Site icon Vistara News

Priyank Kharge: ರಾಜ್ಯ ಬಿಜೆಪಿ ನಾಯಕರು ಅಯೋಗ್ಯರು ಎಂದ ಪ್ರಿಯಾಂಕ್‌ ಖರ್ಗೆ

Priyank Kharge karnataka jobs reservation

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರ್ನಾಟಕಕ್ಕೆ ಏಕೆ ಬರ್ತಾರೆ ಅನ್ನೋದೇ ಅವರ ಪಕ್ಷದ ಅಯೋಗ್ಯರಿಗೆ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ (BJP Karnataka) ನಾಯಕರ ಮೇಲೆ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹರಿಹಾಯ್ದಿದ್ದಾರೆ. ಈ ಮೂಲಕ ಬಿಜೆಪಿ ನಾಯಕರನ್ನು ಅಯೋಗ್ಯರಿಗೆ ಹೋಲಿಕೆ ಮಾಡಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ರಾಜ್ಯ ಬಿಜೆಪಿಯವರು ಮೊದಲು ನರೇಂದ್ರ ಮೋದಿ ಅವರು ಯಾಕೆ ಬರ್ತಾರೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಹೇಳಿದರು.

ಸದ್ಯ ಬಿಜೆಪಿಯವರಿಗೆ ನಾನು‌ ಮನೆ ದೇವರು ಆಗಿಬಿಟ್ಟಿದ್ದೇನೆ. ನನ್ನ ಬಗ್ಗೆ ಮಾತನಾಡುವ ತನಕ ಅವರಿಗೆ ತಿಂದ ಅನ್ನ ಕರಗುವುದಿಲ್ಲ. ನಾನು ಬಿಜೆಪಿ ನಾಯಕರ ಅಯೋಗ್ಯ ಪದದ ಬಳಕೆ ರೆಕಾರ್ಡ್‌ ಆಗಿದೆಯಾ? ಆ ಪದದ ಸಮಾನಾರ್ಥಕ ಪದ ಯಾವುದು ಇದೆಯೋ ಅದೆಲ್ಲವನ್ನೂ ಬಳಸಿ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿಯ 25 ಸಂಸದರು ಇದ್ದಾರೆ. ಅಷ್ಟು ಜನ ಇದ್ದರೂ ಏನು ಯೋಜನೆ ತಂದಿದ್ದಾರೆ. ಹೀಗಾಗಿ ಬಿಜೆಪಿಯವರು ಅಯೋಗ್ಯರು ಎಂದು ಹೇಳಿದರು.

ಪ್ರಿಯಾಂಕ್‌ ಖರ್ಗೆಗೆ ಆರ್.‌ ಅಶೋಕ್‌ ತಿರುಗೇಟು

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್‌, ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಉತ್ತರ ಕೊಟ್ಟಿದ್ದಾರೆ. ಮಮತಾ ಬ್ಯಾನರ್ಜಿಯವರು ಕಾಂಗ್ರೆಸ್‌ನವರಿಗೆ ಯೋಗ್ಯತೆ ಇಲ್ಲ ಅಂದಿದ್ದಾರೆ. ಪಶ್ಚಿಮ ಬಂಗಾಳದಿಂದ ಕಾಂಗ್ರೆಸ್‌ನವರನ್ನು ಗೆಟೌಟ್ ಅಂದಿದ್ದಾರೆ. ಇದೇ ಪ್ರಿಯಾಂಕ್ ಖರ್ಗೆಗೂ ಉತ್ತರವಾಗಿದೆ. ಇನ್ನು ಎನ್‌ಸಿಪಿ ನಾಯಕ ಶರದ್ ಪವಾರ್ ಅವರೂ ಗೆಟೌಟ್ ಅನ್ನೋದು ದೂರ ಇಲ್ಲ ಎಂದು ಕಿಡಿಕಾರಿದ್ದಾರೆ.

Ram Mandir: ನನಗೆ ಭಕ್ತಿ ಇಲ್ಲ ಏನು ಮಾಡಲಿ ಎಂದಿದ್ದ ಪ್ರಿಯಾಂಕ್‌ ಖರ್ಗೆ

ಇನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿ ವಿರುದ್ಧ ಮಂಗಳವಾರವೂ ಕಿಡಿಕಾರಿದ್ದು, ರಾಮ ಮಂದಿರದ ವಿಚಾರವಾಗಿ ಹರಿಹಾಯ್ದಿದ್ದರು. ರಾಮಮಂದಿರಕ್ಕೆ (Ram Mandir) ಜನರನ್ನು ಕರೆದುಕೊಂಡು ಹೋಗಲು ಬಿಜೆಪಿ (BJP Karnataka) ವ್ಯವಸ್ಥೆ ಮಾಡಿಕೊಳ್ಳಲಿ. ಆದರೆ, ರಾಜ್ಯ ಸರ್ಕಾರದಿಂದ ಅಯೋಧ್ಯೆಗೆ ಕರೆದುಕೊಂಡು ಹೋಗುವ ಯಾವುದೇ ಯೋಜನೆ ಇಲ್ಲ. ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೇಳಿದರು. ಇನ್ನು ರಾಮಮಂದಿರಕ್ಕೆ ಹೋಗುವ ವಿಚಾರಕ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವ ದೇವಾಲಯಕ್ಕೂ ಹೋಗಲ್ಲ ನನಗೆ ಭಕ್ತಿ ಇಲ್ಲ, ಏನು ಮಾಡಲಿ ಎಂದು ಪ್ರಶ್ನೆ ಮಾಡಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಪ್ರಿಯಾಂಕ್‌ ಖರ್ಗೆ, ಬಿಜೆಪಿಯವರು ರಾಮಮಂದಿರಕ್ಕೆ ಕರೆದುಕೊಂಡು ಹೋಗಲಿ. ತೀರ್ಥ ಯಾತ್ರೆ ತಾನೇ ಮಾಡಿಸಲಿ. ಜನರೂ ಸಹ ಅಲ್ಲಿಗೆ ಹೋಗಿ ನೋಡಿದ ಮೇಲೆ ಬಿಜೆಪಿಯವರ ಬಂಡವಾಳ ಏನೆಂಬುದು ಬಯಲಾಗುತ್ತದೆ ಎಂದು ಹೇಳಿದ್ದರು.

ಸಾಧು ಸಂತರ ಪ್ರಶ್ನೆಗೆ ಉತ್ತರ ಕೊಡಿ

ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಏಕೆ ಎಂದು ನಾವು ಕೇಳಿದ ಪ್ರಶ್ನೆ ಅಲ್ಲ. ಇದು ಸಾಧು ಸಂತರ ಪ್ರಶ್ನೆಯಾಗಿದೆ. ಯಾರಿಂದ ಪ್ರಾಣ ಪ್ರತಿಷ್ಠೆ ಮಾಡಿಸಬೇಕಿತ್ತೋ ಅವರು ಈ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಉತ್ತರ ಕೊಡಿ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದರು.

ನಾನು ಜನತಾ ಜನಾರ್ದನನ ಭಕ್ತ

ನನಗೆ ಭಕ್ತಿ ಇಲ್ಲ. ಹೀಗಾಗಿ ನಾನು ಯಾವ ದೇವಾಲಯಕ್ಕೂ ಹೋಗಲ್ಲ. ನೀವು ಯಾರಾದರೂ ಬಾರೋ ಪ್ರಿಯಾಂಕ್ ಹೋಗಿಬರೋಣ ಎಂದು ಕರೆದುಕೊಂಡು ಹೋದರೆ ಬರುತ್ತೇನೆ. ಕಲಿಯಲು ಹೋಗುವುದಕ್ಕೆ ಏನಾಗಬೇಕು? ನಾನು ಜನತಾ ಜನಾರ್ದನನ ಭಕ್ತ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದರು.

ಇದನ್ನೂ ಓದಿ: Lok Sabha Election 2024: 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು!

ಅಯೋಧ್ಯೆಗೆ ಕರೆದೊಕೊಂಡು ಹೋದರೆ ಬರುತ್ತೇನೆ

ಬಿಜೆಪಿ ಶಾಸಕರು ಎಷ್ಟು ಜನ ರಾಮಾಯಣ ಓದಿದ್ದಾರೆ? ಎಷ್ಟು ಜನರಿಗೆ ಹನುಮಾನ್ ಚಾಲೀಸಾ ಬರುತ್ತದೆ? ನಾನು ಋಷಿಕೇಶ, ಬನಾರಸ್ ಎಲ್ಲ ಕಡೆ ಹೋಗಿದ್ದೇನೆ. ನಾನು ನಂಬಿರುವುದು ಬಸವ ತತ್ವ, ಅಂಬೇಡ್ಕರ್ ತತ್ವ ಮತ್ತು ಸಂವಿಧಾನ ತತ್ವ. ನನಗೆ ಭಕ್ತಿ ಇಲ್ಲ ಏನು ಮಾಡಲಿ? ನೀವು ಯಾರಾದರೂ ಅಯೋಧ್ಯೆಗೆ ಕರೆದುಕೊಂಡು ಹೋದರೆ ಅಧ್ಯಯನ ಮಾಡಲು ಬರುತ್ತೇನೆ‌ ಎಂದು ಹೇಳಿದ್ದರು.

Exit mobile version