Site icon Vistara News

Veerashaiva Lingayat: ಹಿಂದೆ ಒಬ್ಬರು ನಮ್ಮ ಸಮಾಜವನ್ನು ಇಬ್ಭಾಗ ಮಾಡಲು ಹೊರಟಿದ್ದರು: ಸಿಎಂ ವಿರುದ್ಧ ಶ್ರೀಶೈಲ ಶ್ರೀ ಗರಂ

Srisaila Peetham Jagadguru Dr Channa Siddarama Swamiji

ದಾವಣಗೆರೆ: ಜಾತಿ ಗಣತಿ ವರದಿ (Caste Census Report) ಬಗ್ಗೆ ವೀರಶೈವ ಲಿಂಗಾಯತ ಸ್ವಾಮೀಜಿಗಳು ಸೇರಿದಂತೆ ಸಮುದಾಯದ ಸಚಿವರು, ಶಾಸಕರು ಗರಂ ಆಗಿದ್ದಾರೆ. ಸಮುದಾಯದ ವಿಷಯದಲ್ಲಿ ರಾಜಕಾರಣಿಗಳು ಪಕ್ಷಾತೀತವಾಗಿ ಒಂದಾಗಿದ್ದಾರೆ. ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ (All India Veerashaiva Lingayat Mahasabha) 24ನೇ ಅಧಿವೇಶನದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲಾಗಿದೆ. ಅಧಿವೇಶನದಲ್ಲಿ ಮಾತನಾಡಿದ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಸ್ವಾಮೀಜಿ (Srisaila Peetham Jagadguru Dr Channa Siddarama Swamiji), ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ನಮ್ಮ ಸಮಾಜವನ್ನು ಇಬ್ಭಾಗ ಮಾಡಲು ಒಬ್ಬರು ಹೊರಟಿದ್ದರು ಎಂದು ಕಿಡಿಕಾರಿದ್ದಾರೆ.

ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮುದಾಯದಲ್ಲಿ ವಿಷ ಬೀಜ ಬಿತ್ತಲು ಈ ಹಿಂದೆ ಒಬ್ಬರು ಮುಂದಾಗಿದ್ದರು. ವೀರಶೈವ ಬೇರೆ ಲಿಂಗಾಯತ ಬೇರೆ ಎಂದು ಒಡೆದು ಆಳಲು ಮುಂದಾಗಿದ್ದರು. ಆಗ ಮಹಾಸಭಾ ಅಧ್ಯಕ್ಷರಾಗಿದ್ದ ಶಾಮನೂರು ಕಲ್ಲು ಬಂಡೆಯಂತೆ ನಿಂತರು. ಇಲ್ಲದೆ ಇದ್ದಿದ್ದರೆ ನಮ್ಮ ಸಮುದಾಯ ಆಗಲೇ ಇಬ್ಭಾಗ ಆಗುತ್ತಿತ್ತು. ಅಂದು ಶಾಮನೂರು ಒಂದು ಮಾತನ್ನು ಹೇಳಿದ್ದರು. “ನನಗೆ ರಾಜಕೀಯ, ಪಕ್ಷ ಮುಖ್ಯ ಅಲ್ಲ. ರಾಜಕೀಯವನ್ನು ಬೇಕಿದ್ದರೆ ಬಿಡುತ್ತೇನೆ. ಆದರೆ, ನಮ್ಮ ಸಮುದಾಯವನ್ನು ಇಬ್ಭಾಗ ಮಾಡಲು ಬಿಡುವುದಿಲ್ಲ ಅಂತ ಹೇಳಿದ್ದರು. ಅದರಂತೆ ಅವರು ನಮ್ಮ ಸಮುದಾಯವನ್ನು ಉಳಿಸಿಕೊಂಡರು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಸ್ವಾಮೀಜಿ ಹೇಳಿದರು.

ವಿಶಾಲವಾದ ನಮ್ಮ ಸಮುದಾಯವನ್ನು ಕೆಲವರು ಸಂಕುಚಿತ ಮಾಡಲು ಹೊರಟ್ಟಿದ್ದಾರೆ. ಈ ಮೂಲಕ ಅವರು ಮೇಲಕ್ಕೆ ಬರಲು ಹೊರಟ್ಟಿದ್ದಾರೆ. ಸರ್ಕಾರ ನಮ್ಮ ಸಮುದಾಯವನ್ನು ಕಡೆಗಣನೆ ಮಾಡಬಾರದು. ಸಮುದಾಯದ ಜತೆ ಚಲ್ಲಾಟ ಆಡುವುದು ಬೇಡ. ಈ ಹಿಂದೆ ವೀರಶೈವ, ಲಿಂಗಾಯತ ವಿಚಾರಕ್ಕೆ ಕೈ ಹಾಕಿ ಕೈ ಸುಟ್ಟಿಕೊಂಡಿದ್ದಾಗಿದೆ. ಮತ್ತೆ ಯಾವ ಸರ್ಕಾರ ಕೂಡ ಇದಕ್ಕೆ ಕೈ ಹಾಕೋದು ಬೇಡ. ಮತ್ತೆ ಕೈಸುಟ್ಟುಕೊಳ್ಳುವುದು ಬೇಡ ಎಂದು ಡಾ. ಚನ್ನಸಿದ್ದರಾಮ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: Hijab Row: ಹಿಜಾಬ್‌ ವರ್ಸಸ್‌ ಕೇಸರಿ ಶಾಲು! ಸಿಡಿದ ಹಿಂದುಗಳು; ಶುರುವಾಗುತ್ತಾ ಧರ್ಮ ದಂಗಲ್?‌

856 ಸಂಖ್ಯೆಯನ್ನು ಕೋಡ್ ಆಗಿ ಬಳಸಬೇಕು

1990ರಲ್ಲಿ ಚನ್ನಪ್ಪ ರೆಡ್ಡಿ ಆಯೋಗ ವರದಿಯನ್ನು ಕೊಟ್ಟಿದೆ. ಆ ವರದಿಯಲ್ಲಿ ರಾಜ್ಯದಲ್ಲಿ ಶೇ. 17ರಷ್ಟು ವೀರಶೈವ ಲಿಂಗಾಯತರು ಇದ್ದರು. ಆದರೆ, ಈಗ ಸರ್ಕಾರ ಸ್ವೀಕಾರ ಮಾಡುವ ವರದಿಯಲ್ಲಿ ಹೇಗಿದೆ? ಕೇವಲ ಶೇ. 10.68ರಷ್ಟು ಮಾತ್ರ ವೀರಶೈವ ಲಿಂಗಾಯತರು ಇದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. 35 ವರ್ಷಗಳಲ್ಲಿ ಬೆಳವಣಿಗೆ ಬದಲು ಕಡಿಮೆ ಆಗಿದೆ. ಶೇ. 17ರಿಂದ ಶೇ. 10.68ರಷ್ಟು ಇಳಿದಿದೆ ಎಂಬುದು ವಿಪರ್ಯಾಸ. ರಾಜ್ಯದಲ್ಲಿ 2 ಕೋಟಿಗಿಂತಲೂ ಹೆಚ್ಚು ಜನರು ನಮ್ಮ ಸಮುದಾಯದವರಿದ್ದಾರೆ. ಮುಸ್ಲಿಂ ಸಮುದಾಯದವರು 786 ಸಂಖ್ಯೆಯನ್ನು ಕೋಡ್ ಆಗಿ ಬಳಸುತ್ತಾರೆ. ಹಾಗೆಯೇ ನಮ್ಮ ವೀರಶೈವ ಸಮುದಾಯದವರು 856 ಸಂಖ್ಯೆಯನ್ನು ಕೋಡ್ ಆಗಿ ಬಳಸಬೇಕು ಎಂದು

Exit mobile version