Site icon Vistara News

ಸಿದ್ದರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ: ಬೀದರ್‌ನಿಂದ ವಿಶೇಷ ರೈಲು ಬಿಟ್ಟ ಇಲಾಖೆ

siddaramotsava train

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಸಂದರ್ಭದಲ್ಲಿ ದಾವಣೆಗೆರೆಯಲ್ಲಿ ಆಚರಣೆ ಮಾಡಲಾಗುತ್ತಿರುವ, ಸಿದ್ದರಾಮೋತ್ಸವ ಎಂದೇ ಪ್ರಸಿದ್ಧವಾಗಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವವರ ಅನುಕೂಲಕ್ಕೆ ರೈಲ್ವೇ ಇಲಾಖೆ ವಿಶೇಷ ರೈಲು ಸೇವೆಯನ್ನು ಒದಗಿಸುತ್ತಿದೆ.

ಅಮೃತ ಮಹೋತ್ಸವ ಆಚರಣೆಗೆ ಸಮಿತಿಯನ್ನು ರಚನೆ ಮಾಡಲಾಗಿದೆ. ಕಾಂಗ್ರೆಸ್‌ನ ಪದಾಧಿಕಾರಿಗಳು ಹಾಗೂ ನಾಯಕರನ್ನೊಳಗೊಂಡು ಅನೇಕ ಉಪ ಸಮಿತಿಗಳನ್ನೂ ರಚನೆ ಮಾಡಿ ರಾಜ್ಯಾದ್ಯಂತ ಪ್ರಚಾರ ಮಾಡಲಾಗುತ್ತಿದೆ. ವಿಶೇಷವಾಗಿ, ಕಲ್ಯಾಣ ಕರ್ನಾಟಕದಿಂದ ಹೆಚ್ಚಿನ ಜನರು ಆಗಮಿಸುವ ಅಂದಾಜಿದೆ.

ಇದಕ್ಕಾಗಿ ಸಮಿತಿಯುವರು ರೈಲ್ವೇ ಇಲಾಖೆಗೆ ಮನವಿ ಮಾಡಿದ್ದರು. ಸುಮಾರು ಮೂರು ಸಾವಿರ ಜನರನ್ನು ಬೀದರ್‌ನಿಂದ ದಾವಣಗೆರೆಗೆ ಕರೆತರಲು ವಿಶೇಷ ರೈಲು ವ್ಯವಸ್ಥೆ ಮಾಡಲು ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ರೈಲ್ವೇ ಇಲಾಖೆ ಆಗಸ್ಟ್‌ 2ರ ಮದ್ಯಾಹ್ನ 2 ಗಂಟೆಗೆ ಬೀದರ್‌ನಿಂದ ವಿಶೇಷ ರೈಲಿಗೆ ಚಾಲನೆ ನೀಡಲಿದೆ. ಈ ರೈಲು ತೆಲಂಗಾಣದ ವಿಕರಾಬಾದ್‌, ಆಂಧ್ರಪ್ರದೇಶದ ಗುಂಟಕಲ್‌, ಕರ್ನಾಟಕದ ಬಳ್ಳಾರಿ ಮೂಲಕ ಹಾದು ಆಗಸ್ಟ್‌ 3ರಂದು ಬೆಳಗ್ಗೆ 5 ಗಂಟೆಗೆ ದಾವಣಗೆರೆ ತಲುಪಲಿದೆ.

ಆಗಸ್ಟ್‌ 3ರ ಸಂಜೆ 6 ಗಂಟೆಗೆ ದಾವಣಗೆರೆಯಿಂದ ಹೊರಡುವ ರೈಲು ಅದೇ ಮಾರ್ಗದಲ್ಲೇ ಸಾಗಿ 4ನೇ ತಾರೀಖು ಬೆಳಗ್ಗೆ 10.30ಕ್ಕೆ ಬೀದರ್‌ ತಲುಪಲಿದೆ.

ಇದನ್ನೂ ಓದಿ | ಸಿದ್ದರಾಮೋತ್ಸವಕ್ಕೆ ಡಿ.ಕೆ. ಶಿವಕುಮಾರ್‌ ಅತಿಥಿ ಅಷ್ಟೆ: ಅಧ್ಯಕ್ಷರನ್ನು ದೂರವಿಟ್ಟ ಸಮಿತಿ

Exit mobile version