ಬೆಂಗಳೂರು: ಈ ಇಬ್ಬರು ಖದೀಮರು ಮದ್ಯ ಕುಡಿದು ರಸ್ತೆಗಿಳಿದರೆ ಮುಗೀತು ಅಂದು ಕಳ್ಳತನ ಫಿಕ್ಸ್ . ಕಾರಾದರೂ ಸರಿ ಬೈಕ್ ಆದರೂ ಸರಿ . ಯಾವುದಾದರೊಂದನ್ನು ಕದಿಯದೆ ಮನೆಗೆ ಹೋಗುತ್ತಿರಲಿಲ್ಲ. ಅಂತಹ ಖತರ್ನಾಕ್ ಜೋಡಿಯನ್ನು ಹುಳಿಮಾವು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ನದೀಂ ಅಹ್ಮದ್ ಹಾಗು ಗುಲಾಂ ಹುಸೇನ್ ಬಂಧಿತ ಆರೋಪಿಗಳು. ವಿಪರೀತ ಕುಡಿತದ ಚಟ ಇರುವ ಈ ಜೋಡಿ ಕುಡಿತಕ್ಕಾಗಿ, ಐಷಾರಾಮಿ ಜೀವನ ಮಾಡಲೆಂದೇ ಕಳ್ಳತನ ಮಾಡುತ್ತಿದ್ದರು. ಇನ್ನು ವಾಹನ ಕದ್ದ ಬಳಿಕ ಮೊದಲು ನಂಬರ್ ಪ್ಲೇಟ್ ಚೇಂಜ್ ಮಾಡುತ್ತಿದ್ದರು. ಹೀಗಾಗಿ ಪೊಲೀಸ್ ಠಾಣೆಯಲ್ಲಿ ರಿಪೋರ್ಟ್ ಆದರೂ ನಂಬರ್ ಪ್ಲೇಟ್ ಬದಲಾದ ಹಿನ್ನಲೆ ಪೊಲೀಸರಿಗೆ ವಾಹನ ಪತ್ತೆ ಹಚ್ಚಲು ಕಷ್ಟವಾಗುತ್ತಿತ್ತು.
ಹೆಚ್ಚು ಡಿಮ್ಯಾಂಡೇನೂ ಇರಲಿಲ್ಲ!
ಕದ್ದ ವಾಹನವಾದ್ದರಿಂದ ಮಾರಾಟದ ವೇಳೆ ಖದೀಮರು ಹೆಚ್ಚಿಗೆ ಡಿಮ್ಯಾಂಡ್ ಮಾಡುತ್ತಿರಲಿಲ್ಲ ಎಷ್ಟು ಹಣ ಸಿಗುತ್ತೋ ಅಷ್ಟಕ್ಕೆ ಮಾರಾಟ ಮಾಡಿಬಿಡುತ್ತಿದ್ದರು. ಈ ರೀತಿ ಕದ್ದ ಹತ್ತಾರು ವಾಹನಗಳನ್ನ ನಕಲಿ ನಂಬರ್ ಪ್ಲೇಟ್ ಬಳಸಿ ಈಗಾಗಲೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ಒಂದು ಆಟೋ, ಎರಡು ಕಾರು ಹಾಗು ಆರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಹುಳಿ ಮಾವು ಸೇರಿದಂತೆ ಹಲವೆಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಅಂದ ಹಾಗೆ ಇವರನ್ನು ಬಂಧಿಸಿ ಜೈಲಿಗಟ್ಟಿದ್ದು ಹುಳಿಮಾವು ಪೊಲೀಸರು.
ಇದನ್ನೂ ಓದಿ| ಬಿ.ಕಾಂ. ಓದಿ ಕಾರು ಕಳ್ಳತನಕ್ಕೆ ಇಳಿದ: ಟೆಕ್ನಾಲಜಿಯೇ ಈತನ ಬಂಡವಾಳ