ಮಂಗಳೂರು: ನಗರದ ಕದ್ರಿ ಶಿವಭಾಗ್‌ನಲ್ಲಿರುವ ಅಪಾರ್ಟ್‌ಮೆಂಟ್ (Managalore Apartment) ಒಂದರ ಐದನೇ ಮಹಡಿಯಿಂದ ಜಾರಿ ಬಿದ್ದು ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ (Medical student) ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಮೂಲತಃ ಅಡ್ಯಾರ್ ನಿವಾಸಿಯಾಗಿದ್ದು, ಸದ್ಯ ಕದ್ರಿ ಶಿವಭಾಗ್ ನಲ್ಲಿ ವಾಸವಾಗಿದ್ದ ಸಮಯ್ (21) ಸಾವನ್ನಪ್ಪಿದ ಮೆಡಿಕಲ್ ವಿದ್ಯಾರ್ಥಿ (Student death).
ಭಾನುವಾರ ಮುಂಜಾನೆ ಶಿವಭಾಗ್ ಅಪಾರ್ಟ್‌ಮೆಂಟ್‌ನ ತಮ್ಮ ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಸಮಯ್ ಅವರು ಓದುತ್ತಿದ್ದಾಗ ಅವರ ತಾಯಿ ಕಾರು ವಾಷ್ ಮಾಡಲು ನೆಲಮಹಡಿಗೆ ಹೋಗೋಣ ಎಂದು ಹೇಳಿ ಹೋಗಿದ್ದರು
ಈ ವೇಳೆ ಸಮಯ್ ಅವರು ಬಾತ್‌ರೂಂಗೆ ಹೋಗಿ ಬಂದು, ಬಳಿಕ ನೆಲಮಹಡಿಯ ಪಾರ್ಕಿಂಗ್ ಜಾಗದಲ್ಲಿರುವ ತನ್ನ ತಾಯಿ ಬಳಿ ಕಾರು ತೊಳೆಯಲು ಬಕೆಟ್ ಕೊಂಡು ಹೋಗಿದ್ದೀರಾ ಎಂದು ಬಾಲ್ಕನಿಯಿಂದ ಕೇಳಿದ್ದಾರೆ.
ಈ ವೇಳೆ ಬಾಲ್ಕನಿಯಿಂದ ಬಾಗಿದ್ದ ಅವರು ಜಾರಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ. ಮಳೆ ನೀರಿನ ಹನಿಯಿಂದ ಒದ್ದೆಯಾಗಿದ್ದ ಬಾಲ್ಕನಿಯಿಂದ ಬಾಗಿದ ಕಾರಣ ಅವರು ಜಾರಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.
ಸಮಯ್ ಅವರ ತಂದೆ ಸಿವಿಲ್ ಎಂಜಿನಿಯರ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಈ ದಂಪತಿಯ ಇಬ್ಬರು ಗಂಡು ಮಕ್ಕಳಲ್ಲಿ ಸಮಯ್ ಹಿರಿಯವರಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Death News : ಮಂಗಳೂರಿನಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಜೋಕಾಲಿ ಹಗ್ಗವೇ ಕುತ್ತಿಗೆಗೆ ಬಿಗಿದು ಹೆಣ್ಣು ಮಗುವಿನ ದುರ್ಮರಣ
ಹಾಸನ: ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿ ಕುಣಿಕೇರಿ ಗ್ರಾಮದಲ್ಲಿ ನಡೆದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿನಿ ಸಾನಿತ (9) ಮೃತಪಟ್ಟ ಬಾಲಕಿ. ಹೆತ್ತವರು ಸೀರೆಯಲ್ಲಿ ಹಾಕಿಕೊಟ್ಟಿದ್ದ ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಅದು ಕುತ್ತಿಗೆಗೆ ಬಿಗಿದುಕೊಂಡಿದೆ.
ಬಸವರಾಜು ಮತ್ತು ಬೇಬಿ ದಂಪತಿಯ ಒಬ್ಬಳೇ ಪುತ್ರಿ ಸಾನಿತಾ. ಮಗಳಿಗೆ ಆಡಲೆಂದು ಮನೆಯೊಳಗೆ ಸೀರೆಯಿಂದ ಜೋಕಾಲಿಯೊಂದನ್ನು ಪೋಷಕರು ಸಿದ್ಧಪಡಿಸಿಕೊಟ್ಟಿದ್ದರು. ಆಂತೆಯೇ ಸಾನಿತಾ ಅದರಲ್ಲಿ ಕುಳಿತು ಆಡುತ್ತಿದ್ದಳು. ಜೋಕಾಲಿ ಆಡುತ್ತಿದಾಗ ಸೀರೆ ಬಿಗಿಯಾಗಲು ಆರಂಭಿಸಿದ್ದು ಸಾನಿತಾಳ ಕುತ್ತಿಗೆಗೆ ಏಕಾಏಕಿ ಬಿಗಿದುಕೊಂಡಿದೆ. ಸಣ್ಣ ಬಾಲಕಿಯಾಗಿರುವ ಆಕೆಗೆ ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಉಸಿರಗಟ್ಟಿ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಪೊಷಕರ ಅಕ್ರಂದನ ಮುಗಿಲುಮುಟ್ಟಿದೆ. ಸಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.