Site icon Vistara News

ತಾಯಿಗೆ ʼಠಕ್ಕʼ ಮಗ ಅರೆಸ್ಟ್‌; ಕೊಂದ ಬಳಿಕ ಸುಟ್ಟು ಹಾಕಿ ಹೈಡ್ರಾಮ ಮಾಡಿದ್ದ ಆರೋಪಿ!

ಮಗ ಅರೆಸ್ಟ್‌

ಚಿಕ್ಕಮಗಳೂರು: ತಾಯಿಯನ್ನು ಡೀಸೆಲ್‌ ಹಾಕಿ ಸುಟ್ಟು ಕೊಂದು ಬೆಂಕಿ ಅವಘಡ ಎಂದು ನಂಬಿಸಿ ಡ್ರಾಮಾ ಮಾಡಿದ್ದ ಮಗನ ಆಟ ಕೊನೆಗೂ ಬಯಲಾಗಿದ್ದು, ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಸವರಾಜ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ತಾಲೂಕಿನ ಹಚ್ಚಡದ ಲತಾ ಎಂಬುವವರೇ ಮಗನಿಂದ ಹತ್ಯೆಯಾದ ದುರ್ದೈವಿ. ತಾಯಿ ಲತಾ ರಾತ್ರಿ ಮಲಗಿದ್ದ ವೇಳೆ ಹಾಸಿಗೆ ಮೇಲೆ ಕ್ಯಾಂಡಲ್‌ ಬಿದ್ದು ಮೃತಪಟ್ಟಿದ್ದರು ಎಂದು ನಂಬಿಸಿ ಗ್ರಾಮಸ್ಥರ ಸಹಕಾರ ಪಡೆದು ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದ. ಆದರೆ, ಕೊನೆಗೂ ಇದು ಕೊಲೆ ಎಂದು ಸಾಬೀತಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ತಾಲೂಕಿನ ಹಚ್ಚಡದಲ್ಲಿ ಲತಾ ಹಾಗೂ ಬಸವರಾಜ್‌ ವಾಸವಾಗಿದ್ದರು. ಹಣದ ವಿಚಾರವಾಗಿ ಬಸವರಾಜ್‌ ಆಗಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ಜುಲೈ ೧೮ರಂದು ತಾಯಿ ಲತಾ ಮಲಗಿದ್ದಾಗ ಹಚ್ಚಿಟ್ಟಿದ್ದ ಕ್ಯಾಂಡಲ್‌ ಹಾಸಿಗೆ ಮೇಲೆ ಬಿದ್ದು ಮೃತಪಟ್ಟಿದ್ದಾರೆ ಎಂದು ನಾಟಕ ಮಾಡಿದ್ದ. ಊರಿನವರನ್ನು ನಂಬಿಸುವ ಸಲುವಾಗಿ ಬಹಳವೇ ದುಃಖವಾದವನಂತೆ ನಟಿಸಿದ್ದ. ಇದೇ ವೇಳೆ ಗ್ರಾಮಸ್ಥರೂ ಸಹ ಅಂತ್ಯಕ್ರಿಯೆಗೆ ಸಹಕಾರವನ್ನು ನೀಡಿ ಧಾರ್ಮಿಕ ವಿಧಿವಿಧಾನ ಪೂರೈಸಲು ಕೈಜೋಡಿಸಿದ್ದರು.

ಆದರೆ, ಈ ಸಾವಿನ ಬಗ್ಗೆ ಪೊಲೀಸರಿಗೆ ಅನಾಮಿಕರೊಬ್ಬರು ಮಾಹಿತಿ ನೀಡಿದ್ದರಿಂದ ತನಿಖೆ ಕೈಗೊಂಡ ಪೊಲೀಸರಿಗೆ ಇದು ಅವಘಡದಿಂದ ಆದ ಸಾವಲ್ಲ. ಮಗನೇ ಹಣದ ವಿಚಾರದ ಸಲುವಾಗಿ ಮಾಡಿದ ಕೊಲೆ ಎಂಬ ವಿಷಯ ತಿಳಿದುಬಂದಿದೆ. ಹೀಗಾಗಿ ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಅಂತ್ಯಕ್ರಿಯೆಗೆ ಸಹಕಾರ ನೀಡಿದ್ದ ೧೪ ಮಂದಿ ಗ್ರಾಮಸ್ಥರ ಮೇಲೂ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ | ಕವರ್‌ ಸಹಿತ ಚಾಕೊಲೆಟ್‌ ನುಂಗಿದ 6 ವರ್ಷದ ಬಾಲಕಿ ಸಾವು!

Exit mobile version