ಬೆಂಗಳೂರು: ಮಳೆ ಜಾಸ್ತಿಯಾಗಿದೆ ಎಂದು ಚಪ್ಪಲಿಗಳನ್ನು ಸ್ಟ್ಯಾಂಡ್‌ನಲ್ಲಿಟ್ಟು ನಿತ್ಯವೂ ಶೂಗಳನ್ನು ಧರಿಸುತ್ತೇವೆ. ಯಾವಾಗಲೋ ಒಂದು ದಿನ ಚಪ್ಪಲಿ ಹಾಕುವ ಉಮೇದಿ ಬರುತ್ತದೆ. ಆಗ ನಾವು ಚಪ್ಪಲಿ ಸ್ಟ್ಯಾಂಡ್ ಎದುರು ಹೋಗಿ, ಸ್ಟೈಲಾಗಿ ಚಪ್ಪಲಿ ಹಾಕಿಕೊಂಡು ಹೋಗುತ್ತೇವೆ. ಹೀಗೆ, ಸ್ಟೈಲ್ ಮಾಡುವ ಮೊದಲು ಇನ್ನುಮುಂದೆ ಹುಷಾರಾಗಿದೆ. ಬೆಂಗಳೂರಿನಲ್ಲಿ (Bengaluru) ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ಚಪ್ಪಲಿಯೊಳಗೂ ನಾಗರ ಹಾವಿನ ಮರಿ (Snake) ಪತ್ತೆಯಾದ ಕಾರಣದಿಂದಾಗಿ ಇನ್ನುಮುಂದೆ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ.
ಹೌದು, ಬೆಂಗಳೂರಿನ ಬಾಣಸವಾಡಿಯ ಒಎಂಬಿಆರ್ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಚಪ್ಪಲಿಯ ಪುಟ್ಟ ಜಾಗದಲ್ಲಿ ನಾಗರಹಾವಿನ ಮರಿಯೊಂದು ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ಚಪ್ಪಲಿಗಳನ್ನು ಸ್ಟ್ಯಾಂಡ್‌ನಲ್ಲಿ ಬಿಟ್ಟಿದ್ದು, ಭಾನುವಾರ ಚಪ್ಪಲಿ ಹೊರತೆಗೆದಾಗ ಅದರೊಳಗೆ ಮರಿ ನಾಗರಹಾವು ಬೆಚ್ಚಗೆ ಕುಳಿತಿದ್ದನ್ನು ನೋಡಿ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಚಪ್ಪಲಿಯೊಳಗೆ ನಾಗರ ಹಾವಿನ ಮರಿ ಪತ್ತೆಯಾದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ
ಚಪ್ಪಲಿಯಲ್ಲಿ ಹಾವು ಕಾಣಿಸಿದ ಕೂಡಲೇ ಮನೆಯ ಸದಸ್ಯರು ದಿಗಿಲುಗೊಂಡಿದ್ದಾರೆ. ಇದಾದ ಕೂಡಲೇ ಬಿಬಿಎಂಪಿ ಉರಗ ರಕ್ಷಣೆ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಉರಗ ರಕ್ಷಣೆ ಸಿಬ್ಬಂದಿಯು ಕೂಡಲೇ ಅವರ ಮನೆಗೆ ತೆರಳಿ ಹಾವನ್ನು ಹೊರಗೆ ತೆಗೆದು, ಕೊಂಡೊಯ್ದಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಹಾವನ್ನು ತೆಗೆದುಕೊಂಡು ಹೋಗಿದ್ದಾರೆ. ಮಳೆಗಾಲ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಶೂ ಹಾಗೂ ಚಪ್ಪಲಿಗಳನ್ನು ಧರಿಸುವಾಗ ಒಮ್ಮೆ ಪರಿಶೀಲಿಸಬೇಕು ಎಂಬುದಾಗಿ ಸಿಬ್ಬಂದಿಯು ಎಚ್ಚರಿಕೆ ನೀಡಿದ್ದಾರೆ.
ಕೆಲ ತಿಂಗಳ ಹಿಂದೆ ಹಾವು ಕಚ್ಚಿ 7 ವರ್ಷದ ಬಾಲಕಿ (Snake Bite) ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ಘಟನೆ ನಡೆದಿತ್ತು. ಟಿ ಹೊಸಹಳ್ಳಿ ಗ್ರಾಮದ ರಾಮಾಂಜಿ ಎನ್ನುವವರ ಮಗಳು ಅನುಷಾ (7) ಮೃತರು. ವಿನೋದಮ್ಮ ಮತ್ತು ರಾಮಾಂಜಿನಪ್ಪ ದಂಪತಿ ಕೋಳೂರು ಗ್ರಾಮದ ತೋಟದ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ಸಂಜೆ ಅನುಷಾಳ ತಂದೆ-ತಾಯಿ ತೋಟದ ಕೆಲಸದಲ್ಲಿ ನಿರಂತರಾಗಿದ್ದರು. ಈ ವೇಳೆ ಮನೆ ಹೊರಗೆ ಆಟ ಆಡುತ್ತಿದ್ದಾಗ ಬಾಲಕಿ ಅನುಷಾಗೆ ಹಾವು ಕಚ್ಚಿತ್ತು.
ಇದನ್ನೂ ಓದಿ: Constables: ಬಿಯರ್ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ಗಳ ಸಾವು; ಮದ್ಯ ಪ್ರಿಯರೇ ಇನ್ನಾದರೂ ಎಚ್ಚರ!