದಾಳೆ. ಮನೆ ಹೊರಗೆ ಆಟವಾಡುತ್ತಿದ್ದಾಗ ಬಾಲಕಿಗೆ ಎರಡು ಬಾರಿ ಹಾವು ಕಚ್ಚಿದೆ. ಇದರಿಂದ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಚಿಕ್ಕೋಡಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ತ್ರಿವೇಣಿ ಕೊನೆಯುಸಿರೆಳೆದಿದ್ದಾಳೆ.

ಇದನ್ನೂ ಓದಿ | Murder Case: ಚಿಕ್ಕಬಳ್ಳಾಪುರದಲ್ಲಿ 2ನೇ ಪತ್ನಿ ಕೊಲೆಗೈದ ಪತಿ; ಮುಂಡರಗಿ ನಡುರಸ್ತೆಯಲ್ಲೇ ಮಚ್ಚಿನಿಂದ ಪತ್ನಿ ಮೇಲೆ ಹಲ್ಲೆ!

Kolar News: ಕ್ವಾರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

koppal murder case and self harming

ಕೋಲಾರ: ಕಲ್ಲು ಕ್ವಾರಿಯಲ್ಲಿ ಈಜುಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಮಲ್ಯಪ್ಪನಹಳ್ಳಿ ಬಳಿ ನಡೆದಿದೆ. ಬೇಸಿಗೆ ಬಿಸಿ ತಾಳಲಾರದೆ ಯುವಕರ ಜತೆ ಈಜಲು ಹೋಗಿದ್ದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ಮನು ಕುಮಾರ್ (14), ಪವನ್ ಕುಮಾರ್ (18) ಮೃತರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪತ್ನಿಯನ್ನು ಕೊಂದ, ತಾನೂ ನೇಣು ಹಾಕಿಕೊಂಡ

koppal murder case and self harming

ಕೊಪ್ಪಳ: ಪತ್ನಿಯನ್ನು ಹೊಡೆದು ಕೊಲೆ ಮಾಡಿದ (murder case) ಪತಿ ಕೊಲೆಯ (husband killed wife) ನಂತರ ತಾನು ನೇಣು (self harming) ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬರ್ಬರ ಘಟನೆ ಕೊಪ್ಪಳ (koppal news) ತಾಲೂಕಿನ ಬುಡಶೆಟ್ನಾಳ ಗ್ರಾಮದಲ್ಲಿ ನಡೆದಿದೆ.

ಬುಡಶೆಟ್ನಾಳದ ನಿಂಗಪ್ಪ (45) ಪತ್ನಿಯ ಕೊಲೆಗಡುಕ ಹಾಗೂ ಆತ್ಮಹತ್ಯೆ ಮಾಡಿಕೊಂಡಾತ. ಪತ್ನಿ ಲಕ್ಷ್ಮವ್ವ (40) ಗಂಡನಿಂದ ಕೊಲೆಯಾಗಿರುವವಳು. ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ನಿಂಗಪ್ಪ, ಪದೇ ಪದೆ ಮದ್ಯ ಸೇವಿಸಿ ಬಂದು ಪತ್ನಿಯ ಜೊತೆಗೆ ವಿನಾಕಾರಣ ಜಗಳ ತೆಗೆಯುತ್ತಿದ್ದ ಎಂದು ಆಸುಪಾಸಿನವರು ತಿಳಿಸಿದ್ದಾರೆ.

ಹೊಲದಲ್ಲೇ ಘಟನೆ ನಡೆದಿದೆ. ಹೊಲದಲ್ಲೇ ಹೆಂಡತಿಯನ್ನು ಕೊಂದು ಹಾಕಿದ ಈತ, ಅಲ್ಲೇ ಇದ್ದ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾನೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬೈಕಿಗೆ ಟಾಟಾ ಏಸ್‌ ಡಿಕ್ಕಿ; ಇಬ್ಬರ ಸಾವು

ಬೆಂಗಳೂರು: ಬೆಂಗಳೂರಿನ ರಾಜಗೋಪಾಲನಗರ ಬಳಿಯ ಹೆಗ್ಗನಹಳ್ಳಿ ಬಳಿ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಟಾಟಾ ಏಸ್‌ (Road accident) ಡಿಕ್ಕಿಯಾಗಿದೆ. ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಟಾಟಾ ಏಸ್‌ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಈ ದುರ್ಘಟನೆಗೆ ಕಾರಣವಾಗಿದೆ. ನಿನ್ನೆ ರಾತ್ರಿ 11 ಘಂಟೆಯ ಸುಮಾರಿಗೆ ಅಪಘಾತ ನಡೆದಿದ್ದು, ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಕಾಲುವೆಗೆ ಬಿದ್ದ ಬೈಕ್‌, ಸವಾರ ಸಾವು

ಕಾರವಾರ: ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬೈಕ್ ಬಿದ್ದ ಪರಿಣಾಮ ಒಬ್ಬ ಸ್ಥಳದಲ್ಲೇ ಸತ್ತಿದ್ದು, ಇನ್ನೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಯಲ್ಲಾಪುರ ರಸ್ತೆಯ ಪಂಚವಟಿ ಕ್ರಾಸ್‌ ಬಳಿ ಘಟನೆ ನಡೆದಿದೆ. ಸಂದೀಪ ಛಲವಾದಿ (24) ಮೃತ ಬೈಕ್ ಸವಾರ. ಸುಭಾಷ್ ದೇವಾಡಿಗ (26) ಗಂಭೀರ ಗಾಯಗೊಂಡವನು. ಯಲ್ಲಾಪುರದ ಭರತ್ನಳ್ಳಿ ಗ್ರಾಮದ ಈ ಯುವಕರು ಸ್ನೇಹಿತನನ್ನು ಶಿರಸಿ ಬಸ್‌ ನಿಲ್ದಾಣಕ್ಕೆ ಬಿಟ್ಟು ವಾಪಸ್ಸಾಗುವಾಗ ಅಪಘಾತ ನಡೆದಿದೆ. ಇಳಿಜಾರಿನ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸುಮಾರು 20 ಅಡಿ ಆಳದ ರಾಜಕಾಲುವೆಗೆ ಬಿದ್ದಿದೆ.

ಇದನ್ನೂ ಓದಿ | Murder Case: ಮಂಡ್ಯದ ಬೀದಿಯಲ್ಲಿ ರೌಡಿಶೀಟರ್‌ ಕೊಚ್ಚಿ ಕೊಲೆ

ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಯಿಂದ ಕಾಲುವೆಗೆ ಬಿದ್ದವರ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯಿತು. ಗಂಭೀರ ಗಾಯಗೊಂಡಿದ್ದ ಸವಾರನನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version