Solar Eclipse 2022 | ನೆಹರು ತಾರಾಲಯದಲ್ಲಿಲ್ಲ ಗ್ರಹಣ ವೀಕ್ಷಣೆ; ಯೂಟ್ಯೂಬ್‌ ಸ್ಟ್ರೀಮಿಂಗ್‌ಗಷ್ಟೇ ಸೀಮಿತ - Vistara News

ಕರ್ನಾಟಕ

Solar Eclipse 2022 | ನೆಹರು ತಾರಾಲಯದಲ್ಲಿಲ್ಲ ಗ್ರಹಣ ವೀಕ್ಷಣೆ; ಯೂಟ್ಯೂಬ್‌ ಸ್ಟ್ರೀಮಿಂಗ್‌ಗಷ್ಟೇ ಸೀಮಿತ

Solar Eclipse 2022 | ಸೂರ್ಯಗ್ರಹಣ ಆರಂಭವಾಗಿದ್ದು, ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೆಹರು ತಾರಾಲಯದಲ್ಲಿ ಈ ಬಾರಿ ಗ್ರಹಣ ವೀಕ್ಷಣೆಗೆ ಅವಕಾಶವಿಲ್ಲ. ಕೇವಲ ಯ್ಯೂಟೂಬ್‌ ಸ್ಟ್ರಿಮಿಂಗ್‌ಗಷ್ಟೇ ಸೀಮಿತವಾಗಿದೆ.

VISTARANEWS.COM


on

ಜವಹಾರ್‌ಲಾಲ್‌ ನೆಹರೂ ತಾರಾಲಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಕ್ಟೋಬರ್‌ 25ರ ಮಂಗಳವಾರದಂದು ಕೇತುಗ್ರಸ್ತ ಸೂರ್ಯಗ್ರಹಣ (Solar Eclipse 2022) ಸಂಭವಿಸಲಿದ್ದು, ಇದು ಪಾರ್ಶ್ವ ಸೂರ್ಯಗ್ರಹಣವಾಗಿದೆ. ಈ ಗ್ರಹಣವು ಬಹುತೇಕವಾಗಿ ಭಾರತದ ಎಲ್ಲ ಪ್ರದೇಶಗಳಲ್ಲೂ ಗೋಚರಿಸಲಿದೆ. 27 ವರ್ಷಗಳ ನಂತರ ಗ್ರಹಣ ಸಂಭವಿಸುತ್ತಿದ್ದು, ಈ ಬಾರಿ ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ.

Solar Eclipse 2022

ಸೂರ್ಯಾಸ್ತದ ಸಮಯದಲ್ಲಿ ಗ್ರಹಣ ಗೋಚರ ಹಿನ್ನೆಲೆ ಸ್ಪಷ್ಟವಾಗಿ ಕಾಣುವುದು ಕಷ್ಟ ಎನ್ನಲಾಗಿದೆ. ತಾರಾಲಯದ ಅಕ್ಕಪಕ್ಕ ದೊಡ್ಡ ಕಟ್ಟಡಗಳು ಇರುವ ಕಾರಣ ಗ್ರಹಣ ಗೋಚರ ಆಗುವುದಿಲ್ಲ. ಹೀಗಾಗಿ ಸಮಯದ ಅಭಾವ ಇರುವ ಕಾರಣ ಸುರಕ್ಷಿತ ಕನ್ನಡಕದ ವ್ಯವಸ್ಥೆಯನ್ನು ಈ ಬಾರಿ ಮಾಡಲಾಗಿಲ್ಲ. ಪ್ರತಿ ಬಾರಿ ಸೂರ್ಯ ಗ್ರಹಣ ವೀಕ್ಷಣೆಗೆಂದೆ ನೆಹರೂ ತಾರಾಲಯ ಸುರಕ್ಷಿತ ಕನ್ನಡಕದ ವ್ಯವಸ್ಥೆ ಮಾಡುತಿತ್ತು. ಈ ಬಾರಿ ವ್ಯವಸ್ಥೆ ಇಲ್ಲದ ಕಾರಣಕ್ಕೆ, ಎಲ್ಇಡಿ ಮೂಲಕ ಯೂಟ್ಯೂಬ್‌ ಸ್ಟ್ರೀಮಿಂಗ್‌ನಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ನೆಹರು ತಾರಾಲಯದ ಸಭಾಂಗಣದಲ್ಲಿ ೨೦೦ ಜನರಿಗೆ ವೀಕ್ಷಣೆಗೆ ಅವಕಾಶ ಇರಲಿದೆ. ಗ್ರಹಣ ಬಳಿಕ ತಜ್ಞರ ಜತೆ ವಿಚಾರ ವಿನಿಮಯಕ್ಕೂ ಅವಕಾಶ ಕಲ್ಪಿಸಿದೆ.

Solar Eclipse 2022
ಹಿರಿಯ ವೈಜ್ಞಾನಿಕ ಅಧಿಕಾರಿ ಎಂ.ವೈ.ಆನಂದ್

ಸೂರ್ಯಗ್ರಹಣ ಸಂಬಂಧ ಪ್ರತಿಕ್ರಿಯಿಸಿರುವ ಜವಹಾರ್‌ಲಾಲ್ ನೆಹರು ತಾರಾಲಯದ ಹಿರಿಯ ವೈಜ್ಞಾನಿಕ ಅಧಿಕಾರಿ ಎಂ.ವೈ.ಆನಂದ್, ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಗ್ರಹ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇಂದು ಪ್ರಪಂಚದಾದ್ಯಂತ ಸೂರ್ಯಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಪಾರ್ಶ್ವ ಸೂರ್ಯಗ್ರಹಣ ಮಾತ್ರ ಸಂಭವಿಸಲಿದೆ. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದ ಗ್ರಹಣ ಲೇಹ್ ಲಡಾಕ್‌ನಲ್ಲಿ ಗೋಚರಿಸಲಿದೆ ಎಂದಿದ್ದಾರೆ.

ನಾರ್ತ್ ಈಸ್ಟ್ ಪ್ರಾಂತ್ಯದಲ್ಲಿ ಬಿಟ್ಟು ಬಹುತೇಕ ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ರಷ್ಯಾ, ಸೈಬೀರಿಯಾ ಹಾಗೂ ಕಜಾಕಿಸ್ತಾನದಲ್ಲಿ ಗೋಚರಿಸಲಿದೆ. ಮಧ್ಯಾಹ್ನ ೨.೩೦ರ ವೇಳೆಗೆ ರಷ್ಯಾದಲ್ಲಿ ಗ್ರಹಣ ಶುರುವಾಗುತ್ತದೆ. ಭಾರತದಲ್ಲಿ‌ ಮಧ್ಯಾಹ್ನ ೪.೧೫ರ ನಂತರ ಆರಂಭವಾಗುತ್ತದೆ. ಲೇಹ್ ಲಡಾಕ್, ಶ್ರೀನಗರ ಭಾಗದಲ್ಲಿ ಶೇ‌. ೫೪ರಷ್ಟು ಗೋಚರಿಸಲಿದೆ. ಮೈಸೂರಿನಲ್ಲಿ ಶೇ.೮ರಷ್ಟು ಗೋಚರಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ | WhatsApp is OK | ವಾಟ್ಸ್ಆ್ಯಪ್‌ಗೆ ಹಿಡಿದಿದ್ದ ಗ್ರಹಣ ವಿಮೋಚನೆ! ನೀವೀಗ ಸಂದೇಶ ಕಳುಹಿಸಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಹುಬ್ಬಳ್ಳಿ

Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

Lok Sabha Election 2024: ದೇಶಾದ್ಯಂತ ನೇಹಾ ಹತ್ಯೆ ಪ್ರಕರಣ ಪ್ರತಿಧ್ವನಿಸಿದ್ದರಿಂದ ರಾಜ್ಯ ಸರ್ಕಾರ ಸದ್ಯ ಸಿಐಡಿಗೆ ವಹಿಸಿ ನೇಹಾ ಕುಟುಂಬದ ಕಣ್ಣೊರೆಸೋ ಕೆಲಸ ಮಾಡಿದೆ ಅಷ್ಟೇ. ನಿಜವಾಗಿಯೂ ಕಾಂಗ್ರೆಸ್ಸಿಗರಿಗೆ ಕರುಣೆ, ಕಾಳಜಿ ಎಂಬುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

VISTARANEWS.COM


on

Union Minister Pralhad Joshi Statement in Unakal
Koo

ಹುಬ್ಬಳ್ಳಿ: ದೇಶದಲ್ಲಿ ನಮ್ಮ ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಇಂದು ನರೇಂದ್ರ ಮೋದಿ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Lok Sabha Election 2024) ಪ್ರತಿಪಾದಿಸಿದರು.

ನಗರದ ಉಣಕಲ್‌ನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ನೇಹಾ ಹಿರೇಮಠ್‌ಗೆ ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ಅವರು ಮಾತನಾಡಿದರು.

ಬಹುಸಂಖ್ಯಾತರ ದೇಶದಲ್ಲೇ ಇಂದು ಬಹುಸಂಖ್ಯಾತರಿಗೆ ಸುರಕ್ಷತೆ ಬೇಕಾಗಿದೆ. ಅವರವರ ಧರ್ಮಾಚರಣೆಗೆ ಸ್ವಾತಂತ್ರ್ಯ ಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ: 2nd PUC Exam: ಏ.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಪ್ರವೇಶ ಪತ್ರ ಬಿಡುಗಡೆ

ದೇಶವಾಸಿಗಳಲ್ಲಿ ಧಾರ್ಮಿಕ ನಂಬಿಕೆ ಉಳಿಸುವ ಕೆಲಸವಾಗಬೇಕಿದೆ. ಮತಾಂತರದಂತಹ ಅಹಿತಕರ ಚಟುವಟಿಕೆಗಳಿಂದ ಹಿಂದೂಗಳನ್ನು, ಹಿಂದೂ ಮಹಿಳೆಯರನ್ನು ರಕ್ಷಿಸುವ ಕಾರ್ಯ ಅವಶ್ಯವಾಗಿದೆ. ಧಾರ್ಮಿಕ ಅನುಸರಣೆಗೆ ಸ್ವಾತಂತ್ರ್ಯದ ಅಗತ್ಯವಿದೆ. ಇದಕ್ಕಾಗಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲೇಬೇಕಿದೆ ಎಂದು ಹೇಳಿದರು

ಕಂಡಿರಲಿಲ್ಲ ಇಷ್ಟೊಂದು ಕ್ರೂರ ಹತ್ಯೆ

ನೇಹಾಳಷ್ಟು ಕ್ರೂರ ಹತ್ಯೆಯನ್ನು ಯಾವತ್ತೂ ಕಂಡಿರಲಿಲ್ಲ. ಆರೋಪಿ ಫಯಾಜ್ ಅಷ್ಟೊಂದು ಅಮಾನವೀಯವಾಗಿ ಆಕೆಗೆ 10-14 ಬಾರಿ ಚೂರಿ ಇರಿದು ಕೊಂದಿದ್ದಾನೆ. ಹಾಗಿದ್ದರೂ ರಾಜ್ಯ ಸರ್ಕಾರಕ್ಕೆ ಸ್ವಲ್ಪವೂ ಕನಿಕರವಿಲ್ಲ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು.

ದೇಶಾದ್ಯಂತ ನೇಹಾ ಹತ್ಯೆ ಪ್ರಕರಣ ಪ್ರತಿಧ್ವನಿಸಿದ್ದರಿಂದ ರಾಜ್ಯ ಸರ್ಕಾರ ಸದ್ಯ ಸಿಐಡಿಗೆ ವಹಿಸಿ ನೇಹಾ ಕುಟುಂಬದ ಕಣ್ಣೊರೆಸೋ ಕೆಲಸ ಮಾಡಿದೆ ಅಷ್ಟೇ. ನಿಜವಾಗಿಯೂ ಕಾಂಗ್ರೆಸ್ಸಿಗರಿಗೆ ಕರುಣೆ, ಕಾಳಜಿ ಎಂಬುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದರೆ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ. ಜನರೂ ಇದನ್ನು ಮನಗಂಡಿದ್ದಾರೆ ಎಂದ ಸಚಿವರು, ಮತ್ತೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಮೋದಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಪ್ರಚಾರ ಸಭೆಯ ಆರಂಭಕ್ಕೂ ಮುನ್ನ ಮತಾಂಧನಿಂದ ಹತ್ಯೆಯಾದ ನೇಹಾ ಹಿರೇಮಠ್‌ಗೆ ಶ್ರದ್ಧಾಂಜಲಿ ಅರ್ಪಿಸಿ, ಆತ್ಮಕ್ಕೆ ಶಾಂತಿ ಕೋರಲಾಯಿತು.

ಇದನ್ನೂ ಓದಿ: Road Accident: ಕಾರು ಟಯರ್‌ ಬ್ಲಾಸ್ಟ್ ಆಗಿ ಬೈಕ್‌ಗೆ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

ಸಭೆಯಲ್ಲಿ ಬಿಜೆಪಿ ಪ್ರಮುಖರಾದ ರಾಜಣ್ಣ ಕೊರವಿ, ಉಮೇಶ್ ಗೌಡ ಕೌಜಗಿರಿ, ಮಹಾದೇವಪ್ಪ ಮೆಣಸಿನಕಾಯಿ, ಸೋಮನಗೌಡ ಪಾಟೀಲ್, ಪರಶುರಾಮ ಹೊಂಬಾಲ, ರಾಮಣ್ಣ ಕೊಕ್ಕಟಿ, ಶೇಕಣ್ಣ ಸೂರ್ಯವಂಶಿ, ಮೋಹನ್ ಬಡಿಗೇರ, ಯಲ್ಲಪ್ಪ ಕಡಪಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Continue Reading

ಪ್ರಮುಖ ಸುದ್ದಿ

‌Nada Geethe: ನಾಡಗೀತೆ ವಿವಾದ; ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ತಿರಸ್ಕಾರ ಮಾಡಿದ ಹೈಕೋರ್ಟ್

‌Nada Geethe: ದಿವಂಗತ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ 2 ನಿಮಿಷ 30 ಸೆಕೆಂಡ್‌ಗಳ ಕಾಲದ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದರು.

VISTARANEWS.COM


on

Nada Gheethe
Koo

ಬೆಂಗಳೂರು: ನಾಡಗೀತೆ (‌Nada Geethe) ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಪುರಸ್ಕರಿಸಿದ್ದು, ಸರ್ಕಾರದ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕಾರ ಮಾಡಿದೆ.

ದಿವಂಗತ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ 2 ನಿಮಿಷ 30 ಸೆಕೆಂಡ್‌ಗಳ ಕಾಲದ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದರು. ಆದರೆ, ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಕಡ್ಡಾಯಗೊಳಿಸಲು ಸರ್ಕಾರಕ್ಕೆ ಶಿಕ್ಷಣ ಕಾಯ್ದೆಯಡಿ ಅಧಿಕಾರವಿದೆ ಎಂದು ಹೈಕೋರ್ಟ್ ಸ್ಪಷ್ಟನೆ ನೀಡುವ ಮೂಲಕ, ಕಿಕ್ಕೇರಿ ಕೃಷ್ಣಮೂರ್ತಿ ಅವರ ಅರ್ಜಿಯನ್ನು ತಿರಸ್ಕರಿಸಿದೆ.

ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವುದರಿಂದ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ. ಸರ್ಕಾರದ ಆದೇಶ ಪ್ರಶ್ನಿಸುವ ಯಾವುದೇ ಅಧಿಕಾರವನ್ನು ಅರ್ಜಿದಾರರು ಹೊಂದಿಲ್ಲ. ಅವರೇನೂ ಸರ್ಕಾರಿ ನೌಕರರಲ್ಲ ಅಥವಾ ಅವರ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದಾಗಲೀ ಇಲ್ಲ. ಹೀಗಾಗಿ, ಅವರ ಮೂಲಭೂತ ಹಕ್ಕು ಉಲ್ಲಂಘನೆ ಆಗಿದೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ನಿಮ್ಮ ಯಾವ ಹಕ್ಕುಗಳೂ ಉಲ್ಲಂಘನೆಯಾಗಿಲ್ಲ ಎಂಬುದನ್ನು ನೆನಪಿಡಿ. ಹೀಗಾಗಿ, ನಿಮ್ಮ ಅರ್ಜಿ ವಜಾ ಮಾಡಲಾಗುತ್ತಿದೆ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಇದನ್ನೂ ಓದಿ | Lok Sabha Election 2024: ಏ. 26ಕ್ಕೆ ವೋಟ್‌ ಹಾಕಿ ಈ ಹೋಟೆಲ್‌ಗಳಿಗೆ ಬನ್ನಿ; ಏನೇ ತಿಂದ್ರೂ 10 ಪರ್ಸೆಂಟ್‌ ಡಿಸ್ಕೌಂಟ್‌!

ಅರ್ಜಿದಾರರ ವಾದವೇನು?

ನಾಡಗೀತೆಯನ್ನು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು’ ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಅವರು ಪ್ರಶ್ನಿಸಿದ್ದರು. ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಗಾಯಕ ಮತ್ತು ಸಂಗೀತ ಸಂಯೋಜಕ ಸಿ.ಅಶ್ವತ್ ಅವರು ನಾಡಗೀತೆಯ ಎಲ್ಲಾ ಚರಣಗಳಿಗೆ ರಾಗ ಸಂಯೋಜಿಸಿದ್ದಾರೆ. ಹಾಗಾಗಿ, ಸರ್ಕಾರದ ಆದೇಶ ರದ್ದುಪಡಿಸಬೇಕು ಮತ್ತು ಸಿ.ಅಶ್ವತ್ ಅವರ ರಾಗ ಸಂಯೋಜಿಸಿದ ಧಾಟಿಯಲ್ಲೇ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು. ಆದರೆ, ಇದೀಗ ಈ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

Continue Reading

ಕರ್ನಾಟಕ

PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

PM Narendra Modi: ಅಂಧರು, ದೃಷ್ಟಿದೋಷವಿದ್ದವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಿಳಿದುಕೊಳ್ಳಲು ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ‘ಎ ಪ್ರಾಮಿಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ – ದ ಮೇಕರ್ ಆಫ್ ನ್ಯೂ ಇಂಡಿಯಾ’ಎಂಬ ಪುಸ್ತಕವನ್ನು ಸಿದ್ಧಪಡಿಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದಾಗ ಅವರಿಗೆ ಪುಸ್ತಕ ನೀಡಲಾಗಿದೆ.

VISTARANEWS.COM


on

PM Narendra Modi
Koo

ಬೆಂಗಳೂರು: ದೇಶದ ಏಳು ಕೋಟಿ ಅಂಧರು, ದೃಷ್ಟಿದೋಷವಿದ್ದವರು ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಕಾರ್ಯ ಮತ್ತು ನಾಯಕತ್ವದ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿದ ‘ಎ ಪ್ರಾಮಿಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ – ದ ಮೇಕರ್ ಆಫ್ ನ್ಯೂ ಇಂಡಿಯಾ’ ಎಂಬ ಪುಸ್ತಕವನ್ನು ಇತ್ತೀಚೆಗೆ ಪ್ರಧಾನಿಯವರಿಗೆ ಅರ್ಪಿಸಲಾಯಿತು.

ಸೆನ್ಸ್ ಎಸೆನ್ಸ್ ಸಂಸ್ಥೆಯ ರುಷಾಲಿ ಭಂಡಾರಿ ಮತ್ತು ಯಶ್ವಿ ಭಂಡಾರಿ ಅವರು ಅತ್ಯಂತ ಕಾಳಜಿಯಿಂದ ಸಿದ್ಧಪಡಿಸಿದ ಈ ವಿಶೇಷ ಪುಸ್ತಕವನ್ನು ವಿಆರ್‌ಎಲ್ ಸಮೂಹ ಸಂಸ್ಥೆಯ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಹೊರತರಲಾಗಿದೆ. ದೇಶದ ಎರಡೂವರೆ ಲಕ್ಷ ಅಂಧ ಮಕ್ಕಳು ಹಾಗೂ ಕಣ್ಣಿನ ಸಮಸ್ಯೆ ಎದುರಿಸುತ್ತಿರುವ 7 ಕೋಟಿ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ಪುಸ್ತಕದಿಂದ ಸಾಕಷ್ಟು ಮಾಹಿತಿ ಪಡೆದುಕೊಳ್ಳಬಹುದು.
ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ವಿಆರ್‌ಎಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ವಾಣಿ ಆನಂದ ಸಂಕೇಶ್ವರ, ರುಷಾಲಿ, ಯಶ್ವಿ ಅವರು ಪುಸ್ತಕದ ಐದು ಪ್ರತಿಗಳನ್ನು ಅರ್ಪಿಸಿದರು.

ಇದನ್ನೂ ಓದಿ | Voter Slip: ಮತದಾನಕ್ಕೆ ಇನ್ನೊಂದೇ ದಿನ ಬಾಕಿ; ವೋಟರ್ ಸ್ಲಿಪ್ ಸಿಕ್ಕಿಲ್ಲವೇ? ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ

ಪುಸ್ತಕದ ಮುಖಪುಟ ವೀಕ್ಷಿಸಿ, ಒಳಪುಟಗಳನ್ನು ತಿರುವಿ ಹಾಕುತ್ತ ಅತ್ಯಂತ ಆಸಕ್ತಿಯಿಂದ ವಿವರಗಳನ್ನು ಕೇಳಿ ತಿಳಿದುಕೊಂಡ ಮೋದಿಯವರು, ಇದೊಂದು ವಿಶಿಷ್ಟ ಕೃತಿಯಾಗಿದೆ. ನಿಜಕ್ಕೂ ವಿಶೇಷ ಸಾಧನೆ ಮಾಡಿದ್ದೀರಿ ಎಂದು ಪ್ರಶಂಸಿಸಿದರು. ವಿಆರ್‌ಎಲ್ ಸಮೂಹ ಸಂಸ್ಥೆಯ ಬೆಂಬಲದಿಂದ ಪುಸ್ತಕ ಹೊರತರಲು ಸಾಧ್ಯವಾಯಿತು. ಇದನ್ನು ಅಂಧರ ಶಾಲೆಗಳಿಗೆ ತಲುಪಿಸಲಾಗಿದೆ. ಆಸಕ್ತ ಅಂಧರಿಗೆ ಲಭಿಸುವಂತೆ ಮಾಡಲಾಗಿದೆ. ನಮ್ಮ ದೇಶ ಮಾತ್ರವಲ್ಲ, ಅನ್ಯ ದೇಶಗಳ ಅಂಧರೂ ನಮ್ಮ ಪ್ರಧಾನಿಯವರ ಸಾಧನೆಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವ ಆಸೆಯಿದ್ದು, ವಿವಿಧ ದೇಶಗಳಿಗೆ ಪುಸ್ತಕವನ್ನು ತಲುಪಿಸುವ ಗುರಿ ಹೊಂದಿದ್ದೇವೆ ಎಂದು ರುಷಾಲಿ ಮತ್ತು ಯಶ್ವಿ ವಿವರಿಸಿದರು.

ನಿಮ್ಮ ಗುರಿ ಒಳ್ಳೆಯದು ಹಾಗೂ ವಿಶಾಲವಾಗಿದೆ. ವಿಆರ್‌ಎಲ್ ಸಮೂಹ ಸಂಸ್ಥೆ ಇಂತಹ ಒಳ್ಳೆಯ ಪ್ರಯತ್ನವನ್ನು ಬೆಂಬಲಿಸಿ ಯಶಸ್ವಿಗೊಳಿಸಿರುವುದು ಅಭಿನಂದನಾರ್ಹ ಎಂದು ಪ್ರಧಾನಿಯವರು ಹೇಳಿದರು. ಡಾ. ಆನಂದ ಸಂಕೇಶ್ವರ ಅವರ ಕಾಳಜಿಯನ್ನು ಇದೇ ವೇಳೆ ಪ್ರಶಂಸಿಸಿದ ಮೋದಿಯವರು, ಬೇರೆ ಬೇರೆ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಲು ಪ್ರೋತ್ಸಾಹ ನೀಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಕುರಿತ ಈ ಪುಸ್ತಕವನ್ನು ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರು ಕಳೆದ ಜನವರಿಯಲ್ಲಿ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದರು.

ವಿಆರ್‌ಎಲ್ ಲಾಜಿಸ್ಟಿಕ್ ಲಿ. ವತಿಯಿಂದ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯಲ್ಲಿ ನಾವು ಆರೋಗ್ಯ, ಶಿಕ್ಷಣ, ಕ್ರೀಡಾ ಕ್ಷೇತ್ರಗಳಲ್ಲಿ ಹಲವು ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಗೆ ಪ್ರಯತ್ನಿಸಿದ್ದೇವೆ. ಈ ಕೆಲಸಗಳ ಸಕಾರಾತ್ಮಕ ಪರಿಣಾಮಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಸಮಾಜದ ಎಲ್ಲರ ಏಳಿಗೆಗೆ ಪೂರಕವಾಗಿ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇರುತ್ತೇವೆ. ಪ್ರಧಾನಿ ಅವರ ಜೀವನ ಸಾಧನೆ ಮತ್ತು ಅವರ ಕೈಂಕರ್ಯಗಳು ಅಂಧರಿಗೂ ಪ್ರೇರಣೆ ಆಗಲಿ ಎನ್ನುವ ಸದುದ್ದೇಶದಿಂದ ಈ ಪುಸ್ತಕ ಪ್ರಕಟಿಸಲು ನೆರವಾಗಿದ್ದೇವೆ.
| ಡಾ. ಆನಂದ ಸಂಕೇಶ್ವರ ವ್ಯವಸ್ಥಾಪಕ ನಿರ್ದೇಶಕರು, ವಿಆರ್‌ಎಲ್ ಸಮೂಹ ಸಂಸ್ಥೆ

ಇದನ್ನೂ ಓದಿ | Narendra Modi: ಕರ್ನಾಟಕದಲ್ಲಿ ಮುಸ್ಲಿಮರಿಗೆ ಒಬಿಸಿ ಮೀಸಲಾತಿ; ಕಾಂಗ್ರೆಸ್‌ ಒಬಿಸಿ ವಿರೋಧಿ ಎಂದ ಮೋದಿ

ಉಷಾ ಕೃಷ್ಣಗೆ ಪುಸ್ತಕ ಕೊಡುಗೆ

ಜೀವನದಲ್ಲಿ ಒಮ್ಮೆಯಾದರೂ ಮೋದಿ ಅವರನ್ನು ನೋಡಲೇಬೇಕೆಂದು ಹಂಬಲಿಸುತ್ತಿದ್ದ ಬೆಂಗಳೂರಿನ ಉಷಾ ಕೃಷ್ಣ ಅವರ ಕನಸು ಮೊನ್ನೆ ಈಡೇರಿತು. ಶೇ.99 ದೃಷ್ಟಿದೋಷ ಇರುವ ಉಷಾ ಅವರೊಂದಿಗೆ ಮಾತನಾಡುತ್ತಲೇ ವಿಮಾನದಿಂದ ‘ಎ ಪ್ರಾಮಿಸ್ಡ್ ನೇಷನ್’ ಬ್ರೈಲ್ ಪುಸ್ತಕವನ್ನು ತರಿಸಿ ಹಸ್ತಾಂತರಿಸಿ ವಿಆರ್‌ಎಲ್ ಸಂಸ್ಥೆಯ ಶ್ರಮ ತಮಗೆ ಸಹಾಯವಾಗಲಿ ಎಂದು ಶುಭ ಹಾರೈಸಿದ್ದಾರೆ.

Continue Reading

ಚಿಕ್ಕಬಳ್ಳಾಪುರ

Lok Sabha Election 2024: ನೆಲಮಂಗಲದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಬುಧವಾರ ನೆಲಮಂಗಲ ಶಾಸಕ ಶ್ರೀನಿವಾಸ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಎಂಎಲ್‌ಸಿ ಎಸ್. ರವಿ ಮತ್ತು ಹಿರಿಯ ಮುಖಂಡ ಕಾಂತರಾಜ್ ಅವರೊಂದಿಗೆ ನೆಲಮಂಗಲದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ, ಮತಯಾಚನೆ ನಡೆಸಿದರು.

VISTARANEWS.COM


on

Chikkaballapur Lok Sabha Constituency Congress candidate Raksha Ramaiah election campaign in Nelamangala
Koo

ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಬುಧವಾರ ನೆಲಮಂಗಲದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ, ಮತಯಾಚನೆ (Lok Sabha Election 2024) ನಡೆಸಿದರು.

ನೆಲಮಂಗಲ ಶಾಸಕ ಶ್ರೀನಿವಾಸ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ವಿಧಾನಪರಿಷತ್ ಸದಸ್ಯ ಎಸ್. ರವಿ ಮತ್ತು ಹಿರಿಯ ಮುಖಂಡ ಕಾಂತರಾಜ್ ಅವರೊಂದಿಗೆ ಬೃಹತ್ ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಮತಯಾಚಿಸಿದರು.

ಇದನ್ನೂ ಓದಿ: Kotak Bank: ಕೊಟಕ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನಿಷೇಧ; ಹಳೆಯ ಗ್ರಾಹಕರಿಗೆ ಏನು ತೊಂದರೆ? ಇಲ್ಲಿದೆ ಮಾಹಿತಿ

ಈ ವೇಳೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ರಕ್ಷಾ ರಾಮಯ್ಯ ಅವರು ಎಂ.ಎಸ್. ರಾಮಯ್ಯ ಅವರ ಕುಡಿ. ಕೋವಿಡ್ ಸಂದರ್ಭದಲ್ಲಿ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಸಹಸ್ರಾರು ಜನರ ಜೀವ ಉಳಿಸಿ, ಪುಣ್ಯದ ಕೆಲಸ ಮಾಡಿದ್ದಾರೆ ಎಂದ ಅವರು, ಬಿಜೆಪಿ ಆಡಳಿತದಿಂದ ರಾಜ್ಯಕ್ಕೆ ನ್ಯಾಯ ದೊರೆಯುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಅವರನ್ನು ಆರಿಸಿ ಕಳುಹಿಸಿದರೆ ಅವರು ರಾಜ್ಯಕ್ಕೆ ನ್ಯಾಯ ಒದಗಿಸಲಿದ್ದಾರೆ. ಜನರ ಪರವಾಗಿ ಅವರು ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ತಮಗೆ ಮತ ನೀಡಿ ಆಶೀರ್ವದಿಸುವಂತೆ ಮತದಾರರಲ್ಲಿ ಅವರು ಮನವಿ ಮಾಡಿದರು.

ಇದನ್ನೂ ಓದಿ: Sachin Tendulkar Birthday: ಈ ಬಾರಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ತೆಂಡೂಲ್ಕರ್‌; ವಿಡಿಯೊ ವೈರಲ್​

ಈ ಸಂದರ್ಭದಲ್ಲಿ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.

Continue Reading
Advertisement
PM
ದೇಶ5 mins ago

ಪ್ರಧಾನಿ ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

Union Minister Pralhad Joshi Statement in Unakal
ಹುಬ್ಬಳ್ಳಿ19 mins ago

Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

DC vs GT
ಕ್ರೀಡೆ39 mins ago

DC vS GT: ಗುಜರಾತ್​ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು ; ಪ್ಲೇ ಆಫ್​ ರೇಸ್ ಜೀವಂತ

PUBG Love
ದೇಶ39 mins ago

PUBG Love: ಪಬ್ಜಿ ಆಡುವಾಗ ಸಿಕ್ಕ ಮುಸ್ಲಿಂ ಯುವಕನ ಜತೆ ಹಿಂದು ಯುವತಿ ಮದುವೆ; ಈಗ ಬಾಳೇ ನರಕ!

Nada Gheethe
ಪ್ರಮುಖ ಸುದ್ದಿ50 mins ago

‌Nada Geethe: ನಾಡಗೀತೆ ವಿವಾದ; ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ತಿರಸ್ಕಾರ ಮಾಡಿದ ಹೈಕೋರ್ಟ್

Sachin Tendulkar Birthday
ಕ್ರೀಡೆ1 hour ago

Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

PM Narendra Modi
ಕರ್ನಾಟಕ1 hour ago

PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

Chikkaballapur Lok Sabha Constituency Congress candidate Raksha Ramaiah election campaign in Nelamangala
ಚಿಕ್ಕಬಳ್ಳಾಪುರ2 hours ago

Lok Sabha Election 2024: ನೆಲಮಂಗಲದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ

Sunetra Pawar
ದೇಶ2 hours ago

Sunetra Pawar: 25 ಸಾವಿರ ಕೋಟಿ ರೂ. ಹಗರಣ; ಅಜಿತ್‌ ಪವಾರ್‌ ಪತ್ನಿ ಸುನೇತ್ರಾಗೆ ಕ್ಲೀನ್‌ಚಿಟ್!

2nd PUC Exam
ಕರ್ನಾಟಕ2 hours ago

2nd PUC Exam: ಏ.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಪ್ರವೇಶ ಪತ್ರ ಬಿಡುಗಡೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ19 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌