Site icon Vistara News

Street dog attack: ಶಾಲಾ ವಿದ್ಯಾರ್ಥಿಗಳ ಮೇಲೆ ಬೀದಿ ನಾಯಿ ದಾಳಿ, ನಾಲ್ವರಿಗೆ ಗಾಯ

street dog attack

#image_title

ಧಾರವಾಡ: ಹೆಚ್ಚುತ್ತಿರುವ ಬೀದಿ ನಾಯಿಗಳು ಮತ್ತು ಅವುಗಳ ಅವಾಂತರದ ಬಗ್ಗೆ ಹಲವು ವರದಿಗಳು ಬರುತ್ತಿರುವ ನಡುವೆಯೇ ಧಾರವಾಡದಲ್ಲಿ (Dharwad news) ಶಾಲಾ ಮಕ್ಕಳ (School Students) ಮೇಲೆ ಬೀದಿ‌ ನಾಯಿಯೊಂದು (Street dog attack) ದಾಳಿ ಮಾಡಿದೆ.

ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಘಟನೆ ನಡೆದಿದ್ದು ಮಕ್ಕಳು ಶಾಲೆಗೆ ಹೋಗುತ್ತಿದ್ದಾಗ ಬೆನ್ನಟ್ಟಿ ಬಂದ ನಾಯಿ ನಾಲ್ವರು ವಿದ್ಯಾರ್ಥಿಗಳನ್ನು ಕಚ್ಚಿದೆ. ಗಾಯಗೊಂಡ ನಾಲ್ವರೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಮಾತ್ರವಲ್ಲ, ಮೂವರು ಹಿರಿಯರ ಮೇಲೂ ದಾಳಿ ನಡೆದಿದೆ.

ಅನಸ್ ಬಸ್ಸಾಪುರ, ಫರಾನ್ ಕುಂಬಾರಿ, ಶ್ರವಣ ಮಿರಾಶಿ, ಕೆಂಪಣ್ಣ ಭಜಂತ್ರಿ ಎಂಬ ಮಕ್ಕಳು ಬೆಳಗ್ಗೆ ಶಾಲೆಗೆ ಹೋಗುತ್ತಿದ್ದಾಗ ನಾಯಿ ಬೆನ್ನಟ್ಟಿ ಬಂದಿದೆ. ಮಕ್ಕಳು ಕೂಡಾ ಭಯದಿಂದ ಓಡಿದ್ದು ಈ ನಾಯಿ ಅವರೆಲ್ಲರನ್ನೂ ಕಚ್ಚಿದೆ.

ಗಾಯಾಳುಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಅಳ್ನಾವರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಂದೆ-ತಾಯಿ, ಮಗಳು ಆತ್ಮಹತ್ಯೆ; ಅಕ್ಕ-ಬಾವನ ಕಿರುಕುಳ ಕಾರಣ

ಚಾಮರಾಜನಗರ: ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು (Family suicide) ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ (Chamaraja nagara news) ನಡೆದಿದೆ.

ಚಾಮರಾಜನಗರ ತಾಲೂಕಿನ‌ ಬೇಡರಪುರ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟವರನ್ನು ಮಹದೇವಸ್ವಾಮಿ (48), ಸವಿತಾ (40), ಸಿಂಚನಾ (13) ಎಂದು ಗುರುತಿಸಿದ್ದಾರೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.

ಸಾವಿಗೆ ಶರಣಾದ ಕುಟುಂಬ

ಶುಕ್ರವಾರ ಬೆಳಗ್ಗೆ ಪಕ್ಕದ ಮನೆಯವರು ಮನೆಗೆ ಹೋದಾಗ ಮನೆಯಲ್ಲಿದ್ದ ಮೂವರೂ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ‌ ಕಾರಣ ತಿಳಿದುಬಂದಿಲ್ಲ. ಆದರೆ, ಇವರ ಕುಟುಂಬಗಳ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತಿತ್ತು ಎಂದು ಹೇಳಲಾಗಿದೆ. ಆದರೆ, ಸಾವಿಗೆ ಅದೇ ಕಾರಣವಾಯಿತು ಎನ್ನಲಾಗಿದೆ.

ಡೆತ್‌ ನೋಟ್‌ನಲ್ಲಿ ಬರೆದಿದ್ದೇನು?

ಸಾವಿಗೆ ಮುನ್ನ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ, ತಮ್ಮ ಅಕ್ಕ ಬಾವಂದಿತೇ ನಮ್ಮ ಸಾವಿಗೆ ಕಾರಣ ಎಂದು ಮಹದೇವಸ್ವಾಮಿ ಬರೆದಿದ್ದಾರೆ.

ಅಕ್ಕ ಮಂಜುಳಾ ಬಾವ ಮಲ್ಲೇಶ್, ಮಹದೇವಪ್ಪ, ತಾಯಿ ದೇವಿರಮ್ಮ ಅವರಿಗೆ ಶಿಕ್ಷೆಯಾಗಬೇಕು. ನಮ್ಮ ಆಸ್ತಿಯನ್ನು ಯಾವ ಕಾರಣಕ್ಕೂ ಇವರಿಗೆ ನೀಡಬೇಡಿ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಮೃತ ಮಹದೇವಸ್ವಾಮಿ.

ಸದ್ಯ ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version