Site icon Vistara News

Solar Eclipse 2022 | ನೆಹರು ತಾರಾಲಯದಲ್ಲಿಲ್ಲ ಗ್ರಹಣ ವೀಕ್ಷಣೆ; ಯೂಟ್ಯೂಬ್‌ ಸ್ಟ್ರೀಮಿಂಗ್‌ಗಷ್ಟೇ ಸೀಮಿತ

ಜವಹಾರ್‌ಲಾಲ್‌ ನೆಹರೂ ತಾರಾಲಯ

ಬೆಂಗಳೂರು: ಅಕ್ಟೋಬರ್‌ 25ರ ಮಂಗಳವಾರದಂದು ಕೇತುಗ್ರಸ್ತ ಸೂರ್ಯಗ್ರಹಣ (Solar Eclipse 2022) ಸಂಭವಿಸಲಿದ್ದು, ಇದು ಪಾರ್ಶ್ವ ಸೂರ್ಯಗ್ರಹಣವಾಗಿದೆ. ಈ ಗ್ರಹಣವು ಬಹುತೇಕವಾಗಿ ಭಾರತದ ಎಲ್ಲ ಪ್ರದೇಶಗಳಲ್ಲೂ ಗೋಚರಿಸಲಿದೆ. 27 ವರ್ಷಗಳ ನಂತರ ಗ್ರಹಣ ಸಂಭವಿಸುತ್ತಿದ್ದು, ಈ ಬಾರಿ ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ.

Solar Eclipse 2022

ಸೂರ್ಯಾಸ್ತದ ಸಮಯದಲ್ಲಿ ಗ್ರಹಣ ಗೋಚರ ಹಿನ್ನೆಲೆ ಸ್ಪಷ್ಟವಾಗಿ ಕಾಣುವುದು ಕಷ್ಟ ಎನ್ನಲಾಗಿದೆ. ತಾರಾಲಯದ ಅಕ್ಕಪಕ್ಕ ದೊಡ್ಡ ಕಟ್ಟಡಗಳು ಇರುವ ಕಾರಣ ಗ್ರಹಣ ಗೋಚರ ಆಗುವುದಿಲ್ಲ. ಹೀಗಾಗಿ ಸಮಯದ ಅಭಾವ ಇರುವ ಕಾರಣ ಸುರಕ್ಷಿತ ಕನ್ನಡಕದ ವ್ಯವಸ್ಥೆಯನ್ನು ಈ ಬಾರಿ ಮಾಡಲಾಗಿಲ್ಲ. ಪ್ರತಿ ಬಾರಿ ಸೂರ್ಯ ಗ್ರಹಣ ವೀಕ್ಷಣೆಗೆಂದೆ ನೆಹರೂ ತಾರಾಲಯ ಸುರಕ್ಷಿತ ಕನ್ನಡಕದ ವ್ಯವಸ್ಥೆ ಮಾಡುತಿತ್ತು. ಈ ಬಾರಿ ವ್ಯವಸ್ಥೆ ಇಲ್ಲದ ಕಾರಣಕ್ಕೆ, ಎಲ್ಇಡಿ ಮೂಲಕ ಯೂಟ್ಯೂಬ್‌ ಸ್ಟ್ರೀಮಿಂಗ್‌ನಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ನೆಹರು ತಾರಾಲಯದ ಸಭಾಂಗಣದಲ್ಲಿ ೨೦೦ ಜನರಿಗೆ ವೀಕ್ಷಣೆಗೆ ಅವಕಾಶ ಇರಲಿದೆ. ಗ್ರಹಣ ಬಳಿಕ ತಜ್ಞರ ಜತೆ ವಿಚಾರ ವಿನಿಮಯಕ್ಕೂ ಅವಕಾಶ ಕಲ್ಪಿಸಿದೆ.

ಹಿರಿಯ ವೈಜ್ಞಾನಿಕ ಅಧಿಕಾರಿ ಎಂ.ವೈ.ಆನಂದ್

ಸೂರ್ಯಗ್ರಹಣ ಸಂಬಂಧ ಪ್ರತಿಕ್ರಿಯಿಸಿರುವ ಜವಹಾರ್‌ಲಾಲ್ ನೆಹರು ತಾರಾಲಯದ ಹಿರಿಯ ವೈಜ್ಞಾನಿಕ ಅಧಿಕಾರಿ ಎಂ.ವೈ.ಆನಂದ್, ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಗ್ರಹ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇಂದು ಪ್ರಪಂಚದಾದ್ಯಂತ ಸೂರ್ಯಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಪಾರ್ಶ್ವ ಸೂರ್ಯಗ್ರಹಣ ಮಾತ್ರ ಸಂಭವಿಸಲಿದೆ. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದ ಗ್ರಹಣ ಲೇಹ್ ಲಡಾಕ್‌ನಲ್ಲಿ ಗೋಚರಿಸಲಿದೆ ಎಂದಿದ್ದಾರೆ.

ನಾರ್ತ್ ಈಸ್ಟ್ ಪ್ರಾಂತ್ಯದಲ್ಲಿ ಬಿಟ್ಟು ಬಹುತೇಕ ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ರಷ್ಯಾ, ಸೈಬೀರಿಯಾ ಹಾಗೂ ಕಜಾಕಿಸ್ತಾನದಲ್ಲಿ ಗೋಚರಿಸಲಿದೆ. ಮಧ್ಯಾಹ್ನ ೨.೩೦ರ ವೇಳೆಗೆ ರಷ್ಯಾದಲ್ಲಿ ಗ್ರಹಣ ಶುರುವಾಗುತ್ತದೆ. ಭಾರತದಲ್ಲಿ‌ ಮಧ್ಯಾಹ್ನ ೪.೧೫ರ ನಂತರ ಆರಂಭವಾಗುತ್ತದೆ. ಲೇಹ್ ಲಡಾಕ್, ಶ್ರೀನಗರ ಭಾಗದಲ್ಲಿ ಶೇ‌. ೫೪ರಷ್ಟು ಗೋಚರಿಸಲಿದೆ. ಮೈಸೂರಿನಲ್ಲಿ ಶೇ.೮ರಷ್ಟು ಗೋಚರಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ | WhatsApp is OK | ವಾಟ್ಸ್ಆ್ಯಪ್‌ಗೆ ಹಿಡಿದಿದ್ದ ಗ್ರಹಣ ವಿಮೋಚನೆ! ನೀವೀಗ ಸಂದೇಶ ಕಳುಹಿಸಬಹುದು!

Exit mobile version