Site icon Vistara News

Karnataka Election 2023: ಮಠಾಧೀಶರು ಮುಖ್ಯಮಂತ್ರಿ ಆಗುವುದಾದರೆ ಸ್ವಾಗತ: ಸುಬುಧೇಂದ್ರ ತೀರ್ಥ ಸ್ವಾಮೀಜಿ

Subudhendra Theertha Swamiji says Welcome if seer becomes CM

#image_title

ರಾಯಚೂರು: ರಾಜ್ಯದಲ್ಲಿ ಮಠಾಧೀಶರು ಮುಖ್ಯಮಂತ್ರಿ ಆಗುವುದಾದರೆ ಸ್ವಾಗತಿಸುವುದಾಗಿ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ʼಬ್ರಾಹ್ಮಣ ಸಿಎಂʼ (Karnataka Election 2023) ಹೇಳಿಕೆ ನೀಡಿದ ಬೆನ್ನಲ್ಲೇ ಮಂತ್ರಾಲಯದ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಬಿಜೆಪಿಯಿಂದ ಸಂತರನ್ನು ಸಿಎಂ ಮಾಡುವ ವಿಚಾರಕ್ಕೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿಕ್ರಿಯಿಸಿರುವ ಅವರು, ಮಠಾಧೀಶರು ಮುಖ್ಯಮಂತ್ರಿ ಆಗುವುದಾದರೆ ಸ್ವಾಗತ. ಧರ್ಮದಲ್ಲಿ ರಾಜಕೀಯ ಯಾವತ್ತಿಗೂ ಬರಬಾರದು. ಆದರೆ, ರಾಜಕೀಯದಲ್ಲಿ ಧರ್ಮ ಬಂದರೆ ಉತ್ತಮ ಆಡಳಿತ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Mantralaya: ರಾಯರ 428ನೇ ವರ್ಧಂತಿ ಮಹೋತ್ಸವಕ್ಕೆ ಅದ್ಧೂರಿ ತೆರೆ; ಟಿಟಿಡಿಯಿಂದ ರಾಯರಿಗೆ ಶೇಷ ವಸ್ತ್ರ ಸಮರ್ಪಣೆ

ಇಂತಹ ವ್ಯಕ್ತಿ ಬರಬೇಕು, ಇಂತಃವರು ಬರಬಾರದು ಎನ್ನುವುದಕ್ಕಿಂತ ಬಂದಂತಹ ವ್ಯಕ್ತಿಗಳು ರಾಜ್ಯದ ಜನರ ಕಾಳಜಿಯುಳ್ಳಂತ ವ್ಯಕ್ತಿ ಆಗಬೇಕು. ಆದಷ್ಟು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಂತ ವ್ಯಕ್ತಿ ಸಿಎಂ ಆಗಬೇಕು ಎಂದು ತಿಳಿಸಿದ್ದಾರೆ.

Exit mobile version