Site icon Vistara News

Spanadana vijay Raghavendra : ಕಾವೇರಿ ನದಿಯಲ್ಲಿ ಲೀನವಾಗಲಿದೆ ಚಿನ್ನಾರಿ ಮುತ್ತನ ಚಿನ್ನ ಸ್ಪಂದನಾ ಅಸ್ಥಿ

Spandana Vijay Raghavendra asthi visarjane

ಬೆಂಗಳೂರು/ಮಂಡ್ಯ: ಬ್ಯಾಂಕಾಕ್‌ ಪ್ರವಾಸದ (Bangkok tour) ವೇಳೆ ಹಠಾತ್‌ ಹೃದಯಾಘಾತದಿಂದ (Sudden Cardiac arrest) ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಸ್ಥಿಯನ್ನು ಕಾವೇರಿ ನದಿಗೆ (Cauvery river) ಅರ್ಪಿಸುವ ಅಸ್ಥಿ ವಿಸರ್ಜನಾ (Asthi visarjane) ಪ್ರಕ್ರಿಯೆಗೆ ಶ್ರೀರಂಗಪಟ್ಟಣದ (Srirangapatna) ಕಾವೇರಿ ನದಿ ತೀರದಲ್ಲಿ ಸಿದ್ಧತೆ ನಡೆಯುತ್ತಿದೆ.

ಅತ್ತಿಗೆಗೆ ಇಷ್ಟದ ತಿಂಡಿ ಇಟ್ಟ ಶ್ರೀಮುರಳಿ | Vijay Raghavendra Family Pooja In Harishchandra Ghat

ಸ್ಪಂದನಾ ಅವರು ಕಳೆದ ಭಾನುವಾರ ರಾತ್ರಿ ಬ್ಯಾಂಕಾಕ್‌ನಲ್ಲಿ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ 12 ಗಂಟೆಯ ಹೊತ್ತಿಗೆ ಮಲ್ಲೇಶ್ವರದಲ್ಲಿರುವ ತಂದೆ, ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಂ ಅವರ ನಿವಾಸಕ್ಕೆ ತರಲಾಗಿತ್ತು. ಮರುದಿನ ಅಂತಿಮ ದರ್ಶನದ ಬಳಿಕ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆದಿತ್ತು.

ಸ್ಪಂದನಾ ಅವರನ್ನು ಕಳೆದುಕೊಂಡ ವಿಜಯ ರಾಘವೇಂದ್ರ ಅವರ ನೋವು, ಮನೆಯವರ ಸಂಕಟಗಳ ನಡುವೆ ಶುಕ್ರವಾರ ಸಾವಿನ ಬಳಿಕದ ಐದನೇ ದಿನ. ಈಡಿಗ ಸಂಪ್ರದಾಯದಂತೆ ಮೂರನೇ ದಿನ ಹಾಲು ತುಪ್ಪದ ಕಾರ್ಯಕ್ರಮ ನಡೆಯಬೇಕಾಗಿತ್ತು. ಆದರೆ, ಅದಕ್ಕೆ ಅವಕಾಶವೇ ಸಿಗಲಿಲ್ಲ. ಇದೀಗ ಐದನೇ ದಿನ ಅಸ್ಥಿ ವಿಸರ್ಜನೆ ಕಾರ್ಯಕ್ಕೆ ಶ್ರೀರಂಗಪಟ್ಟಣದ ಕಾವೇರಿ ನದಿಯ ತೀರದಲ್ಲಿ ಸಿದ್ಧತೆ ನಡೆಯುತ್ತಿದೆ.

ಬಿ.ಕೆ. ಶಿವರಾಮ್‌ ಅವರ ಮನೆಯ ಮುಂದೆ..

ಬಿ.ಕೆ ಶಿವರಾಂ ಅವರ ಮನೆಯಲ್ಲೂ ಕಾರ್ಯಕ್ರಮ

ಸ್ಪಂದನಾ ಅವರು ನಿಧನರಾಗಿ ಐದನೇ ದಿನವಾದ ಶುಕ್ರವಾರ ಬೆಂಗಳೂರಿನ ಬಿ.ಕೆ. ಶಿವರಾಮ್‌ ಅವರ ಮನೆಯ ಅಂಗಳದಲ್ಲೂ ಕೆಲವೊಂದು ವಿಧಿ ವಿಧಾನಗಳು ನಡೆದವು. ಸ್ಪಂದನಾ ಅವರಿಗೆ ಇಷ್ಟವಾದ ಆಹಾರ ವಸ್ತುಗಳನ್ನು ಬಡಿಸಿ ಸಮರ್ಪಣೆ ಮಾಡಲಾಯಿತು. ಮನೆಯ ಕಾರ್ಯಕ್ರಮಗಳನ್ನು ಮುಗಿಸಿ ಬಿ.ಕೆ. ಶಿವರಾಮ್‌ ಕುಟುಂಬ ಮತ್ತು ವಿಜಯ ರಾಘವೇಂದ್ರ ಅವರ ಕುಟುಂಬಗಳೆರಡೂ ಹರಿಶ್ಚಂದ್ರ ಘಾಟ್‌ಗೆ ತೆರಳಿದವು.

ವಿಜಯ ರಾಘವೇಂದ್ರ ಕೈಯಲ್ಲಿ ಅಸ್ಥಿ

ಶ್ರೀರಾಮ್‌ಪುರದ ಹರಿಶ್ಚಂದ್ರ ಘಾಟ್‌ನಲ್ಲಿ

ಹರಿಶ್ಚಂದ್ರ ಘಾಟ್‌ನಲ್ಲಿ ಹಾಲು ತುಪ್ಪ ಸೇರಿದಂತೆ ಐದನೇ ದಿನದ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬೃಹತ್‌ ಮರದ ಬುಡದಲ್ಲಿ ಈ ರೀತಿಯ ಕಾರ್ಯಕ್ರಮಗಳಿಗೆಂದೇ ಕಲ್ಲೊಂದನ್ನು ನೆಡಲಾಗಿದೆ. ಅದರ ಮುಂದೆ ಸ್ಪಂದನಾ ಅವರಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಜೋಡಿಸಿ ಇಡಲಾಗಿದೆ. ಅದರ ಜತೆಗೆ ಹೂವು, ಹಣ್ಣು, ಎಳನೀರು, ತೆಂಗಿನ ಕಾಯಿ ಸಿಂಗಾರವನ್ನು ಇಡಲಾಗಿದೆ. ಅದರ ನಡುವೆ ಅಸ್ಥಿಯನ್ನು ಇಡಲಾಗಿದ್ದು, ವಿಧಿ ವಿಧಾನಗಳ ನಂತರ ಅದನ್ನು ಕಾವೇರಿ ನೀರಿಗೆ ಬಿಡಲಾಗುತ್ತದೆ.

ವಿಜಯ ರಾಘವೇಂದ್ರ, ಪುತ್ರ ಶೌರ್ಯ, ಬಿ.ಕೆ. ಶಿವರಾಮ್‌, ರಕ್ಷಿತ್‌ ಶಿವರಾಂ, ಶ್ರೀಮುರಳಿ, ಚಿನ್ನೇಗೌಡರು ಸೇರಿದಂತೆ ಕುಟುಂಬದ ಎಲ್ಲರೂ ವಿಧಿವಿಧಾನದ ವೇಳೆ ಉಪಸ್ಥಿತರಿದ್ದಾರೆ.

ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಬಾಲ್ಯ ಹೇಗಿತ್ತು? ಹಳೆಯ ಫೋಟೊಗಳು ವೈರಲ್‌!

Exit mobile version