ಮಂಡ್ಯ : ಓಟ್ ಬ್ಯಾಂಕ್ ಅಲ್ಲ ಎಂಬ ಕಾರಣಕ್ಕೆ ಮೈಸೂರು ಮಹಾರಾಜರು ಹಾಗೂ ಸರ್. ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ಕೃಷ್ಣ ರಾಜ ಸಾಗರ (KRS) ಡ್ಯಾಂ ಬಳಿ ನಿರ್ಮಿಸಲು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸರ್.ಎಂ. ವಿಶ್ವೇಶ್ವರಯ್ಯ ಅವರ ಮೊಮ್ಮಗ ಸತೀಶ್ ಮೋಕ್ಷಗುಂಡಂ ಮಂಗಳವಾರ ಬೇಸರ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಡ್ಯಾಂಗೆ ಕುಟುಂಬಸ್ಥರ ಜತೆಗೆ ಭೇಟಿ ಸತೀಶ್ ಭೇಟಿ ನೀಡಿದರು. ಕನ್ನಂಬಾಡಿ ಅಣೆಕಟ್ಟೆ ವೀಕ್ಷಣೆಮಾಡಿದರು. ಸತೀಶ್ ಮೊಕ್ಷಗುಂಡಂ, ಸರ್.ಎಂ.ವಿ ಸಹೋದರನ ಪುತ್ರರಾಗಿದ್ದು, KRS ಡ್ಯಾಂ ವೀಕ್ಷಿಸಿ ಕಣ್ತುಂಬಿಕೊಂಡರು. ಅಣೆಕಟ್ಟೆಯ ಗೇಟ್, ಸರ್.ಎಂ.ವಿ ನಾಲೆ, ಹಿನ್ನೀರು, ಬೃಂದಾವನ ವೀಕ್ಷಿಸಿ, ಪ್ರಸ್ತುತ ಅಣೆಕಟ್ಟು ಹಾಗೂ ಗೇಟುಗಳ ಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಮೈಸೂರು ರಾಜರ ಕಾರ್ಯ ಹಾಗೂ ಸರ್.ಎಂ.ವಿ ಯವರ ತಂತ್ರಜ್ಞಾನದ ಕೊಡುಗೆ ಬಗ್ಗೆ ಸ್ಮರಿಸಿದರು.
ಇದನ್ನೂ ಓದಿ :ಮುಂದಿನ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ MP: ಸಚಿವ ನಾರಾಯಣಗೌಡ ಹೇಳಿಕೆ
ನಂತರ ಮಾತನಾಡಿದ ಸತೀಶ್ ಮೋಕ್ಷಗುಂಡಂ, ಇದೇ ಮೊದಲ ಬಾರಿ ಬೃಂದಾವನ, ಸರ್.ಎಂ.ವಿ ನಾಲೆ ವೀಕ್ಷಣೆ ಮಾಡಿದ್ದೇನೆ. ಸರ್.ಎಂ.ವಿ ಅವರು ಜನರಿಗಾಗಿ, ಸಮಾಜಕ್ಕಾಗಿ ಈ ಡ್ಯಾಂ ಕಟ್ಟಿದ್ದಾರೆ. ಕೆ.ಆರ್.ಎಸ್ (KRS) ಡ್ಯಾಂ ನೋಡುವಾಗ ಮಹಾರಾಜರು, ವಿಶ್ವೇಶ್ವರಯ್ಯರನ್ನ ನೆನಪಿಸಿಕೊಳ್ಳಬೇಕು. ಮಹಾರಾಜರು ಮತ್ತು ಸರ್.ಎಂ.ವಿ ಇಬ್ಬರ ಪ್ರತಿಮೆಯು ಕೆ.ಆರ್.ಎಸ್ ಮುಖ್ಯದ್ವಾರದಲ್ಲಿ ನಿರ್ಮಾಣವಾಗಬೇಕು. ಕೆಲವರು ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ಏಕೆಂದರೆ ಅವರಿಬ್ಬರೂ ಕೂಡ ಓಟಿಂಗ್ ಕ್ರೌಡ್ ಇಲ್ಲ. ಹಾಗೊಂದು ವೇಳೆ ಅವರಿಬ್ಬರಿಗೂ ಓಟ್ ಬ್ಯಾಂಕ್ ಇದ್ದಿದ್ದರೆ ಯಶಸ್ವಿಯಾಗಿರುತ್ತಿತ್ತುʼ ಎಂದು ಬೇಸರ ವ್ಯಕ್ತಪಡಿಸಿದರು.