Site icon Vistara News

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಜುಲೈ 6ರಿಂದ ಲಭ್ಯ

2nd puc

ಬೆಂಗಳೂರು: ರಾಜ್ಯಾದ್ಯಂತ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಜೂನ್‌ 18ರಂದು ಪ್ರಕಟಿಸಲಾಗಿತ್ತು. ಇದೀಗ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ.

ಇದನ್ನೂ ಓದಿ |ಪಿಯುಸಿಯಲ್ಲೂ ಮಹೇಶ್‌ ಅಮೋಘ ಸಾಧನೆ, ಜೋಪಡಿಯ ಹುಡುಗನಿಗೆ ಎಂಜಿನಿಯರ್‌ ಆಗುವ ಕನಸು

ಈ ಕುರಿತು ಟೀಟ್ವ್‌ ಮಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಉತ್ತರ ಪತ್ರಿಕೆಗಳ ಪ್ರತಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಜುಲೈ 6ರಿಂದ ಇಲಾಖೆಯ ವೆಬ್‌ಸೈಟ್‌ನಿಂದ ಪ್ರತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಕುರಿತು ವಿದ್ಯಾರ್ಥಿಗಳ ನೋಂದಾಯಿತ ಫೋನ್ ನಂಬರ್‌ಗಳಿಗೆ SMS ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಟ್ವೀಟ್‌

ಪಿಯು ಬೋರ್ಡ್‌ನ ನಿರ್ದೇಶಕರು ಈ ಸಂಬಂಧ ಆದೇಶವನ್ನು ಹೊರಡಿಸಿದ್ದು. ಜುಲೈ 6ರಿಂದ ಆನ್‌ಲೈನ್‌ನಲ್ಲಿ ಹಂತ ಹಂತವಾಗಿ ಉತ್ತರಪ್ರತಿಗಳ ಸ್ಕ್ಯಾನ್ ಪ್ರತಿ ಅಪ್‌ಲೋಡ್ ಆಗಲಿದೆ. ಉತ್ತರ ಪ್ರತಿ ಅಪ್‌ಲೋಡ್ ನಂತರ ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ.

ಎಸ್ಎಂಎಸ್ ಬಂದ ವಿದ್ಯಾರ್ಥಿಗಳು https://pue.karnataka.govt.in ಲಾಗಿನ್‌ ಆಗಿ ಉತ್ತರಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಇದನ್ನೂ ಓದಿ | 2nd puc Toppers| ಹಪ್ಪಳ ಮಾರುವವರ ಮಗಳು ಈಗ ಪಿಯುಸಿ ಟಾಪರ್‌! ಸಾಧನೆಗೆ ಯಾವುದೂ ಅಡ್ಡಿ ಅಲ್ಲ

Exit mobile version