ಗದಗ: ಹೆಬ್ಬಾವು ಮನುಷ್ಯರನ್ನು, ಪ್ರಾಣಿಗಳನ್ನು ನುಂಗುವುದನ್ನು ಕೇಳಿದ್ದೇವೆ. ಬೇರೆ ಹಾವುಗಳು ಕೂಡಾ ಇತರ ಪ್ರಾಣಿಗಳನ್ನು ತಿನ್ನುವುದನ್ನು ಗಮನಿಸಿದ್ದೇವೆ. ಆದರೆ, ಹಾವೊಂದು ತನ್ನದೇ ಜಾತಿಯ ಹಾವನ್ನು (Snake world) ನುಂಗುವುದನ್ನು ಹೆಚ್ಚಿನವರು ಗಮನಿಸಿರಲಿಕ್ಕಿಲ್ಲ (Snake eating Snake itself).
ಈ ರೀತಿ ಅಪರೂಪದಲ್ಲಿ ನಡೆಯುವ ವಿದ್ಯಮಾನವೊಂದು ಗದಗ ಜಿಲ್ಲೆಯಲ್ಲಿ (Gadaga News) ನಡೆದಿದೆ. ನಾಗರ ಹಾವೊಂದು ಇನ್ನೊಂದು ನಾಗರ ಹಾವನ್ನು ನುಂಗಿದ ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ.
ಗ್ರಾಮದ ಅನ್ನದಾನೀಶ್ವರ ಪ್ರೌಢಶಾಲೆ ಆವರಣದಲ್ಲಿ ಕಂಡು ಬಂದ ದೃಶ್ಯವನ್ನು ನೋಡಿ ಜನರು ಅಚ್ಚರಿಪಟ್ಟರು. ಹೀಗೂ ಆಗುತ್ತದಾ ಎನ್ನುವ ಸಂಶಯದಿಂದಲೇ ಗಮನಿಸಿದರು. ಕೆಲವರು ಭಯಪಟ್ಟರು.
ನಾಗರಹಾವು ಗಾತ್ರದಲ್ಲಿ ತನ್ನಷ್ಟೇ ದೊಡ್ಡದಿರುವ ಮತ್ತೊಂದು ನಾಗರಹಾವನ್ನು ಸಾಕಷ್ಟು ನುಂಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಮತ್ತು ಅದು ಹೆಚ್ಚು ಹೆಚ್ಚು ಭಾಗವನ್ನು ನುಂಗಿಕೊಳ್ಳುತ್ತಾ ಸಾಗುತ್ತಿತ್ತು.
ಈ ದೃಶ್ಯವನ್ನು ನೋಡಲು ನೂರಾರು ಮಂದಿ ಮಂದಿ ಅಲ್ಲಿ ನೆರೆದಿದ್ದರು. ಕೆಲವರು ಅದನ್ನು ಓಡಿಸಲು ಪ್ರಯತ್ನ ಮಾಡಿದರಾದರೂ ಕೆಲವರು ಹಾಗೆಲ್ಲ ಮಾಡುವುದು ಬೇಡ ಎಂದರು. ಆದರೆ, ನುಂಗಲಾದ ಹಾವು ಹೆಚ್ಚು ಪ್ರತಿರೋಧ ತೋರಿಸುತ್ತಿದ್ದಂತೆ ಕಾಣಲಿಲ್ಲ. ಒಂದೋ ಅದು ಮೊದಲೇ ಸತ್ತಿರುವ ಸಾಧ್ಯತೆ ಇದೆ. ಇಲ್ಲವೇ ಅದು ನುಂಗಿದ ಬಳಿಕ ಉಸಿರು ಕಳೆದುಕೊಂಡಿರುವ ಸಾಧ್ಯತೆಯೂ ಇದೆ.
ಕೆಲವರು ನಾಗರ ಹಾವು ಯಾವುದೇ ಆಹಾರ ಸಿಗದೆ ಈ ರೀತಿಯಾಗಿ ತನ್ನದೇ ಜಾತಿಯ ಹಾವನ್ನು ತಿಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ವಿದ್ಯಮಾನಗಳು ನಡೆಯುತ್ತವೆ ಎಂದು ಉರಗ ತಜ್ಞರೂ ಹೇಳುತ್ತಾರೆ. ಆದರೆ, ಈ ಘಟನೆಯಲ್ಲಿ ನಿಜ ಸಂಗತಿ ಏನೆಂದು ಗೊತ್ತಿಲ್ಲ. ಸದ್ಯ ಹಾವು ನುಂಗುವ ದೃಶ್ಯ ಸ್ಥಳಿಯರ ಮೊಬೈಲ್‌ನಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ : Snake Bite : ಹಾವಿನ ದ್ವೇಷ 12 ವರುಷ! ಕಾಟ ಕೊಟ್ಟಿದ್ದ ಯುವಕನನ್ನು ಕಚ್ಚಿ ಸಾಯಿಸಿತೇ ನಾಗರಹಾವು?
ಹಾವು ಹಾವನ್ನೇ ತಿನ್ನುತ್ತಿರುವ ದೃಶ್ಯಗಳು ಇಲ್ಲಿವೆ
ಹಾವು ಹಾವನ್ನು ತಿನ್ನುವುದು ವಿಶೇಷವೇನಲ್ಲ!
ನಿಜವೆಂದರೆ ಹಾವುಗಳು ತಮ್ಮದೇ ತಳಿಯ ಬೇರೆ ಹಾವುಗಳನ್ನು ತಿನ್ನುವುದು ವಿಶೇಷವೇನಲ್ಲ. ಆಗಾಗ ಇಂಥ ಘಟನೆಗಳು ನಡೆಯುತ್ತವೆ. ಯಾರಾದರೂ ಗಮನಿಸಿ ವಿಡಿಯೊ ಮಾಡಿದಾಗ ಮಾತ್ರ ಇವು ಬೆಳಕಿಗೆ ಬರುತ್ತವೆ.
ನಿಜವೆಂದರೆ, ಕಾಳಿಂಗ ಸರ್ಪದ ಪ್ರಧಾನ ಆಹಾರವೇ ಕೇರೆ ಹಾವು. ಅದು ನಾಗರ ಹಾವನ್ನು ಕೂಡಾ ತಿನ್ನುತ್ತದೆ.
ಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳ ಲೋಕದಲ್ಲಿ ಇಂಥ ಅಚ್ಚರಿಗಳು ನಡೆಯುತ್ತಲೇ ಇರುತ್ತವೆ. ಆದರೆ, ನಮಗೆ ಅದರ ತಿಳುವಳಿಕೆ ಇರುವುದಿಲ್ಲ.