Site icon Vistara News

ಮತದಾರರ ಗುರುತಿನ ಚೀಟಿಗೆ ಆಧಾರ್‌ ಲಿಂಕ್ ಕಡ್ಡಾಯವಲ್ಲ: ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ

ಆಧಾರ್‌

ಬೆಂಗಳೂರು: ಮತದಾರರ ಗುರುತಿನ ಚೀಟಿಗೆ ಆಧಾರ್‌ ನಂಬರ್‌ ಜೋಡಣೆ ಕಡ್ಡಾಯವಲ್ಲ, ಆದರೆ ಸ್ವಯಂ ಪ್ರೇರಿತವಾಗಿ ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬಹುದು ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ.

ಕೆಲ ಮಾಧ್ಯಮಗಳಲ್ಲಿ ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಕಡ್ಡಾಯ, ಇಲ್ಲದಿದ್ದರೆ ವೋಟರ್‌ ಐಡಿ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಈ ಮಾಹಿತಿ ಭಾರತ ಚುನಾವಣಾ ಆಯೋಗದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಗುರುತಿನ ಚೀಟಿ ದತ್ತಾಂಶದೊಂದಿಗೆ ಆಧಾ‌ರ್‌ ಸಂಖ್ಯೆ ಜೋಡಣೆಯು ಕಡ್ಡಾಯವಲ್ಲ. ಮತದಾರರು ಸ್ವಯಂಪ್ರೇರಿತರಾಗಿ ವೋಟರ್‌ ಐಡಿಗೆ ಆಧಾರ್ ಸಂಖ್ಯೆಯನ್ನು ಬಳಸಿ ಅಥವಾ ಇತರ ನಿಗದಿತ ದಾಖಲೆಗಳ ಮೂಲಕವೂ ದೃಢೀಕರಿಸಬಹುದು ಎಂದು ತಿಳಿಸಿದೆ.

ಇದನ್ನೂ ಓದಿ | Government Hospital | ಸರ್ಕಾರಿ ಆಸ್ಪತ್ರೆಯಲ್ಲಿ ಬೇಡ ಕ್ಯೂ, ಬರಲಿದೆ ಕ್ಯೂಆರ್‌ ಕೋಡ್‌: ಸಚಿವ ಡಾ. ಕೆ. ಸುಧಾಕರ್‌

ಆಧಾರ್‌ ಲಿಂಕ್ ಕಡ್ಡಾಯವೆಂದಿದ್ದ ಬಿಬಿಎಂಪಿ
ಭಾರತ ಚುನಾವಣಾ ಆಯೋಗದ ಸುತ್ತೋಲೆ ಮತ್ತು ಆದೇಶದಂತೆ, ಪ್ರತಿ ಒಬ್ಬ ಮತದಾರರು ಕೂಡ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಸಂಖ್ಯೆಗೆ ಲಿಂಕ್‌ ಮಾಡಿಕೊಳ್ಳುವುದು ಕಡ್ಡಾಯಗೊಳಿಸಿದ್ದು, ಕೂಡಲೇ ತಮ್ಮ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಕೊಳ್ಳಬೇಕು. ಒಂದು ವೇಳೆ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಕೊಳ್ಳದೇ ಇದ್ದಲ್ಲಿ ತಮ್ಮ ಮತದಾರರ ಗುರುತಿನ ಚೀಟಿ ರದ್ದಾಗುವ ಸಾಧ್ಯತೆಗಳಿರುತ್ತವೆ ಎಂದು ಬಿಬಿಎಂಪಿ ಇತ್ತೀಚೆಗೆ ಗೊಂದಲಕಾರಿ ಪ್ರಕಟಣೆ ಹೊರಡಿಸಿತ್ತು. ಇದರಿಂದ ಮತದಾರರಲ್ಲಿ ಗೊಂದಲ ಉಂಟಾಗಿತ್ತು. ಆದರೆ ಇದೀಗ ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಬಿಬಿಎಂಪಿ ನೀಡಿದ್ದ ಪ್ರಕಟಣೆ ಇಲ್ಲಿದೆ:

ಮತದಾರರ ಗುರತಿನ ಚೀಟಿಗೆ ಆಧಾರ್‌ ಲಿಂಕ್‌ ಹೇಗೆ?
ಮತದಾರರ ಗುರುತಿನ ಚೀಟಿಗೆ ಈ ಕೆಳಗಿನ ಆ್ಯಪ್ ಮುಖಾಂತರ ಮನೆಯಲ್ಲಿ ಕುಳಿತುಕೊಂಡು ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬಹುದು.

1.Play Store ಗೆ ಹೋಗಿ Voter Helpline App ಅನ್ನು Install ಮಾಡಿಕೊಳ್ಳಬೇಕು.
2.App ಅನ್ನು install ಮಾಡುವಾಗ Permission ಎಲ್ಲವೂ Allow ಎಂದು ಮಾಡಬೇಕು.
3.App install ಮಾಡಿಕೊಂಡು, App ಕೆಳಗಡೆ ಎಡಬದಿಯಲ್ಲಿ ಇರುವ EXPLORE option ಮೇಲೆ click ಮಾಡಬೇಕು.
4.Electroral Authentication Form- 6B Select ಮಾಡಿಕೊಳ್ಳಬೇಕು.
5.Mobile number ಹಾಕಬೇಕು.
6.ನಿಮ್ಮ ಮೊಬೈಲ್ ನಂಬರ್‌ಗೆ ಒಂದು OTP ಬರುವುದು. ಬಂದು OTP ನಮೂದಿಸಬೇಕು. Verify ಎಂದು ಮಾಡಬೇಕು.
7.ನಿಮ್ಮ Epic ನಂಬರ್ ನಮೂದಿಸಬೇಕು (ಚುನಾವಣಾ ಗುರುತಿನ ಚೀಟಿ ಸಂಖ್ಯೆ) ಮತ್ತು ನಿಮ್ಮ State Select ಮಾಡಿ.
8.ನಿಮ್ಮ ಆಧಾರ್ ನಂಬರ್ ನಮೂದಿಸಬೇಕು.
9.ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.
೧೦. Email ID ಇದ್ದರೆ, ನಮೂದಿಸಿ, ಇರದಿದ್ದರೆ, ಹಾಗೆ ಖಾಲಿ ಬೀಡಿ.
11.ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ.
12.Proceed Option ಒತ್ತಿ
13) Confirm button ಒತ್ತಿ.
14) Successfully ಅಂತಾ ಒಂದು ref number ಬರುತ್ತದೆ.

ಇದನ್ನೂ ಓದಿ | Sand policy | ಬಡವರು, ಮಧ್ಯಮ ವರ್ಗಕ್ಕೂ ಮರಳು ಸಿಗಬೇಕು: ನೀತಿಯಲ್ಲಿ ತಿದ್ದುಪಡಿ ಮಾಡಲು ಸಿಎಂ ಸೂಚನೆ

Exit mobile version