Site icon Vistara News

Suicide Case | ನೇಣಿಗೆ ಶರಣಾದ ಅಥಣಿ ಠಾಣೆಯ ಎಎಸ್ಐ ರಾಮಲಿಂಗ ನಾಯಕ್‌

hang

ಚಿಕ್ಕೋಡಿ: ಇಲ್ಲಿನ ಅಥಣಿ ಪೊಲೀಸ್‌ ಠಾಣೆಯ ಎಎಸ್‌ಐ ನೇಣಿಗೆ ಶರಣಾಗಿರುವ (Suicide Case) ಘಟನೆ ನಡೆದಿದೆ. ರಾಮಲಿಂಗ ನಾಯಕ್ (೪೯) ಆತ್ಮಹತ್ಯೆ ಮಾಡಿಕೊಂಡಿರುವ ಎಎಸ್ಐ.

ಅಳಗವಾಡಿ ಗ್ರಾಮದ ಬೀರೇಶ್ವರ ದೇವಸ್ಥಾನದ ಪಕ್ಕದ ಶೆಡ್‌ನಲ್ಲಿ ಅವರು ನೇಣುಬಿಗಿದುಕೊಂಡಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಬೈಕ್‌ ನಿಲ್ಲಿಸಿ ಶೆಡ್‌ಗೆ ಹೊಂದಿಕೊಂಡಿರುವ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Heeraben Modi | ಪ್ರಧಾನಿ ನರೇಂದ್ರ ಮೋದಿ ಮಾತೃ ವಿಯೋಗಕ್ಕೆ ಕರ್ನಾಟಕದ ಕಂಬನಿ

Exit mobile version