Site icon Vistara News

Student missing | ತುಮಕೂರು ಸಿದ್ದಗಂಗಾ ಮಠದಲ್ಲಿದ್ದ 10ನೇ ತರಗತಿ ವಿದ್ಯಾರ್ಥಿ ನಾಪತ್ತೆ

Students Missing Case

ತುಮಕೂರು: ಇಲ್ಲಿನ ಸಿದ್ದಗಂಗಾ ಮಠದಿಂದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ. ೧೦ನೇ ತರಗತಿಯಲ್ಲಿ ಕಲಿಯುತ್ತಿರುವ ಸಂದೀಪ್ ರಮೇಶ್ ರಾಠೋಡ್ (16) ಎಂಬ ವಿದ್ಯಾರ್ಥಿ ಅಕ್ಟೋಬರ್ 30ರಿಂದ ನಾಪತ್ತೆಯಾಗಿದ್ದಾನೆ.

ಈತ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ್ ತಾಲೂಕಿನ ಕೋಳೂರು ತಾಂಡದ ನಿವಾಸಿ ಎನ್ನಲಾಗಿದೆ. ನಾಪತ್ತೆಯಾದ ಬಗ್ಗೆ ತಂದೆ ರಮೇಶ್ ಅವರು ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Missing Case | ದೇಗುಲ ಮಠದಿಂದ ಮಿಸ್‌ ಆಗಿದ್ದ ಮೂವರು ಬಾಲಕರು ಪ್ರತ್ಯಕ್ಷ; ನಿಟ್ಟುಸಿರು ಬಿಟ್ಟ ಪೋಷಕರು

Exit mobile version