ಮಡಿಕೇರಿ: ಕೊಡಗು ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಾಲೆಯಿಂದ ಸಸ್ಪೆಂಡ್ ಮಾಡಿದ್ದಕ್ಕೆ ಮನನೊಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಪೊನ್ನಂಪೇಟೆ ಸಮೀಪದ ನಿಟ್ಟೂರು ಜಾಗಲೆ ಗ್ರಾಮದ ಈ ಬಾಲಕ ಗೋಣಿಕೊಪ್ಪಲುವಿನ ಕಾಲ್ಸ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿಯ ನಡತೆ ಸರಿಯಿಲ್ಲ ಎಂದು ಆಡಳಿತ ಮಂಡಳಿ ಸಸ್ಪೆಂಡ್ ಮಾಡಿತ್ತು. ಇದರಿಂದ ನೊಂದ ಬಾಲಕ ಸೋಮವಾರ ಮನೆಯಲ್ಲಿ ವಾರ್ಡ್ ರೋಬ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ತನ್ನ ತಪ್ಪಿಗೆ ಕ್ಷಮೆ ಕೇಳಿದ್ದರೂ ಮನ್ನಿಸಲಿಲ್ಲ ಎಂಬ ಬೇಸರದಲ್ಲಿ ಈ ಕೃತ್ಯ ನಡೆಸಿದ್ದಾನೆ ಎನ್ನುವ ಮಾತು ಕೇಳಿಬರುತ್ತಿದೆ. ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿದ್ಯಾರ್ಥಿನಿಯ ವರ್ತನೆಯ ಬಗ್ಗೆ ಸಣ್ಣ ವಯಸ್ಸಿನಿಂದಲೂ ಆಕ್ಷೇಪವಿತ್ತು ಎನ್ನಲಾಗಿದೆ. ಮೂರು ವರ್ಷದ ಹಿಂದೆ ಈತನನ್ನು ಇನ್ನೊಂದು ಶಾಲೆಯಿಂದ ಅಮಾನತು ಮಾಡಲಾಗಿತ್ತು. ಆಗ ಆತ ಈ ಶಾಲೆಗೆ ಬಂದಿದ್ದ.