Site icon Vistara News

ಕಳವಳ ಮೂಡಿಸಿದೆ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪ್ರಮಾಣ

suicide

ಬೆಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳು ಸರಣಿ ಎಂಬಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಳವಳ ಮೂಡಿಸುವಂತಿದೆ. ಇಂಥ ಪ್ರಕರಣಗಳ ಅಂಕಿ ಅಂಶಗಳನ್ನು ನೋಡಿದರೆ ನಿಜಕ್ಕೂ ಗಾಬರಿಯಾಗುವಂತಿದೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಪ್ರಮಾಣ ನೋಡಿದರೆ ಚಿಂತೆ ಮೂಡಿಸುವಷ್ಟಿದೆ. ಆತ್ಮಹತ್ಯೆ ದಾರಿ ಹಿಡಿದವರಲ್ಲಿ ಗಂಡು ಮಕ್ಕಳೇ ಮುಂದಿದ್ದಾರೆ. ಆತ್ಮಹತ್ಯೆಯ ಕಾರಣಗಳ ಪಟ್ಟಿಯಲ್ಲಿ ಖಿನ್ನತೆ ಪ್ರಮುಖವಾಗಿದ್ದು, ಪೋಷಕರಿಂದ ಒತ್ತಡ, ಶಿಕ್ಷಕರಿಂದ ಬೈಗುಳ, ಪರೀಕ್ಷೆಯಲ್ಲಿ ಫೇಲಾದೆ ಎಂಬ ಕಾರಣಕ್ಕೆ ಖಿನ್ನತೆ ಸೃಷ್ಟಿಯಾಗಿದೆ. ಖಿನ್ನತೆಯ ವಿವಿಧ ಮೂಲಗಳಿಂದಾಗಿ ಶಾಲಾ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

2022ರ ಆರಂಭದಿಂದ ಇಲ್ಲಿಯವರೆಗೆ 117 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅದರಲ್ಲಿ 59 ವಿದ್ಯಾರ್ಥಿಗಳು ಹಾಗೂ 58 ವಿದ್ಯಾರ್ಥಿನಿಯರು. 2020ರಲ್ಲಿ 149, 2019ರಲ್ಲಿ 199, 2018ರಲ್ಲಿ 253 ವಿದ್ಯಾರ್ಥಿಗಳು, ಹೀಗೆ ಒಟ್ಟಾರೆ ಕಳೆದ ಐದು ವರ್ಷಗಳಲ್ಲಿ ಒಟ್ಟು 1058 ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವನ ಅಂತ್ಯಗೊಳಿಸಿಕೊಂಡಿದ್ದಾರೆ. ಇವರಲ್ಲಿ 584 ಗಂಡು‌ ಮಕ್ಕಳು ಹಾಗೂ 474 ಹೆಣ್ಣು ಮಕ್ಕಳು ಸಾವನ್ನಪ್ಪಿರುವುದು ಪೊಲೀಸ್ ಇಲಾಖೆ ಅಂಕಿ-ಅಂಶಗಳಿಂದ ದೃಢಪಟ್ಟಿದೆ.

ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲೆ ಕಲಿಕೆ ವಿಚಾರದಲ್ಲಿ ಪೋಷಕರು ಹೇರುವ ಒತ್ತಡ, ರ್ಯಾಂಕ್‌ ಬರಬೇಕೆಂಬ ನಿರೀಕ್ಷೆ, ಹೆಚ್ಚಿನ ಗ್ರೇಡ್‌ ಬರದಿದ್ದರೆ ಭವಿಷ್ಯದಲ್ಲಿ ಉತ್ತಮ ಮೆಡಿಕಲ್- ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಸೀಟು ಸಿಗಲಾರದು ಎಂಬ ಆತಂಕ, ಕಡಿಮೆ ಅಂಕ ಬಂದರೆ ಬೈಯುವುದು, ಮಕ್ಕಳ‌ ಮನೋಧೈರ್ಯವನ್ನು ಕುಗ್ಗಿಸುವಿಕೆಗಳಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳಗೊಂಡಿವೆ ಎಂದು ವೈದ್ಯಕೀಯ ಹಾಗೂ ಪೊಲೀಸ್‌ ಮೂಲಗಳು ದೃಢಪಡಿಸುತ್ತವೆ.

ಇದನ್ನೂ ಓದಿ | Student suicide | ಪರೀಕ್ಷೆಯಲ್ಲಿ 10 ಮಾರ್ಕ್ಸ್‌ ಕಡಿಮೆ ಆಗಿದ್ದಕ್ಕೆ ನಿಂದಿಸಿದ ಪ್ರಿನ್ಸಿಪಾಲ್‌: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

Exit mobile version