Site icon Vistara News

Power Point with HPK : ಎಸ್‌ಟಿ ಸೋಮಶೇಖರ್‌, ಭೈರತಿ ಬಸವರಾಜ್‌ಗೆ ಕಾಂಗ್ರೆಸ್‌ನಿಂದ ಬ್ಲ್ಯಾಕ್‌ಮೇಲ್‌!

Ashwath Narayana in Power point with HPK

ಬೆಂಗಳೂರು: ಹಾಲಿ ಶಾಸಕರು, ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್‌ (ST Somashekhar) ಅವರಾಗಲೀ, ಭೈರತಿ ಬಸವರಾಜ್‌ (Byrathi Basavaraj) ಅವರಾಗಲೀ ಕಾಂಗ್ರೆಸ್‌ ಕಡೆ ಹೋಗಲು ಉತ್ಸುಕರಾಗಿಲ್ಲ. ಕಾಂಗ್ರೆಸ್‌ನವರು ಬ್ಲ್ಯಾಕ್‌ಮೇಲ್‌ (Congress blackmail) ಮಾಡುತ್ತಿದ್ದಾರೆ ಎಂದು ಬೆಂಗಳೂರಿನ ಮಲ್ಲೇಶ್ವರ ಶಾಸಕ, ಮಾಜಿ ಡಿಸಿಎಂ ಡಾ. ಸಿ.ಎನ್.‌ ಅಶ್ವತ್ಥನಾರಾಯಣ (Dr CN Ashwathnarayan) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಡಾ. ಸಿ.ಎನ್.‌ ಅಶ್ವತ್ಥನಾರಾಯಣ, ಅಧಿಕಾರ ದುರ್ಬಳಕೆ ಮಾಡಿಕೊಂಡು ಇವರನ್ನು ಕಷ್ಟಕ್ಕೆ ಸಿಲುಕಿಸುವ ಯತ್ನ ಈ ಸರ್ಕಾರದ ಮೂಲಕ ನಡೆಯುತ್ತಿದೆ. ಅಸಹಾಯಕತೆ ನಿರ್ಮಾಣ ಮಾಡಿ ಟಾರ್ಗೆಟ್‌ ಮಾಡುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ. ನನಗೆ ತಿಳಿದ ಮಟ್ಟಿಗೆ ನಮ್ಮ ಪಕ್ಷದಿಂದ ಇವರು ಯಾರೂ ಹೋಗುವುದಿಲ್ಲ ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

ಇದನ್ನೂ ಓದಿ: Power Point with HPK : ಭ್ರಷ್ಟ, ಕೀಳುಮಟ್ಟದ, ಅಸಮರ್ಥ ಸರ್ಕಾರ ಅಧಿಕಾರಕ್ಕೆ ಬಂದಿದೆ: ಅಶ್ವತ್ಥನಾರಾಯಣ

ಕಾಂಗ್ರೆಸ್‌ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ

ಆಪರೇಷನ್‌ ಹಸ್ತ ಮಾಡಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ. ಆದರೆ, ನಮ್ಮ ಪಕ್ಷದಿಂದ ಯಾರೂ ಹೋಗುತ್ತಿಲ್ಲ. ಅಲ್ಲಿದ್ದವರೇ ನಮ್ಮ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಸಾಕಷ್ಟು ಶಾಸಕರು ನಮ್ಮ ಬೇರೆ ಬೇರೆ ನಾಯಕರ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಬಿಜೆಪಿಗೆ ಸೇರ್ಪಡೆಯಾಗಲು ಸಿದ್ಧರಿದ್ದಾರೆ. ಆಯಾ ಕಾಲಕ್ಕೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

ಕಾಂಗ್ರೆಸ್‌ನಲ್ಲಿ ಯಾವುದೇ ಭವಿಷ್ಯ ಇಲ್ಲ. ಅಲ್ಲಿದ್ದವರೇ ಪಕ್ಷ ಬಿಡಲು ಸಿದ್ಧರಾಗಿದ್ದಾರೆ. ಅಲ್ಲಿ ಏನಿದೆ ಎಂದು ಹೋಗುತ್ತಾರೆ? ಈ ಸರ್ಕಾರ ಯಾವಾಗ ಬೀಳುತ್ತದೆ ಎಂದು ಕಾಂಗ್ರೆಸ್‌ನವರೇ ಮಾತನಾಡಿಕೊಳ್ಳುತ್ತಿದ್ದಾರೆ. ನಾವು ಪೂರ್ತಿ ಅವಧಿ ಇರುತ್ತೇವೆ ಎಂದು ಅವರೇ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದ ಹೆಸರನ್ನು ಹಾಳು ಮಾಡಬೇಡಿ, ರಾಜ್ಯಕ್ಕೆ ಅವಮಾನ ಮಾಡಬೇಡಿ, ಭ್ರಷ್ಟ ರಾಜ್ಯ, ಭ್ರಷ್ಟ ಸರ್ಕಾರ ಎಂಬ ಪಟ್ಟ ಕೊಡಬೇಡಿ ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

ಒಂದೇ ಒಂದು ಜನಪರ ಘೋಷಣೆಯನ್ನು ಸಿದ್ದರಾಮಯ್ಯ ಮಾಡಿದ್ದಾರಾ?

ಗುಣಮಟ್ಟದ ಆರೋಗ್ಯ ಸೇವೆ, ಗುಣಮಟ್ಟದ ಶಿಕ್ಷಣ ಕೊಡುತ್ತೇವೆ, ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು ಕೊಡುತ್ತೇವೆ, ಗುಣಮಟ್ಟದ ಜನಪರ ಆಡಳಿತ ಕೊಡುತ್ತೇನೆ, ಬೆರಳ ತುದಿಯಲ್ಲಿ ನಾಗರಿಕರಿಗೆ ಸೇವೆ ಕೊಡುತ್ತೇನೆ ಎಂಬಿತ್ಯಾದಿ ಒಂದೇ ಒಂದು ಘೋಷಣೆಗಳು ಸಿಎಂ ಸಿದ್ದರಾಮಯ್ಯ ಅವರ ಬಾಯಿಂದ ಬಂದಿದೆಯೇ? ಎಂದು ಪ್ರಶ್ನೆ ಮಾಡಿದ ಡಾ. ಸಿ.ಎನ್.‌ ಅಶ್ವತ್ಥನಾರಾಯಣ, ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಹೆಣ್ಣು ಮಕ್ಕಳು ಘನತೆಯಿಂದ ಬದುಕಲು ಹಲವು ಯೋಜನೆಗಳನ್ನು ನೀಡಿದ್ದಾರೆ. ಪೌಷ್ಟಿಕತೆ, ಮಹಿಳಾ ಶಿಕ್ಷಣ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Power Point with HPK : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 1 ಸ್ಥಾನ ಗೆಲ್ಲಲಿ: ಅಶ್ವತ್ಥನಾರಾಯಣ ಸವಾಲು!

ಲೋಕಾಯುಕ್ತಕ್ಕೆ ತನಿಖೆ ಹೊಣೆ ನೀಡಿ

ಕಾಂಗ್ರೆಸ್‌ನವರು ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಹಾಗಿದ್ದರೆ ಆ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತ ತನಿಖೆಗೆ ವಹಿಸಲಿ ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಸವಾಲು ಹಾಕಿದರು. ಆದರೆ, ಕಾಂಗ್ರೆಸ್‌ನವರು ತಮ್ಮ ಮೇಲಿನ ಭ್ರಷ್ಟಾಚಾರ ಪ್ರಕರಣಗಳನ್ನು ತಮ್ಮ ಅಧೀನದ ಎಸಿಬಿಯಿಂದ ತನಿಖೆ ಮಾಡಿಸಿಕೊಂಡು ಬಿ ರಿಪೋರ್ಟ್‌ ಪಡೆದುಕೊಂಡಿದೆ. ಆ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವಹಿಸಲಿ ಎಂದು ಹೇಳಿದರು.

Exit mobile version