ಚಿಕ್ಕಬಳ್ಳಾಪುರ: ರೈತರಿಗೆ ದಿನಕ್ಕೆ 5 ಗಂಟೆ ವಿದ್ಯುತ್ ಕೊಡುತ್ತೇವೆ ಎಂದವರು ಕೇವಲ 3 ಗಂಟೆ ಕೊಡುತ್ತಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆ ಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದರಿಂದ ರೈತರ ಪಂಪ್ ಸೆಟ್, ಟಿಸಿಗಳು ಸುಟ್ಟು ಹೋಗುತ್ತಿವೆ. ಬರ ಪರಿಹಾರ (Drought Study) ಸೇರಿ ಪ್ರತಿಯೊಂದಕ್ಕೂ ಕೇಂದ್ರದತ್ತ ಬೊಟ್ಟು ಮಾಡುತ್ತಾರೆ. ನಿಮ್ಮ ಖಜಾನೆ ಖಾಲಿಯಾಗಿದ್ಯಾ? ರಾಜ್ಯ ಸರ್ಕಾರ ದಿವಾಳಿಯಾಗಿದೆಯಾ? ಘೋಷಣೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಸಿ.ಟಿ.ರವಿ ಒತ್ತಾಯಿಸಿದರು.
ಜಿಲ್ಲೆಯ ಶಿಡ್ಲಘಟ್ಟ, ಮರಳುಕುಂಟೆ ಸೇರಿ ವಿವಿಧೆಡೆ ಬರ ಸ್ಥಿತಿ ಅಧ್ಯಯನ ಮಾಡಿದ ಬಳಿಕ ಮಾತನಾಡಿದ ಅವರು, ನಿಮ್ಮ ಪಕ್ಷದ ಖಜಾನೆ ಭರ್ತಿ ಮಾಡಲು ಮಗ್ನರಾಗಿದ್ದೀರಿ ಅಂತ ಅನ್ನಿಸುತ್ತಿದೆ. ಕೇಂದ್ರಕ್ಕೆ ರಾಜ್ಯ ಸರ್ಕಾರ 17 ಸಾವಿರ ಕೋಟಿ ರೂ. ಕೇಳಿದ್ದಾರೆ. ಬರಪೀಡಿತ ಪ್ರದೇಶಗಳಿಗೆ ನೀವು ಭೇಟಿ ಕೊಟ್ಟಿದ್ದೀರಾ ಹೇಳಿ? ಸಿಎಂ ಸಿದ್ದರಾಮಯ್ಯ ಚೆನ್ನಾಗಿ ಹಂಪಿಯಲ್ಲಿ ಡಾನ್ಸ್ ಮಾಡಿದ್ದೀರಿ, ಆದರೆ ನೀವು ಡಾನ್ಸ್ ಮಾಡುವ ಟೈಮ್ ಎಂತದ್ದು ಸಿದ್ದರಾಮಯ್ಯನವರೇ? ನಿಮ್ಮ ಡಾನ್ಸ್ ನೋಡಿ ಸಂತಸಪಡುವ ಸ್ಥಿತಿಯಲ್ಲಿಲ್ಲ ಎಂದು ಟೀಕಿಸಿದರು.
ನಿಮ್ಮ ಸರ್ಕಾರ ತಾಳ ತಪ್ಪಿದೆ, ನಾನೇ ಮುಖ್ಯಮಂತ್ರಿ ನಾನೇ ಮುಖ್ಯಮಂತ್ರಿ ಅಂತ ಕಿತ್ತಾಡುತ್ತಿದ್ದೀರಿ. ನಿಮ್ಮ ತಪ್ಪನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಎಂದ ಅವರು, ಸುರ್ಜೇವಾಲ ಕೈಗೆ ಸರ್ಕಾರದ ಮತ್ತೋಂದು ಕಿಲಿ ಕೈ ಕೊಟ್ಟಿದ್ದೀರಿ. ಇದರ ಪರಿಣಾಮ ಏನೂ ಅರಿತಿದ್ದೀರಾ? ಮೈಸೂರು ದಸರಾದಲ್ಲಿ ಕಲಾವಿದರಿಗೆ ಸರ್ಕಾರ ಕೊಟ್ಟ ಚೆಕ್ ಬೌನ್ಸ್ ಆಗಿದೆ. ಇದರಿಂದ ರಾಜ್ಯದ ಮಾನ ಹರಾಜಾಗಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಿಂದ ಲಂಚ ಕೇಳುತ್ತಾರೆ ಎಂದರ ಪರಿಸ್ಥಿತಿ ಹೇಗಿದೆ ಎಂದು ಅರ್ಥವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | CM Siddaramaiah : ಈಶ್ವರಪ್ಪ ಒಂದು ಸವಕಲು ನಾಣ್ಯ, ಅವರ ಮಾತಿಗೆ ಬೆಲೆ ಕೊಡಬೇಡಿ ಎಂದ ಸಿಎಂ ಸಿದ್ದರಾಮಯ್ಯ
7 ಗಂಟೆ ನಿರಂತರ ವಿದ್ಯುತ್ ಕೊಡಬೇಕಿತ್ತು. ಬೆಳೆ ನಷ್ಟ ಪರಿಹಾರ ಬೇಗ ಬಿಡುಗಡೆ ಮಾಡಿ. ವಿದ್ಯುತ್ ಮಗ್ಗದವರಿಗೆ ನಿರಂತರ ವಿದ್ಯುತ್ ಇಲ್ಲ, ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ. ವಿದ್ಯುತ್ ಬಿಲ್‌ನಲ್ಲಿ ಇಂಧನ ಹೊಂದಾಣಿಕೆ ಶುಲ್ಕ ಹೆಸರಿನಲ್ಲಿ ಲೂಟಿ ಆಗುತ್ತಿದೆ. ನಿಮಗೆ ಅಧಿಕಾರ ನಡೆಸಲು ಯೋಗ್ಯತೆ ಇಲ್ಲದಿದ್ದರೆ ತೊಲಗಿ, ಕೆಆರ್‌ಎಸ್ ಇತರೆ ಡ್ಯಾಂಗಲು ಖಾಲಿ, ಬೆಂಗಳೂರಿಗೆ ನೀರಿಲ್ಲ. ಇನ್ನೂ ಬೇಸಿಗೆ ಆರಂಭವಾಗಿಲ್ಲ ಮುಂದಿನ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರನ್ನು ನಂಬಿದ್ದರೆ ಅರ್ಧ ಜನ ಸಾಯಬೇಕಿತ್ತು
ಸಿದ್ದರಾಮಯ್ಯನವರೇ ಎಲ್ಲಿ ನಿಮ್ಮ 10 ಕೆ.ಜಿ. ಅಕ್ಕಿ? 5 ಕೆಜಿ ಕೊಡುತ್ತಿರುವುದು ನರೇಂದ್ರ ಮೋದಿ, ಆದರೆ, ನೀವು ಅದರಲ್ಲೂ ಕಡಿತ ಮಾಡಿ ಕೊಡುತ್ತಿದ್ದೀರಿ. ಸಿದ್ದರಾಮಯ್ಯನ ನಂಬಿ ಜನ ಬದುಕುವುದಾಗಿದ್ದರೆ ಅರ್ಧ ಜನ ಸಾಯಬೇಕಿತ್ತು. ಕಾಂಗ್ರೆಸ್‌ನವರ ನಂಬಿದರೆ ರಾಜ್ಯ, ದೇಶದಲ್ಲೂ ಅರ್ಧ ಜನ ಸಾಯಬೇಕು. 5 ಕೆಜಿ ಅಕ್ಕಿ ಮುಂದುವರಿಸುತ್ತೀವಿ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಸಿದ್ದರಾಮಯ್ಯ ನಂಬಿ ಜನ ಊಟ ಮಾಡುವುದಾದರೆ ಉಪವಾಸ ಇದ್ದು ಸಾಯಬೇಕು. ಮೋದಿ ಪುಣ್ಯಾತ್ಮ ಕೋಡುತ್ತಿರುವುದರಿಂದ ಜನ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಬಿಜೆಪಿಯದ್ದು ಎಣ್ಣೆ ಸೀಗೆಕಾಯಿ ಸಂಬಂಧ. ಅಜೀರ್ಣ ಅಗುವಷ್ಟು ಶಾಸಕರ ಬೆಂಬಲ ಕಾಂಗ್ರೆಸ್‌ಗೆ ಇದೆ. ಬೇರೆ ಪಕ್ಷದವರ ಬೆಂಬಲ ಯಾಕೆ ಬೇಕು ಎಂದರು. ಬರದ ವಿಚಾರದಲ್ಲಿ ಕೇಂದ್ರ ಸರ್ಕಾರದ ಸ್ಪಂದನೆ ಸಿಗುತ್ತಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಹೈಕಮಾಂಡ್‌ನವರಿಗೆ ಕೊಟ್ಟ ಅರ್ಧ ಭಾಗನೂ ರೈತರಿಗೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಬಿಜೆಪಿ ನೇರವಾಗಿ ತೊಡಗಿಸಿಕೊಂಡಿತ್ತು. ರಾಮಮಂದಿರಕ್ಕೆ ವಿರೋಧ ಮಾಡಿದ್ದು ಕಾಂಗ್ರೆಸ್ ಪಾರ್ಟಿ. ಹಜ್ ಯಾತ್ರೆಗೆ ಕಳುಹಿಸುವುದು ಮಾತ್ರ ಜಾತ್ಯತೀತತೆಯೇ? ಅಯೋಧ್ಯೆ ಯಾತ್ರೆ ಕಳುಹಿಸಿದರೆ ಜಾತ್ಯತೀತತೆಗೆ ಭಂಗ ಬರುತ್ತಾ? ಎಲೆಕ್ಷನ್ ಟೈಂನಲ್ಲಿ ಹಿಂದುಗಳು ಇದೇ ರೀತಿ ಮಾತನಾಡುತ್ತಾರೆ. ನಾವು ಹುಟ್ಟಿನಿಂದ ಸಾಯೋವರೆಗೂ ಹಿಂದುಗಳು. ಎಲೆಕ್ಷನ್ ಟೈಂಲ್ಲಿ ನಾಮನೂ ಉದ್ದುದ್ದಾ ಬರುತ್ತೆ. ಜೈ ಶ್ರೀರಾಮ್ ಘೋಷಣೆ ಹರಹರ ಮಹಾದೇವ ಘೋಷಣೆಗಳು ಬರುತ್ತವೆ. ಅಮೇಲೆ ನಾಪತ್ತೆ ಆಗುತ್ತಾರೆ. ನಾವು ಹುಟ್ಟಿದ್ದು ಹಿಂದು ಆಗಿ ಸಾಯುವುದು ಹಿಂದು ಆಗಿಯೇ. ಜಾತ್ಯತೀತತೆ ಎಂದರೆ ಸರ್ವ ಧರ್ಮ ಭಾವ, ತಾಲಿಬಾನ್ ಹಮಾಸ್‌ಗಳ ಬಳಿ ಸರ್ವ ಧರ್ಮ ಭಾವ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರರ್‌ಗೆ ತಿರುಗೇಟು ನೀಡಿದರು.
ಇದನ್ನೂ ಓದಿ | Congress Karnataka : ಡಿಕೆಶಿ ಸಿಎಂ ಆಗೋದರಲ್ಲಿ ಅನುಮಾನವೇ ಇಲ್ಲ ಎಂದ ಮತ್ತೊಬ್ಬ ಶಾಸಕ! ಹೈಕಮಾಂಡ್ ಮಾತಿಗೆ ಇಲ್ಲ ಬೆಲೆ
ಕೇಂದ್ರದ ಮೇಲೆ ಆರೋಪ ಮಾಡುವುದೇ ಇವರ ಸಾಧನೆ
ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದೇ ಇವರ ಸಾಧನೆ. 320 ಕೋಟಿ ರೂ. ಬರ ಪರಿಹಾರ ಕೊಟ್ಟಿದ್ದೀವಿ ಎಂದು ಹೇಳುತ್ತಿದ್ದಾರೆ. ಇದುವರೆಗೂ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯ ಖಜಾನೆಯನ್ನು ಜನರಿಗೆ ಬಳಸದೇ ಪಕ್ಷದ ಕೆಲಸಕ್ಕೆ ಬಳಸುತ್ತಿದ್ದಾರೆ. ನೆನ್ನೆಯಷ್ಟೆ ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಬರಪೀಡಿತ ಚರ್ಚೆ ಮಾಡುವುದಿಲ್ಲ, ಆದರೆ, ಮುಖ್ಯಮಂತ್ರಿಗಳು ಹಂಪಿಯಲ್ಲಿ ಡಾನ್ಸ್ ಮಾಡಿದ್ದೀರಿ, ನೀವು ತಾಳಕ್ಕೆ ತಕ್ಕಹಾಗೆ ಡಾನ್ಸ್ ಮಾಡಿದ್ದೀರಿ. ನಿಮ್ಮ ಸರ್ಕಾರ ತಾಳ ತಪ್ಪಿದ್ದು, ಅಭದ್ರತೆಯಲ್ಲಿದೆ. ಯಾವುದೆ ಜನಪರ ನಿಲುವು ಜಾರಿಗೆ ತಂದಿಲ್ಲ. ನಿಮ್ಮ ಬೊಕ್ಕಸ ಖಾಲಿಯಾಗದಿದ್ರೆ ಬರಪರಿಹಾರ ಬಿಡುಗಡೆ ಮಾಡಿ, ಇಲ್ಲ ಅಂದ್ರೆ ಸರ್ಕಾರದ ಖಜಾನೆ ಖಾಲಿಯಾಗಿದೆ ಅಂತ ಒಪ್ಪಿಕೊಳ್ಳಿ. ರೈತರಿಗೆ ಬರ ಪರಿಹಾರ ಕೊಡೋದಕ್ಕೆ ಸರ್ಕಾರ ಪಾಪರ್ ಆಗಿದೆಯೇ ಎಂದು ಕಿಡಿಕಾರಿದರು.