ಕೊಪ್ಪಳ: ಗ್ರಾನೈಟ್ ಕ್ವಾರಿಯ ಹೊಂಡದಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಮೃತಪಟ್ಟಿರುವುದು ಜಿಲ್ಲೆಯ (Koppal News) ಕುಕನೂರು ತಾಲೂಕಿನ ಗುದ್ನೇಪ್ಪನಮಠದ ಬಳಿ ನಡೆದಿದೆ.
ಪ್ರದೀಪ್ (15) ಮೃತ ವಿದ್ಯಾರ್ಥಿ. ಮೊರಾರ್ಜಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾದ ಪ್ರದೀಪ್, ಸ್ನೇಹಿತರೊಂದಿಗೆ ಈಜಲು ಕ್ವಾರಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ.
ಪ್ರದೀಪ್ ಸಾವಿಗೆ ವಸತಿ ಶಾಲೆಯ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಪಾಲಕರು ಆರೋಪಿಸಿದ್ದು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Wife Missing in Bengaluru : 4 ತಿಂಗಳ ಗರ್ಭಿಣಿ ನಾಪತ್ತೆ; ಗಲ್ಲಿ ಗಲ್ಲಿಯಲ್ಲಿ ಪತ್ನಿಗಾಗಿ ಪತಿಯ ಅಲೆದಾಟ
ಸರ್ಕಾರಿ ಆದೇಶ ಧಿಕ್ಕರಿಸಿ ಮಕ್ಕಳಿಂದ ಟಾಯ್ಲೆಟ್ ಕ್ಲೀನಿಂಗ್? ಕಲಬುರಗಿಯಲ್ಲಿ ಮುಖ್ಯ ಶಿಕ್ಷಕಿ ಮೇಲೆ ದೂರು
ಕಲಬುರಗಿ: ರಾಜ್ಯದ ಶಾಲೆಗಳಲ್ಲಿ ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛಗೊಳಿಸುವಂತೆ (Toilet Cleaning) ಇಲ್ಲ ಎಂದು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದರೂ ಮತ್ತೊಂದು ಪ್ರಕರಣ ಈಗ ಬೆಳಕಿಗೆ ಬಂದಿದೆ. ಕಲಬುರಗಿಯಲ್ಲಿ ಖಾಸಗಿ ಶಾಲೆ (Kalaburagi Private School) ಮುಖ್ಯ ಶಿಕ್ಷಕಿಯೊಬ್ಬರು (headmistress) ಶಾಲಾ ಮಕ್ಕಳಿಂದ ಟಾಯ್ಲೆಟ್ ಕ್ಲಿನಿಂಗ್ ಹಾಗೂ ಕಸ ಗುಡಿಸಲು ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಶಾಲೆಯಲ್ಲಿ ಅಷ್ಟೆ ಅಲ್ಲದೆ, ಈ ಮುಖ್ಯ ಶಿಕ್ಷಕಿಯು ತನ್ನ ಮನೆಯಲ್ಲೂ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ದೂರು ದಾಖಲಾಗಿದೆ. ಕಲಬುರಗಿಯ ಮೌಲಾನಾ ಆಜಾದ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ.
ಮೌಲಾನ್ ಆಜಾದ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಮುಖ್ಯ ಶಿಕ್ಷಕಿ ಜೋಹರಾ ವಿರುದ್ಧ ಈ ಗಂಭಿರ ಆರೋಪ ಕೇಳಿಬಂದಿದೆ. ಕಲಬುರಗಿ ಹೊರವಲಯದ ಮಾಲಗತ್ತಿ ರೋಡ್‌ನ ಸೋನಿಯಾ ಗಾಂಧಿ ಕ್ವಾಟರ್ಸ್ ಬಳಿ ಈ ಶಾಲೆ ಇದೆ. 8ನೇ ತರಗತಿಯ ವಿದ್ಯಾರ್ಥಿ ಮಹಮದ್ ಪೈಜಾನ್‌ನಿಂದ ಈ ಕೆಲಸವನ್ನು ಅವರು ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮಗ ಮನೆಗೆ ಬಂದಿಲ್ಲ!
ಮಹಮ್ಮದ್ ಫೈಜನ್ ಜತೆ ಹಲವು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕಿ ಈ ಕೆಲಸವನ್ನು ಹೇಳಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ದೂರಿದ್ದಾರೆ. ಕಳೆದ ಹಲವು ದಿನಗಳಿಂದ ಶಾಲೆ ಮತ್ತು ಮನೆಯ ಕೆಲಸವನ್ನು ಇವರು ಮಾಡಿಸುತ್ತಿರುವುದಾಗಿ ಆರೋಪ ಮಾಡಿದ್ದಾರೆ. ಶನಿವಾರ ಶಾಲೆ ಬಿಟ್ಟ ಮೇಲೆ ಮಗ ಮನೆಗೆ ಬಾರದೆ ಇದ್ದಾಗ ಗಾಬರಿಗೊಂಡ ಮಹಮ್ಮದ್ ಫೈಜನ್ ತಂದೆ ಮಹಮ್ಮದ್ ಜಮೀರ್ ಮಗನ ಬಗ್ಗೆ ವಿಚಾರಿಸಲು ಶಾಲೆಗೆ ತೆರಳಿದ್ದಾರೆ.
ಇದನ್ನೂ ಓದಿ |
ದೂರು ದಾಖಲು ಮಾಡಿದ ತಂದೆ
ಶಾಲೆಗೆ ಹೋದಾಗ ಮುಖ್ಯ ಶಿಕ್ಷಕಿಯ ಮನೆಯಲ್ಲಿ ಕೆಲಸ ಮಾಡುತ್ತಿರುವ ವಿಚಾರ ತಿಳಿದು ಅವರ ಮನೆಗೆ ಹೋಗಿ ವಿಚಾರಿಸಿದ್ದಾರೆ. ಅಲ್ಲಿ ತನ್ನ ಮಗ ಮುಖ್ಯ ಶಿಕ್ಷಕಿಯ ಮನೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಮ್ಮದ್ ಜಮೀರ್, ರೋಜಾ ಪೊಲೀಸ್ ಠಾಣೆಯಲ್ಲಿ ಮುಖ್ಯ ಶಿಕ್ಷಕಿಯ ವಿರುದ್ಧ ದೂರು ನೀಡಿದ್ದಾರೆ.