ಬಳ್ಳಾರಿ: ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬರು ಕಾಲುವೆಗೆ ಹಾರಿ ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದು, ಅದೃಷ್ಟವಶಾತ್ ಒಬ್ಬ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಲಕ್ಷ್ಮೀ ಮೃತ ಮಹಿಳೆ, ಶಾಂತಿ ಮೃತ ಬಾಲಕಿಯಾಗಿದ್ದಾಳೆ. ನಾಲ್ಕು ವರ್ಷದ ವೆನಿಲಾಳ ಪ್ರಾಣ ಉಳಿದಿದೆ. ಬಳ್ಳಾರಿ ತಾಲೂಕಿನ ಮೋಕಾ ಬಳಿಯ ತುಂಗಭದ್ರಾ ಕಾಲುವೆಗೆ ಇಬ್ಬರು ಮಕ್ಕಳೊಂದಿಗೆ ಮಹಿಳೆ ಗುರುವಾರ ಹಾರಿದ್ದರು. ಆದರೆ, ವೆನಿಲಾ ಎಂಬ ಬಾಲಕಿಯನ್ನು ಸ್ಥಳಿಯರು ರಕ್ಷಣೆ ಮಾಡಿದ್ದಾರೆ. ಎರಡು ವರ್ಷದ ಬಾಲಕಿ ಶಾಂತಿ ಮೃತಪಟ್ಟಿದ್ದು, ಮೃತದೇಹ ಸಿಕ್ಕಿದೆ. ಆದರೆ, ಮಹಿಳೆಯ ಮೃತದೇಹಕ್ಕಾಗಿ ಹುಟುಕಾಟ ನಡೆಸಲಾಗುತ್ತಿದೆ.
ಬಳ್ಳಾರಿ ತಾಲೂಕಿನ ಗುಗ್ಗರಟ್ಟಿ ಲಕ್ಷ್ಮೀ ತವರು ಮನೆಯಾಗಿದೆ. ಆಂಧ್ರಪ್ರದೇಶ ಆಲೂರು ಸಮೀಪದ ಹಳ್ಳಿಯೊಂದರ ವೀರಭದ್ರ ಎಂಬುವವರ ಜತೆ ವಿವಾಹವಾಗಿದ್ದರು, ನಾಲ್ಕು ಜನ ಹೆಣ್ಣುಮಕ್ಕಳು ಹುಟ್ಟಿವೆ ಎಂಬ ಕಾರಣಕ್ಕೆ ಮನೆಯಲ್ಲಿ ಗಂಡ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಪ್ರತಿ ದಿನ ಜಗಳ ನಡೆಯುತ್ತಿದ್ದರಿಂದ ಮನನೊಂದ ಮಹಿಳೆ ಮಕ್ಕಳ ಜತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳ್ಳಾರಿಯ ಮೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Bengaluru Pothole : ಬೈಕ್‌ನಲ್ಲಿ ತೆರಳುತ್ತಿದ್ದಾಗ ಕುಸಿದ ರಸ್ತೆ; ಕಂದಕಕ್ಕೆ ಬಿದ್ದ ಸವಾರ ಆಸ್ಪತ್ರೆಗೆ ದಾಖಲು