Site icon Vistara News

ಕಟ್ಟಡದಿಂದ ಬಿದ್ದು ಯುವತಿ ಸಾವು: ಯುವಕನಿಗೆ ಗಂಭೀರ ಗಾಯ

crime

crime

ಬೆಂಗಳೂರು: ಬ್ರಿಗೇಡ್‌ ರಸ್ತೆಯ ಫಿಫ್ತ್ ಅವೆನ್ಯೂ ಶಾಪಿಂಗ್‌ ಕಾಂಪ್ಲೆಕ್ಸ್ (shoping complex) ಕಿಟಕಿಯಿಂದ ಬಿದ್ದು ಯುವತಿ ಮೃತಪಟ್ಟು, ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕಾಕ್ಸ್‌ಟೌನ್ ನಿವಾಸಿ ಲಿಯಾ(18) ಮೃತಪಟ್ಟ ಯುವತಿ. ಹೆಚ್‌ಎಎಲ್ ನಿವಾಸಿಯಾದ ಆಂಧ್ರ ಮೂಲದ ಕ್ರಿಸ್ ಪೀಟರ್‌(18) ಗಾಯಾಳು. ಇಬ್ಬರೂ ಸೇಂಟ್‌ ಜೋಸೆಪ್‌ ಕಾಮರ್ಸ್‌ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳಾಗಿದ್ದಾರೆ.

ಇದನ್ನೂ ಓದಿ | ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮಹಿಳೆ ಕಾರಣ !

ಕಟ್ಟಡದ 5ನೇ ಮಹಡಿಯಿಂದ ಯುವತಿ ಬಿದ್ದಾಗ ಆಕೆಯನ್ನು ಹಿಡುಕೊಳ್ಳಲು ಹೋಗಿ ಯುವಕನೂ ಬಿದ್ದಿದ್ದಾನೆ. ಯುವತಿಯ ತಲೆಗೆ ಪೆಟ್ಟಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ರಕ್ತಸಿಕ್ತವಾಗಿದ್ದ ಸ್ಥಳದಲ್ಲಿ ಯುವತಿ ಜತೆಗೆ ಕುಳಿತಿದ್ದ ಯುವಕ, ಸಹಾಯಕ್ಕಾಗಿ ಬೇಡುತ್ತಿದ್ದ. ಗಂಭಿರವಾಗಿ ಗಾಯಗೊಂಡ ಯುವತಿಯನ್ನು ನಿಮ್ಹಾನ್ಸ್‌ಗೆ ಸಾಗಿಸಲಾಯಿತು. ಆದರೆ ಆಕೆ ಅಷ್ಟರವೇಳೆಗೆ ಮೃತಪಟ್ಟಿದ್ದಳು. ಯುವಕನ ಕಾಲಿಗೆ ಪೆಟ್ಟಾಗಿದ್ದರಿಂದ ಆತನನ್ನು ಆಸ್ಪತೆಗೆ ದಾಖಲಿಸಲಾಗಿದೆ.

ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿತ್ತು. ಆದರೆ, ಆತ್ಮಹತ್ಯೆಯಲ್ಲ, ಕಾಲು ಜಾರಿ ಬಿದ್ದಿರುವುದು ಎಂದು ಯುವಕ ಹೇಳಿಕೆ ನೀಡಿದ್ದಾನೆ. ತನಿಖೆ ನಂತರವಷ್ಟೆ ಈ ಬಗ್ಗೆ ಖಚಿತ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | ಶಿಗ್ಗಾಂವಿ ರಾಜಶ್ರೀ ಥಿಯೇಟರ್‌ ಶೂಟೌಟ್ ಪ್ರಕರಣದ ಆರೋಪಿ ಬಂಧನ

Exit mobile version