Site icon Vistara News

Viral News : ಮಂಡ್ಯದಲ್ಲಿ ಬೈಕ್‌ ರೈಡಿಂಗ್‌ ವೇಳೆ ಎದ್ದುಬಂದ ಹಾವು; ಗಾಬರಿಯಾಗಿ ಜಿಗಿದೇ ಬಿಟ್ಟ ಸವಾರ

Snake spotted on bike while riding rider jumped Viral News

ಮಂಡ್ಯ: ಹಾವು ಎಂದರೆ ಎಂಥ ಗಟ್ಟಿ ಮನುಷ್ಯನಿಗಾದರೂ ಒಮ್ಮೆ ಭಯ ಕಾಡದೇ ಇರದು. ದಾರಿಯಲ್ಲಿ ಹೋಗುತ್ತಿದ್ದಾಗ ಎದುರಿಗೆ ಕಂಡರೂ ಸಾಕು ಮೈ ಪೂರಾ ಬೆವರಿಬಿಡುತ್ತದೆ. ಅದೇ ಪಕ್ಕವೇ ಬಂದರೆ? ಗಂಟಲು ಒಣಗಿಬಿಡುತ್ತದೆ. ಇಲ್ಲಾಗಿದ್ದೂ ಅದೇ ಕಥೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ತನ್ನದೇ ಲೋಕದಲ್ಲಿ ಬೈಕ್‌ ಚಲಾಯಿಸಿಕೊಂಡು ಬರುತ್ತಿದ್ದರು. ಹೀಗೆ ಹೋಗುತ್ತಿದ್ದಾಗ ಬೈಕಿಂದ ಹಾವೊಂದು ಎದ್ದು ಬಂದಿದೆ. ಅಬ್ಬಾ..! ಹೇಗಾಗಿರಬೇಡ ಆ ವ್ಯಕ್ತಿಗೆ? ಉಸಿರು ನಿಂತಂತೆ ಆಗಿದೆ. ಭಯವೂ ಆಗಿದೆ. ದಿಕ್ಕು ತೋಚದಂತೆ ಆಗಿ ಬೈಕ್‌ನಿಂದ ಜಿಗಿದೇ ಬಿಟ್ಟಿದ್ದಾರೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ.

ಬೈಕ್‌ ಸವಾರಿ ಮಾಡುತ್ತಿದ್ದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ತನ್ನ ಊರಿನಿಂದ ಬೈಕ್‌ನಲ್ಲಿ ಅವರು ಆಗಮಿಸುತ್ತಿದ್ದರು. ಬಹುಶಃ ಅವರು ಹಳ್ಳಿಯಲ್ಲಿ ಬೈಕ್‌ ನಿಲ್ಲಿಸಿದ್ದಾಗಲೇ ಮರಿ ಹಾವೊಂದು ಸೇರಿಕೊಂಡಿತ್ತು. ಆದರೆ, ಅದು ಇವರಿಗೆ ಗೊತ್ತಿರಲಿಲ್ಲ. ಹಾಗೇ ಬೈಕ್‌ ಓಡಿಸಿಕೊಂಡು ಬಂದಿದ್ದಾರೆ.

ಬೈಕ್ ಖಾಸಿಂ ಖಾನ್ ಸರ್ಕಲ್ ಬಳಿ ಬರುತ್ತಿದ್ದಂತೆ ಒಳಗಿದ್ದ ಹಾವಿನ ಮರಿ ನಿಧಾನಕ್ಕೆ ತಲೆ ಎತ್ತಿ ಬಂದಿದೆ. ಇದನ್ನು ನೋಡುತ್ತಿದ್ದಂತೆ ಭಯಗೊಂಡ ಸವಾರ ಕೂಡಲೇ ಬೈಕ್‌ ಬಿಟ್ಟು ಹಾರಿದ್ದಾರೆ. ಹಾವು ಎಂದು ಕಿರುಚಿಕೊಂಡಿದ್ದಾರೆ. ಏಕಾಏಕಿ ಹೀಗಾಗಿದ್ದನ್ನು ಕಂಡ ಸಾರ್ವಜನಿಕರು ಸಹ ಏನಾಗಿದೆಯೋ ಎಂದು ಓಡಿ ಬಂದಿದ್ದಾರೆ. ಆಗ ಬೈಕ್‌ನಲ್ಲಿ ಹಾವಿರುವ ವಿಷಯ ತಿಳಿದಿದೆ.

ಬೈಕ್‌ನಲ್ಲಿರುವ ಹಾವು; ಇಲ್ಲಿದೆ ವಿಡಿಯೊ

ಇದನ್ನೂ ಓದಿ: Video Viral : ಹಾವನ್ನು ಅಟ್ಟಾಡಿಸಿ ಕಚ್ಚಿದ ನಾಯಿ, ಹೆಡೆ ಎತ್ತಿ ವಿಷ ಕಕ್ಕಿದ ನಾಗರ; ಇಲ್ಲಿದೆ ರೋಚಕ ವಿಡಿಯೊ!

ಕೊನೆಗೆ ಎಲ್ಲರೂ ಬೈಕ್‌ನತ್ತ ದಾವಿಸಿ ಬೈಕ್ ಅನ್ನು ನಿಲ್ಲಿಸಿದ್ದಾರೆ. ಹಾವಿನ ಮರಿಯನ್ನು ಹುಡುಕಿ, ಅದನ್ನು ಹೊರಗೆ ತಗೆದಿದ್ದಾರೆ. ಬಳಿಕ ಸುರಕ್ಷಿತವಾಗಿ ಹಾವಿನ ಮರಿಯನ್ನು ಚರಂಡಿಗೆ ಬಿಡಲಾಗಿದೆ.

Exit mobile version