ಗದಗ: ಮಗನೊಬ್ಬ ತನ್ನ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಹೇಯ ವಿದ್ಯಮಾನ ಗದಗದಲ್ಲಿ ನಡೆದಿದೆ. ಗದಗ ತಾಲೂಕಿನ ಹುಲಕೋಟಿ ಗ್ರಾಮದ ಗಣೇಶ ಚಿಕ್ಕನಹಟ್ಟಿ (೫೭) ಅವರೇ ಮಗನಿಂದ ಕೊಲೆಯಾದವರು. ಮಗ ವಿಜಯ್ ಕೊಲೆಗಾರ.
ಹುಲಕೋಟಿ ಗ್ರಾಮದ ಗಣೇಶ್ ಚಿಕ್ಕನಹಟ್ಟಿ ಅವರಿಗೂ ಮಗ ವಿಜಯ ಚಿಕ್ಕನಹಟ್ಟಿಗೂ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ಆಗುತ್ತಿತ್ತು. ಮಂಗಳವಾರ ರಾತ್ರಿ ತಂದೆ ಮಲಗಿದ್ದಲ್ಲಿಗೇ ಹೋಗಿ ವಿಜಯ್ ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಆರೋಪಿ ವಿಜಯ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮನೆಯೊಳಗಿನ ಜಗಳದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ| ಕೆಜಿ ಹಳ್ಳಿ ಕಾಲೇಜು ವಿದ್ಯಾರ್ಥಿ ಕೊಲೆಗೆ ಬಳಕೆ ಆಗಿದ್ದು PEN WEAPON! ಬೆಂಗಳೂರಿಗೇ ಇದು ಹೊಸ ಪರಿಚಯ!