Site icon Vistara News

ST Somashekhar: ಎಸ್ ಟಿ ಸೋಮಶೇಖರ್ ಬಿಜೆಪಿಗೆ ‘ಕೈ’ ಕೊಡೋದು ಪಕ್ಕಾ? ಡಿಸಿಎಂ ಜತೆ ಸಭೆಯಲ್ಲಿ ಭಾಗಿ!

ST Somashekhar

ಬೆಂಗಳೂರು: ಮಾಜಿ ಶಾಸಕ, ಯಶವಂತಪುರ ಬಿಜೆಪಿ (BJP MLA) ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಅವರು ಕಾಂಗ್ರೆಸ್ (Congress Party) ಸೇರುತ್ತಾರೆ ಎಂಬ ವದಂತಿಗಳು ದಟ್ಟವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಜತೆಗಿನ ಅವರ ಒಡನಾಟವು ಹೆಚ್ಚಾಗುತ್ತಿರುವುದೇ ಈ ಗುಮಾನಿಗೆ ಕಾರಣವಾಗಿದೆ. ಭಾರತೀಯ ಜನತಾ ಪಾರ್ಟಿಯನ್ನು ತೊರೆಯುವುದಿಲ್ಲ ಎನ್ನುತ್ತಲೇ ಎಸ್ ಟಿ ಸೋಮಶೇಖರ್ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DCM DK Shivakumar)ಅವರ ಜತೆ ಬಹಿರಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಶನಿವಾರ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರ ಜತೆಗೂಡಿಯೇ ಎಸ್ ಟಿ ಸೋಮಶೇಖರ್ ಅವರು ತಮ್ಮ ಕ್ಷೇತ್ರದಲ್ಲಿ ಸಾರ್ವಜನಿಕರ ಸಭೆ ನಡೆಸಿದ್ದಾರೆ. ಜನಸ್ಪಂದನ ಹೆಸರಿನಲ್ಲಿ ಕ್ಷೇತ್ರದಲ್ಲಿ ಈ ಸಭೆ ನಡೆಸಿದ್ದು, ಸೋಮಶೇಖರ್ ಅವರು ಉಪ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ತೊರೆಯಲ್ಲ ಎಂದಿದ್ದ ಸೋಮಶೇಖರ್

ಕಳೆದ ಕೆಲವು ದಿನಗಳಿಂದ ಎಸ್‌ ಟಿ ಸೋಮಶೇಖರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳಿದ್ದವು. ಆದರೆ, ಸುದ್ದಿಗಳನ್ನು ನಿರಾಕರಿಸಿದ್ದ ಎಸ್ ಟಿ ಸೋಮಶೇಖರ್ ಅವರು, ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಾರ್ಟಿಯನ್ನು ತೊರೆಯುವುದಿಲ್ಲ ಎಂದು ಹೇಳಿದ್ದರು. ಹಾಗಿದ್ದೂ, ಕಾಂಗ್ರೆಸ್ ಪಕ್ಷದ ಜತೆಗಿನ ಒಡನಾಟವನ್ನು ಹೆಚ್ಚಿಸಿಕೊಂಡಿದ್ದಾರೆ

ಬೆಂಬಲಿಗರು ಕೈ ಪಾಲು

ಈ ಮಧ್ಯೆ, ಎಸ್ ಟಿ ಸೋಮಶೇಖರ್ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ಸೋಮಶೇಖರ್ ಅವರು ಕಾಂಗ್ರೆಸ್ ಸೇರಿ, ಲೋಕಸಭೆ ಚುನಾವಣೆ ವೇಳೆ ಯಶವಂತಪುರದಲ್ಲಿ ಉಪ ಚುನಾವಣಾ ಎದುರಿಸಲು ಸೋಮಶೇಖರ್ ಸಜ್ಜುಗೊಂಡಿದ್ದಾರೆ

ಸರ್ಕಾರ ಕೂಡ ಯಶವಂತಪುರ ಕ್ಕೆ ಅಭಿವೃದ್ಧಿಗೆ ಅಂತ ಹಣ ಬಿಡುಗಡೆ ಮಾಡಿದೆ. ಈಗ ಕಾಂಗ್ರೆಸ್ ನಾಯಕರ ಜೊತೆಗೆ ಕ್ಷೇತ್ರದಲ್ಲಿ ಸಭೆ ಮಾಡಲು ಶುರುಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ನೆಪದಲ್ಲಿ ಕೈ ನಾಯಕರು ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಹಾಗಾಗಿ, ಸೋಮಶೇಖರ್ ಬಿಜೆಪಿ ಬಿಟ್ಟು ತವರು ಮನೆ ಕಾಂಗ್ರೆಸ್ ಸೇರುವ ಸಾಧ್ಯತೆ ಹೆಚ್ಚಾಗಿದೆ.

ಈ ಸುದ್ದಿಯನ್ನೂ ಓದಿ: ST Somashekhar : ಎಸ್‌ಟಿ ಸೋಮಶೇಖರ್‌ಗೆ ಹೈಕಮಾಂಡ್‌ ಬುಲಾವ್‌; ಬಿ.ಎಲ್‌ ಸಂತೋಷ್‌ ಮಾತ್ರ ಅಲ್ಲ ಶಾ ಜತೆಗೂ ಚರ್ಚೆ

ಆಪರೇಷನ್ ಕಮಲದ ಮೂಲಕ ಬಿಜೆಪಿಗೆ…

ಮೂಲತಃ ಕಾಂಗ್ರೆಸ್ ನಾಯಕರಾಗಿದ್ದ ಎಸ್ ಟಿ ಸೋಮಶೇಖರ್ ಅವರು ಈ ಹಿಂದೆ ಆಪರೇಷನ್ ಕಮಲದ ಮೂಲಕ ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾಗಿದ್ದರು. ಎಸ್ ಟಿ ಸೋಮಶೇಖರ್ ಸೇರಿದಂತೆ ಒಟ್ಟು 17 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ. ಇದರ ಪರಿಣಾಮ ಮೈತ್ರಿ ಸರ್ಕಾರವು ಪತನವಾಗಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು ಮತ್ತು ಎಸ್ ಟಿ ಸೋಮಶೇಖರ್ ಕೂಡ ಸಚಿವರಾಗಿದ್ದರು. ಈಗ ಮತ್ತೆ ಸೋಮಶೇಖರ್ ಕಾಂಗ್ರೆಸ್ ಪಕ್ಷಕ್ಕೆ ಮರಳುವ ಪ್ರಯತ್ನ ಮಾಡುತ್ತಿದ್ದಾರೆ.

Exit mobile version