Site icon Vistara News

Student death | ಶಾಲೆ ತಪ್ಪಿಸಿಕೊಳ್ಳುತ್ತಿದ್ದ ಬಾಲಕ, ಅಮ್ಮ ಬೈದಳೆಂದು ನೇಣು ಬಿಗಿದುಕೊಂಡು ಆತ್ಮಹತ್ಯೆ

sucide

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಎನ್ನುವುದು ವ್ಯಾಪಕವಾಗಿ ಹರಡುತ್ತಿದೆ. ಬುದ್ಧಿ ಬಲಿತು, ಕಷ್ಟಕ್ಕೆ ಸಿಲುಕಿ ಅದರಿಂದ ಪಾರಾಗುವ ದಾರಿಗಳೇ ಇಲ್ಲ ಎಂದಾದಾಗ ಸಾವಿಗೆ ಶರಣಾಗುವ ಅಪರೂಪದ ಘಟನೆಗಳು ಹಿಂದೆ ನಡೆಯುತ್ತಿದ್ದವು. ಆದರೆ ಈಗ ಸಣ್ಣ ಸಣ್ಣ ಕಾರಣಗಳಿಗಾಗಿ, ಸಣ್ಣ ಸಣ್ಣ ಮಕ್ಕಳು ಕೂಡಾ ಸಾವಿಗೆ ಶರಣಾಗುತ್ತಿರುವ ವಿದ್ಯಮಾನಗಳು ಹೆಚ್ಚುತ್ತಿವೆ. ಎರಡು ದಿನಗಳ ಹಿಂದಷ್ಟೇ ಪುಟ್ಟ ಬಾಲಕಿಯೊಬ್ಬಳು ಚೀಟಿ ಬರೆದಿಟ್ಟು ಗೋವಾಕ್ಕೆ ಹೋಗಿದ್ದವಳನ್ನು ಭಾರಿ ಸಾಹಸದಿಂದ ಪತ್ತೆ ಹಚ್ಚಿ ಕರೆ ತರಲಾಗಿತ್ತು.

ಈ ನಡುವೆ, ಅಮ್ಮ ಬೈದಳೆಂಬ ಸಣ್ಣ ಕಾರಣಕ್ಕಾಗಿ ೧೪ ವರ್ಷದ ಹುಡುಗನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕು ಕಡಬಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೃಥ್ವಿ ರಾಜ್ (14) ಎಂಬಾತ ನೇಣಿಗೆ ಶರಣಾಗಿದ್ದಾನೆ.

ಕಡಬಗೆರೆ ನಿವಾಸಿ ವಿಜಯ್ ಕುಮಾರ್ ಮತ್ತು ಸವಿತಾ ದಂಪತಿಗಳ ಮಗನಾಗಿರುವ ಪ್ರಥ್ವೀರಾಜ್‌ ಕಡಬಗೆರೆ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಕಲಿಯುತ್ತಿದ್ದ. ಈಗ ಆಗಾಗ ಶಾಲೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ. ಇದನ್ನು ತಾಯಿ ಪ್ರಶ್ನಿಸಿದ್ದರು, ಬೈದಿದ್ದರು ಮತ್ತು ಒಂದೆರಡು ಪೆಟ್ಟು ಕೂಡಾ ಕೊಟ್ಟಿದ್ದರು.

ಇದರಿಂದ ನೊಂದಿದ್ದ ಬಾಲಕ ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಥ್ವೀರಾಜ್‌ನ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಹಾಗಿದ್ದರೆ ಮಕ್ಕಳಿಗೆ ಬುದ್ಧಿ ಹೇಳುವುದು ಕೂಡಾ ತಪ್ಪಾ ಎಂಬ ಪ್ರಶ್ನೆಯನ್ನು ಈಗ ಕೇಳುವಂತಾಗಿದೆ.

ಇದನ್ನೂ ಓದಿ Murder Case | ನಾಪತ್ತೆಯಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶವವಾಗಿ ಪತ್ತೆ; ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ

Exit mobile version