ಬಾಗಲಕೋಟೆ: ಪರೀಕ್ಷೆ ಬರೆಯುವಾಗ ಹಠಾತ್ ಹೃದಯಾಘಾತವಾಗಿ 9ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ (Heart Attack) ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ನಡೆದಿದೆ.
ಹುಲ್ಯಾಳ ಗ್ರಾಮದ ಶಂಭುಲಿಂಗೇಶ್ವರ ಮಾಧ್ಯಮಿಕ ಶಾಲೆಯ ರಾಹುಲ್ ಕೋಲಕಾರ (15) ಮೃತ ವಿದ್ಯಾರ್ಥಿ. ಶಾಲೆಯಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದಾಗ ವಿದ್ಯಾರ್ಥಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಬಾಲಕನನ್ನು ಶಾಲಾ ಸಿಬ್ಬಂದಿ ಹತ್ತಿರದ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ | CCB Raid : ಅವಧಿ ಮೀರಿದ ಔಷಧಿ ಸೇಲ್ ಮಾಡುತ್ತಿದ್ದ ತಂದೆ-ಮಗ; ಫಾರ್ಮಸಿ ಮೇಲೆ ಸಿಸಿಬಿ ದಾಳಿ
ಶಾಲೆಗೆ ಹೋಗಿದ್ದ 16 ವರ್ಷದ ಬಾಲಕಿ ಕೆರೆಯಲ್ಲಿ ಶವವಾಗಿ ಪತ್ತೆ
ಚಿಕ್ಕಬಳ್ಳಾಪುರ: ಶಾಲೆಗೆ ಹೋಗಿದ್ದ ಬಾಲಕಿಯೊಬ್ಬಳು ಶನಿವಾರ ಸಂಜೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ (Girl jumps into pond). ಆಕೆಯ ಸಾವಿನ ಬಗ್ಗೆ ಅನುಮಾನಗಳು (Girl found dead) ಹುಟ್ಟಿಕೊಂಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ (Chikkaballapura News) ಈರೇನಹಳ್ಳಿ ಗ್ರಾಮದ ಶಂಕರಪ್ಪ ಎಂಬವರ ಪುತ್ರಿ ನಯನಾ ಎಂಬ 16 ವರ್ಷದ ಬಾಲಕಿಯೇ (16 year old girl) ಮೃತಪಟ್ಟವಳು. ಈಕೆಯ ಶವ ಬಾಗೇಪಲ್ಲಿ ತಾಲ್ಲೂಕಿನ ಗೊಂಡ್ಲವಾರಪಲ್ಲಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ.
10ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಮಧ್ಯಾಹ್ನ ಶಾಲೆ ಬಿಟ್ಟ ಬಳಿಕ ಮನೆಗೆ ಮರಳಿರಲಿಲ್ಲ. ಹೀಗಾಗಿ ಮನೆಯವರು ಹುಡುಕಾಟ ಆರಂಭಿಸಿದರು. ಅಂತಿಮವಾಗಿ ಗೊಂಡ್ಲವಾರಪಲ್ಲಿ ಕೆರೆಯ ಸಮೀಪ ದಡದಲ್ಲಿ ಶಾಲೆ ಬ್ಯಾಗ್, ಆಧಾರ್ ಕಾರ್ಡ್ ಮತ್ತು ಚಪ್ಪಲಿಗಳು ಪತ್ತೆಯಾದವು. ಇವುಗಳ ಆಧಾರದಲ್ಲಿ ನಯನಾ ನೀರಿಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಅಂದಾಜಿಸಲಾಯಿತು. ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Younster drowned : ಕೇರಳಕ್ಕೆ ಪ್ರವಾಸ ತೆರಳಿದ್ದ ಪುತ್ತೂರಿನ ಯುವಕ ನೀರಲ್ಲಿ ಮುಳುಗಿ ಸಾವು
ಕೆರೆಯಲ್ಲಿ ಪರಿಶೀಲಿಸಿದಾಗ ಆಕೆಯ ಬಟ್ಟೆಗಳು ಕಂಡುಬಂದವು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಆಕೆಯ ಶವವನ್ನು ಮೇಲೆತ್ತಿದರು. ಆಕೆಯ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ.