ಬೆಂಗಳೂರು : ಯಾವಾಗಲೂ ಸುದ್ದಿಯಲ್ಲಿರುವ ನಿತ್ಯಾನಂದ ಸ್ವಾಮಿ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಂದಿದೆ. ಅನಾರೋಗ್ಯದಿಂದ ಅವರು ಹಾಸಿಗೆ ಹಿಡಿದಿದ್ರಾ? ಸಾವನಪ್ಪಿದ್ದಾರಾ? ಎನ್ನುವ ವದಂತಿಗೆ ಈಗ ಫುಲ್‌ಸ್ಟಾಪ್ ಬಿದ್ದಿದೆ. ಹೌದು. ಫೇಸ್‌ಬುಕ್ ಪೇಜ್ ಮೂಲಕ ತಮ್ ಇರುವಿಕೆಯನ್ನು ನಿತ್ಯಾನಂದ ಘೋಷಿಸಿದ್ದಾರೆ.
ನಿತ್ಯಾನಂದ ಸ್ವಾಮಿ ಅನಾರೋಗ್ಯದಿಂದ ಸತ್ತು ಹೋಗಿದ್ದಾರೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಿಳಿಸುತ್ತಿದ್ದರು. ಇನ್ನು ಕೆಲವರು, ನಿತ್ಯಾನಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ವೈದ್ಯರಿಗೂ ರೋಗ ಪತ್ತೆಯಾಗುತ್ತಿಲ್ಲ ಎಂದು ವದಂತಿಗಳನ್ನು ಹಬ್ಬಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿ ಫೇಸ್‌ಬುಕ್ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಭಕ್ತಾದಿಗಳಿಗೆ ಕ್ಲಾರಿಟಿ ನೀಡಿದ್ದಾರೆ.
ಸತ್ತು ಹೋಗಿದ್ದೇನೆಂದು ವಿರೋಧಿಗಳು ವದಂತಿ ಹರಡುತ್ತಿದ್ದಾರೆ. ಆದರೆ ನಾನು ಸತ್ತೂ ಹೋಗಿಲ್ಲ, ಎಲ್ಲಿಗೂ ಓಡಿಯೂ ಹೋಗಿಲ್ಲ ಸಮಾಧಿಯಲ್ಲಿದ್ದೇನೆ ಅಂತ ಶಿಷ್ಯರಿಗೆ ಹೇಳಲು ಬಯಸುತ್ತೇನೆ. ಮಾತಾಡುವ ಅಥವಾ ಸತ್ಸಂಗ ನೀಡೋದಕ್ಕೆ ಸಮಯ ಬೇಕು.. ಇನ್ನೂ ಕೈಲಾಸದ ಸ್ಥಳ ಮತ್ತು ವೈಬ್‌ಗಳು ಚಿತ್ತಸ್ಥಿತಿಯಲ್ಲಿವೆ. ದ್ವೇಷಿಗಳು ಫೋಟೋಗಳನ್ನು ನಕಲಿ ಎನ್ನುತ್ತಿದ್ದಾರೆ . ಇಂತವರು ತಿರುವಣ್ಣಾಮಲೈ ಅರುಣಗಿರಿಗೆ ಹೋಗಬೇಕು.. ಅಷ್ಟೇ ಅಲ್ಲದೇ ಯೋಗೇಶ್ವರನ ಸಮಾಧಿಗೆ ಹೋಗಿ ದೀಪಗಳನ್ನ ಬೆಳಗಿಸಲಿ. ನಾನು ಇನ್ನೂ ವೈದ್ಯಕೀಯ ಆರೈಕೆಯಿಂದ ಹೊರ ಬಂದಿಲ್ಲ. 27 ವೈದ್ಯರು ಮತ್ತು ಭಕ್ತರು, ಸಂಶೋಧಕರಂತೆ ನಮ್ಮಲ್ಲಿ ಇದ್ನದಾರೆ. ನನ್ನ ನಿತ್ಯ ಶಿವಪೂಜೆ ಮಾತ್ರ ನಿಯಮಿತವಾಗಿ ನಡೆಯುತ್ತದೆ ಆದರೆ ಇನ್ನೂ ತಿನ್ನುವುದು, ಮಲಗುವುದು ಆರಂಭವಾಗಿಲ್ಲ. ನಾನು ನಿತ್ಯ ಪೂಜೆಗಾಗಿ ಸಮಾಧಿಯಲ್ಲಿ ನೆಲೆಸಿರುತ್ತೇನೆ. ಕೆಲವೊಮ್ಮೆ ನಿಮ್ಮ ಕಾಮೆಂಟ್ ನೋಡಿ, ಪ್ರತಿಕ್ರಿಯೆ ನೀಡುತ್ತೇನೆ. ಭಕ್ತರೆಲ್ಲಾ ನಾನು ಗುಣಮುಖರಾಗಬೇಕೆಂದು ಹಾರೈಸುತ್ತಿದ್ದಾರೆ. ಆದರೆ ವಾಸ್ತವವಾಗಿ ನಾನು ಅನಾರೋಗ್ಯದಿಂದ ಬಳಲುತ್ತಿಲ್ಲ. ವೈದ್ಯರು ಯಾವುದೇ ರೋಗ ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಇಲ್ಲಿರೋದಕ್ಕಿಂತ ಹೆಚ್ಚಾಗಿ ಕೈಲಾಸದಲ್ಲಿ ಕಳೆಯಲು ಬಯಸುತ್ತೇನೆ. ನಾನು ಎಲ್ಲಾ ಭಕ್ತರನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಎಂದು ನಿತ್ಯಾನಂದ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ʼಸಮಾಜಕ್ಕಾಗಿ ಬದುಕುವ ಸ್ವಾಮೀಜಿಗಳನ್ನು ನಾವು ಗೌರವಿಸುತ್ತೇವೆʼ: ಮಾಜಿ ಸಿಎಂ ಸಿದ್ದರಾಮಯ್ಯ