Site icon Vistara News

ಬೆಳಗಾವಿ: ಟಾಕಳೆ ಬೆನ್ನು ಹತ್ತಿದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಪೊಲೀಸರ ವಶಕ್ಕೆ

ನವ್ಯಶ್ರೀ

ಬೆಳಗಾವಿ: ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಮೇಲೆ ಅತ್ಯಾಚಾರ ಆರೋಪ ಹೊರಿಸಿರುವ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್‌ಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ವಾತಂತ್ರ್ಯ ಅಮೃತಮಹೋತ್ಸವ ಧ್ವಜಾರೋಹಣ ವೇಳೆ ಪ್ರತಿಭಟನೆಗೆ ಉದ್ದೇಶಿಸಿದ್ದ ನವ್ಯಶ್ರೀಯನ್ನು ಬೆಳಗಾವಿ ರಾಮದೇವ ಹೋಟೆಲ್‌ ಬಳಿ ವಶಕ್ಕೆ ಪಡೆಯಲಾಗಿದೆ. ಟಾಕಳೆ ಬಂಧನ ಒತ್ತಾಯಿಸಿ ಆಕೆ ಜಿಲ್ಲಾ ಕ್ರೀಡಾಂಗಣದಲ್ಲೇ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೆದು ಪ್ರತಿಭಟನೆಗೆ ಮುಂದಾಗಿದ್ದಳು.

ರಾಜಕುಮಾರ ಟಾಕಳೆ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ನವ್ಯಶ್ರೀ ಇಲ್ಲಿನ ಎಪಿಎಂಸಿ ಠಾಣೆಯಲ್ಲಿ ‌ದೂರು ದಾಖಲಿಸಿದ್ದರು. ಸ್ವಾತಂತ್ರ್ಯ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದು ಬೇಡ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ‌ಎಪಿಎಂಸಿ ಠಾಣೆ ಪೊಲೀಸರು ನವ್ಯಶ್ರೀಯನ್ನು ವಶಕ್ಕೆ ಪಡೆದರು. ನವ್ಯಶ್ರೀಯನ್ನು ಬೆಳಗಾವಿ ಮಹಿಳಾ ಠಾಣೆಗೆ ಕರೆದೊಯ್ಯಲಾಗಿದೆ.

ನವ್ಯಶ್ರೀ ಮತ್ತು ಟಾಕಳೆ ನಡುವೆ ಲವ್‌ ಎಂಡ್‌ ಹೇಟ್‌ ಸಂಬಂಧವಿರುವುದು ಕಂಡುಬಂದಿದೆ. ಅವರಿಬ್ಬರು ಆತ್ಮೀಯವಾಗಿರುವ ವಿಚಾರ ಹಿಂದೆಯೇ ಬಯಲಾಗಿತ್ತು. ಈ ನಡುವೆ, ನವ್ಯಶ್ರೀ ಟಾಕಳೆ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಕಾಂಗ್ರೆಸ್‌ ನಾಯಕಿಯಾಗಿಯೂ ಇರುವ ಈಕೆ ಟಾಕಳೆಯೇ ನನ್ನ ಗಂಡ ಎಂದು ಕೂಡಾ ಹೇಳಿಕೊಂಡಿದ್ದಳು. ಈ ನಡುವೆ, ನವ್ಯಶ್ರೀ ತನಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾಳೆ ಎಂದು ಟಾಕಳೆ ಹೇಳಿಕೊಂಡಿದ್ದರು.

Exit mobile version