ವಿಜಯನಗರ: ಹೂವಿನಹಡಗಲಿಯಲ್ಲಿ ಹಾಸ್ಟೆಲ್‌ನಲ್ಲಿದ್ದುಕೊಂಡು ಎಂಜಿನಿಯರಿಂಗ್ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಬುಧವಾರ ಬಸ್‌ನಲ್ಲಿ ಹೋಗುತ್ತಿದ್ದಾಗ ತನ್ನ ಕಾಲೇಜು ಸ್ಟಾಪ್ ಬಂದರೂ ಬಸ್ ಅನ್ನು ನಿಲ್ಲಿಸದೇ ಇದ್ದಿದ್ದರಿಂದ ಕೆಳಗೆ ಜಿಗಿದು (Road Accident) ಗಂಭೀರವಾಗಿ ಗಾಯಗೊಂಡಿದ್ದಳು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾಳೆ.
ಹಡಗಲಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್ ಇದಾಗಿದೆ. ಹೂವಿನಹಡಗಲಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ವೇತಾ ಮೃತ ವಿದ್ಯಾರ್ಥಿನಿ. ಈಕೆ ಇ & ಸಿ ವಿಭಾಗದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾಳೆ.
ಹಡಗಲಿ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಶ್ವೇತಾ ಎಂದಿನಂತೆ ಬುಧವಾರವೂ ಕಾಲೇಜಿಗೆ ಬಸ್‌ನಲ್ಲಿ ಹೊರಟಿದ್ದಾಳೆ. ಈ ವೇಳೆ ಹಡಗಲಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್ ಅನ್ನು ಹತ್ತಿದ್ದಾಳೆ. ಆದರೆ, ಕಾಲೇಜು ಬಳಿಯ ಬಸ್ ಸ್ಟಾಪ್ ಬಂದರೂ ಬಸ್ ಅನ್ನು ನಿಲ್ಲಿಸಲಿಲ್ಲ. ಇದರಿಂದ ಆಕೆ ಕಾಲೇಜಿಗೆ ಹೋಗಲೇಬೇಕೆಂದು ಬಸ್ ಚಲಿಸುತ್ತಿದ್ದಾಗಲೇ ಕೆಳಕ್ಕೆ ಜಿಗಿದಿದ್ದಾಳೆ.
ಇದನ್ನೂ ಓದಿ: Karnataka Elections: ಬೊಮ್ಮಾಯಿ ಹಗರಣ ಬಿಚ್ಚಿಡ್ತೀನಿ ಎಂದ ಓಲೆಕಾರ್, ದಾಖಲೆ ಕೊಟ್ಟು ಮಾತಾಡಲಿ ಎಂದ ಸಿಎಂ
ಹೀಗೆ ಬಸ್‌ನಿಂದ ಕೆಳಗೆ ಜಿಗಿದಿದ್ದರಿಂದ ನಿಯಂತ್ರಣ ಸಿಗದೆ ಆಕೆ ನೆಲಕ್ಕೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಘಟನೆ ನಂತರ ಸಾರಿಗೆ ಬಸ್ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಸಾವಿನಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹಡಗಲಿ ಪೊಲೀಸರ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನ ಮಾಡಿದ್ದಾರೆ.
ಅಪ್ಪ ಎಂದು ಹಿಂದೆ ಹಿಂದೆ ಬಂದ ಒಂದೂವರೆ ವರ್ಷದ ಮಗು; ಗೊತ್ತಾಗದೆ ಟ್ರ್ಯಾಕ್ಟರ್ ರಿವರ್ಸ್ ತೆಗೆಯುವಾಗ ಹರಿದು ಸಾವು
ಶಿವಮೊಗ್ಗ: ಅಪ್ಪನನ್ನು ಹಿಂಬಾಲಿಸಲು ಹೋಗಿ ಮಗುವೊಂದು ಟ್ರ್ಯಾಕ್ಟರ್‌ಗೆ ಸಿಲುಕಿ ಮೃತಪಟ್ಟಿರುವ (Accident Case) ದುರ್ಘಟನೆ ತೀರ್ಥಹಳ್ಳಿಯ ಹೆದ್ದೂರಿನಲ್ಲಿ ಬುಧವಾರ (ಏ.12) ನಡೆದಿದೆ. ಗ್ರಾಮದ ಆದರ್ಶ್ ಹೆದ್ದೂರು ಎಂಬುವವರ ಒಂದೂವರೆ ವರ್ಷದ ಮಗು ದುರ್ಮರಣ ಹೊಂದಿದೆ.
ಆದರ್ಶ್ ಅವರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಆಟವಾಡುತ್ತಿದ್ದರು. ನಂತರ ಕೆಲಸದ ನಿಮಿತ್ತ ಮಗುವನ್ನು ಮನೆಯೊಳಗೆ ಬಿಟ್ಟಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಅನ್ನು ತೆಗೆಯಲು ಹೋಗಿದ್ದಾರೆ. ಈ ವೇಳೆ ಒಂದೂವರೆ ವರ್ಷದ ಮಗು ಅಪ್ಪನನ್ನೇ ಹಿಂಬಾಲಿಸಿಕೊಂಡು ಬಂದಿದೆ.
ಇದನ್ನೂ ಓದಿ: Belagavi Border Dispute: ಬೆಳಗಾವಿ ಗಡಿ ವಿವಾದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ಜಡ್ಜ್!
ಆದರೆ, ಇದ್ಯಾವುದರ ಅರಿವು ಇರದ ಆದರ್ಶ್ ಅವರು ಟ್ರ್ಯಾಕ್ಟರ್ ಅನ್ನು ಹಿಂದೆ ತೆಗೆಯಲು ಮುಂದಾಗಿದ್ದು, ಮಗುವಿನ ಮೈಮೇಲೆ ಹರಿದಿದೆ. ಪರಿಣಾಮ ಗಂಭೀರ ಗಾಯಗೊಂಡ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.