ಮೈಸೂರು: ಯಶ್ ಇಂಟರ್ ನ್ಯಾಷನಲ್ ಆಯೋಜಿಸಿದ್ದ ಸೌತ್ ಇಂಡಿಯಾ-2022 ಫ್ಯಾಷನ್ ಶೋನಲ್ಲಿ (Fashion Show) 80ಕ್ಕೂ ಹೆಚ್ಚು ರೂಪದರ್ಶಿಯರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಭವಿಷ್, ನಿರೀಕ್ಷಾ, ಸಿರಿ, ಪುಣ್ಯಾಮೃತ, ಸನು, ಅನುಷಾ, ಅಮೃತಾ, ಕೃಷ್ಣ ಈ ಫ್ಯಾಷನ್ ಷೋನ ಬೇರೆ ಬೇರೆ ವಿಭಾಗಗಳಲ್ಲಿ ಕಿರೀಟ ಧಾರಣೆ ಮಾಡಿದರು.
ಯಶ್ ಇಂಟರ್‌ನ್ಯಾಷನಲ್ ಸಂಸ್ಥಾಪಕ ಸಿಇಒ ಯಶ್, ಸಿಇಒ ರಾಕಿ, ಶೋ ನಿರ್ದೇಶಕಿ ರಶ್ಮಿ ಕಾರ್ಯಕ್ರಮದಲ್ಲಿ ಇದ್ದರು. ರಮೀಜ್, ಹೇಮಲತಾ, ಶೈಲಜಾ, ಶ್ರಾವ್ಯ, ನೇತ್ರಾವತಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ರಾಷ್ಟ್ರೀಯ, ಪಾಶ್ಚಿಮಾತ್ಯ ಮತ್ತು ಔದ್ಯಮಿಕ ದಿರಸು.. ಹೀಗೆ ಮೂರು ಸುತ್ತುಗಳಲ್ಲಿ ರೂಪದರ್ಶಿಗಳು ತಮ್ಮ ಬೆಡಗು ಬಿನ್ನಾಣ ಪ್ರದರ್ಶಿಸಿದರು.
ಲಿಟಲ್ ಪ್ರಿನ್ಸ್ ವಿಭಾಗದಲ್ಲಿ ಬೆಂಗಳೂರಿನ ಭವಿಷ್ ಗೆದ್ದರೆ, ಸುಹಾರ್ಥ್ ಸಿಂಹ ರನ್ನರ್ ಅಪ್ ಆದರು. ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಶಿವಮೊಗ್ಗದ ನಿರೀಕ್ಷಾ ಗೆದ್ದರೆ, ಲಕ್ಷಣ ಹಾಗೂ ಜಿ. ಪವನ್ ರನ್ನರ್ ಅಪ್ ಆದರು. ಇದೇ ವಿಭಾಗದ ಇನ್ನೊಂದು ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರದ ಸಿರಿ ಜಯಶಾಲಿಯಾದರು.
ಮಿಸ್ ಟೀನ್ ವಿಭಾಗದಲ್ಲಿ ಮೈಸೂರಿನ ಪುಣ್ಯಾಮೃತ ಕ್ರೌನ್ ಗೆದ್ದರೆ ಖುಷಿ, ಅದ್ಯಶಾ ರನ್ನರ್ ಅಪ್ ಆದರು. ಮಿಸ್ಟರ್ ಸೌತ್ ಇಂಡಿಯಾ ವಿಭಾಗದ ಕಿರೀಟ ಸಾನು ಅವರ ಪಾಲಾದರೆ, ರೋಷನ್, ಸೈಯದ್ ನೂಮಾನ್ ರನ್ನರ್ ಅಪ್ ಪ್ರಶಸ್ತಿ ಗೆದ್ದರು.
ಮಿಸ್ ಸೌತ್ ಇಂಡಿಯಾ
ಮಿಸ್ ಸೌತ್ ಇಂಡಿಯಾ ವಿಭಾಗದಲ್ಲಿ ಅನುಷಾ ಕಿರೀಟ ಧರಿಸಿದರೆ, ನಂದಿನಿ, ಜಾಸ್ಮೆ, ರನ್ನರ್ ಅಪ್ ಆದರು.
ಮೈಸೂರಿನ ಅಮೃತಾ ಮಿಸೆಸ್ ಸೌತ್ ಇಂಡಿಯಾ ವಿಭಾಗದ ಪ್ರಶಸ್ತಿ ಗೆದ್ದರು. ಕುಸುಮಾ, ಮಾಧುರಿ ರನ್ನರ್ ಅಪ್ ಆದರು. ಮಿಸ್ಟರ್ ಇಂಡಿಯಾ ಐಕಾನ್ ಪ್ರಶಸ್ತಿ ಕೃಷ್ಣ ಅವರಿಗೆ ಸಿಕ್ಕಿತು.
ರಾಷ್ಟ್ರೀಯ ಸುತ್ತಿನಲ್ಲಿ ಭಾರತದ ಸಂಸ್ಕೃತಿಯನ್ನು ಹೇಳುವ ವೇಷಭೂಷಣ ಇತ್ತು. ದೇವರು, ನವಿಲು, ಕಮಲದ ಹೂವು ಸೇರಿ ಬೇರೆ ಬೇರೆ ಉಡುಗೆ ತೊಡುಗೆ ಪ್ರದರ್ಶಿಸಲಾಯಿತು. ಪಾಶ್ಚಿಮಾತ್ಯ ಸುತ್ತಿನಲ್ಲಿ ಕಪ್ಪು ಬಣ್ಣದ ಬಟ್ಟೆ ತೊಟ್ಟು ವಿಭಿನ್ನವಾದ ನಡಿಗೆ ಗಮನ ಸೆಳೆಯಿತು. ಪ್ರಶ್ನೋತ್ತರ ಸುತ್ತಿನಲ್ಲಿ ರೂಪದರ್ಶಿಯರು ತಮ್ಮ ಬೌದ್ಧಿಕ ಶಕ್ತಿ ಪ್ರದರ್ಶಿಸಿದರು.
ಇದನ್ನೂ ಓದಿ | Star Fashion | ಲಂಡನ್‌ನಲ್ಲಿ ನಟಿ ಕಾವ್ಯಾ ಶೆಟ್ಟಿ ಸ್ಟ್ರೀಟ್ ಫ್ಯಾಷನ್ ಸ್ಟೇಟ್‌ಮೆಂಟ್