ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಲೋಕಾರ್ಪಣೆ ಹಿನ್ನೆಲೆಯಲ್ಲಿ ಜನವರಿ 22ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲು ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ಸೂಚನೆ ನೀಡಿದೆ.
ಈ ಬಗ್ಗೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಜನವರಿ 22ರಂದು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲು ಸೂಚನೆ ನೀಡಿದ್ದಾರೆ.
ರಾಜ್ಯದ ಮುಜರಾಯಿ ಇಲಾಖೆ ಅಡಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಜ.22ರಂದು ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಮಯವಾದ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ಸಮಯದಲ್ಲಿ(12.29.8 ರಿಂದ 12.30.32) ಏಕಕಾಲದಲ್ಲಿ ಮಹಾಮಂಗಳಾರತಿ ನಡೆಸಿ, ದೇಶ, ರಾಜ್ಯದ ಎಲ್ಲರಿಗೂ ಶ್ರೀ ರಾಮನ ರಕ್ಷಣೆ ಇರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲು ತಿಳಿಸಲಾಗಿದೆ.
ಇದನ್ನೂ ಓದಿ | Ram Mandir : 65 ಲಕ್ಷ ರೂ. ಬೆಲೆಯ ಸ್ವರ್ಣ ಪಾದುಕೆಯೊಂದಿಗೆ ಅಯೋಧ್ಯೆಗೆ 8000 ಕಿ.ಮೀ ಪಾದಯಾತ್ರೆ!
HD Devegowda : ಶ್ರೀರಾಮನಿಗೆ ಚಿನ್ನದ ಕತ್ತಿ ಸಮರ್ಪಿಸಿದ ಮಾಜಿ ಪ್ರಧಾನಿ ದೇವೇಗೌಡರು
ಬೆಂಗಳೂರು: ನಾನು ಶ್ರೀರಾಮನಿಗೆ (Shri Rama) ಚಿನ್ನದ ಕತ್ತಿಯನ್ನು (Golden sword) ಸಮರ್ಪಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು (HD Devegowda) ಹೇಳಿದರು. ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀ ರಾಮ ಮಂದಿರ ಲೋಕಾರ್ಪಣೆಗೆ ಆಹ್ವಾನ ಪಡೆದಿರುವ ಎಚ್.ಡಿ. ದೇವೇಗೌಡರು ತಾವು ಶ್ರೀರಾಮನಿಗೆ ಚಿನ್ನದ ಕತ್ತಿ ನೀಡಿದ್ದನ್ನು ನೆನಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ಪ್ರಧಾನಿ ಆಗಿದ್ದಾಗ ಒಮನ್ ದೇಶಕ್ಕೆ ಹೋಗಿದ್ದೆ. ಅಲ್ಲಿ ನನಗೆ ಚಿನ್ನದ ಕತ್ತಿಯನ್ನು ಉಡುಗೊರೆಯಾಗಿ ನೀಡಿದ್ದರು. ನಾನು ಅದನ್ನು ತೆರಿಗೆ ಕಟ್ಟಿ ಬೆಂಗಳೂರಿಗೆ ತರಿಸಿಕೊಂಡಿದ್ದೆ. ಬೆಲೆಬಾಳುವ ಈ ಕತ್ತಿಯನ್ನು ನಾನೇ ಇಟ್ಟುಕೊಳ್ಳಬಹುದಾಗಿತ್ತು. ಆದರೆ, ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ ಶ್ರೀರಾಮ ದೇವರಿಗೆ ಅರ್ಪಿಸಿದೆ. ದೈವಸೇವೆ ನಮ್ಮ ನಂಬಿಕೆ. ಅದನ್ನೇ ಮಾಡಿದೆ. ಇದು ನನ್ನ ರಾಮಸೇವೆ ಎಂದು ದೇವೇಗೌಡ ಅವರು ಹೇಳಿದರು.
ಇದನ್ನೂ ಓದಿ | Ramjyoti: ಅಯೋಧ್ಯೆಯಿಂದ ಕಾಶಿಗೆ ರಾಮಜ್ಯೋತಿ ತರಲು ಮುಸ್ಲಿಂ ಮಹಿಳೆಯರು ಸಜ್ಜು; ಸಂದೇಶವೇನು?
ಡಿಸೆಂಬರ್ 17ರಂದು ದೇವೇಗೌಡರಿಗೆ ಆಹ್ವಾನ
ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಎಚ್.ಡಿ. ದೇವೇಗೌಡರು, ರಾಮ ಮಂದಿರ ಕಟ್ಟಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಹಿರಿಯ ಆರ್‌ಎಸ್‌ಎಸ್ ನಾಯಕ ರಾಮ್ ಲಾಲ್ ಮತ್ತು ಹಿರಿಯ ವಿಎಚ್‌ಪಿ ನಾಯಕ ಅಲೋಕ್ ಕುಮಾರ್ ಅವರಿಂದು ನನ್ನನ್ನು ನವದೆಹಲಿಯ ನನ್ನ ನಿವಾಸದಲ್ಲಿ ಭೇಟಿಯಾದರು ಎಂದು ತಿಳಿಸಿದ್ದರು.