Site icon Vistara News

Suicide Case: ಇಬ್ಬರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಟೊ ಚಾಲಕ

Auto driver suicide

ಬೀದರ್: ಆಟೋ ಚಾಲಕರೊಬ್ಬರು (Auto driver) ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ (Suicide case) ಮಾಡಿಕೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ. ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಲಾಗಿದೆ.

ಬೀದರ್ ಜಿಲ್ಲೆಯ (Bidar news) ಹುಮನಾಬಾದ್ ತಾಲೂಕಿನ ಧುಮ್ಮನಸೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಟೋ ಚಾಲಕ ಅಂಕುಶ್ ಹುಚ್ಚೇನೂರ್(28) ಅವರು ತಮ್ಮ ಇಬ್ಬರು ಮಕ್ಕಳಾದ ಮಗಳು ತನು(೦6), ಮಗ ಸಾಯಿರಾಜ್ (೦5) ಅವರೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ಆಟೋ ಚಾಲಕರಾಗಿದ್ದು, ಎಲ್ಲರ ಜತೆ ಉತ್ತಮ ಸಂಬಂಧ ಹೊಂದಿದ್ದ ಅಂಕುಶ್‌ ಅವರು ಕೌಟುಂಬಿಕ ಸಮಸ್ಯೆಯಿಂದ ತೊಂದರೆಯಲ್ಲಿದ್ದರು ಎನ್ನಲಾಗಿದೆ. ಆದರೆ, ಈ ಜಗಳ ಯಾರ ಜತೆಗಿತ್ತು. ಪತ್ನಿ ಜತೆ ಸಂಬಂಧ ಹದಗೆತಟ್ಟಿತ್ತೇ ಅಥವಾ ಕೌಟುಂಬಿಕವಾಗಿ ಜಗಳಗಳಿದ್ದವೇ ಎನ್ನುವುದು ಸ್ಪಷ್ಟವಾಗಿಲ್ಲ.

ಜಮೀನಿನ ನಡುವೆ ಇರುವ ಬಾವಿಯಲ್ಲಿ ನಡೆದಿದೆ ಆತ್ಮಹತ್ಯೆ

ಅಂತೂ ಅವರು ಊರಿನ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಹುಮನಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ ಮೃತದೇಹಗಳನ್ನು ಮೇಲೆತ್ತಿದ್ದಾರೆ. ಇದು ಗ್ರಾಮ ಮಧ್ಯೆ ಜಮೀನಿನಲ್ಲಿರುವ ದೊಡ್ಡ ಬಾವಿಯಾಗಿದೆ.

ಇದನ್ನೂ ಓದಿ: Auto Accident : ಅತಿವೇಗದ ಚಾಲನೆಗೆ ಹಾರಿಹೋಯ್ತು ಚಾಲಕ ಪ್ರಾಣ; ಕುಡಿತ ತಂದ ಆಪತ್ತು

ಎರಡೆರಡು ಬಾರಿ ಎಕ್ಸಾಂನಲ್ಲಿ ಫೇಲ್‌; ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ!

ಪರೀಕ್ಷೆಯಲ್ಲಿ ಎರಡು ಬಾರಿ ಫೇಲ್‌ ಆಗಿದ್ದಕ್ಕೆ ಪಿಯು ವಿದ್ಯಾರ್ಥಿಯೊಬ್ಬ ಮನನೊಂದು ನೇಣಿಗೆ ಕೊರಳೊಡ್ಡಿದ್ದಾನೆ.

ಬೆಂಗಳೂರು: ಇಲ್ಲಿನ ಬೈಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಾರ್ಲ್ಸ್(18) ಮೃತ ದುರ್ದೈವಿ.

ಚಾರ್ಲ್ಸ್ ರೂಮಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾರ್ಲ್ಸ್ ಆರು ತಿಂಗಳ ಹಿಂದೆ ಪ್ರಥಮ ಪಿಯುಸಿಯಲ್ಲಿ ಫೇಲಾಗಿದ್ದರಿಂದ ಮನನೊಂದಿದ್ದ. ಆದರೆ ಪೋಷಕರು ಧೈರ್ಯ ತುಂಬಿದ ಕಾರಣಕ್ಕೆ ಧೃತಿಗೆಡದೆ ನಂತರ ಮರು ಪರೀಕ್ಷೆಯನ್ನು ಬರೆದಿದ್ದ. ಅದರಲ್ಲೂ ಫೇಲ್‌ ಆಗಿದ್ದ.

ಈ ವೇಳೆ ಕಾಲೇಜಿನವರು ಬೇರೆ ಕಾಲೇಜಿಗೆ ಸೇರಿಸುವಂತೆ ಹೇಳಿದ್ದಾರೆ. ಮೊದಲ ಬಾರಿ ಫೇಲಾಗಿದ್ದ ಚಾರ್ಲ್ಸ್, ಎರಡನೇ ಬಾರಿಯೂ ಫೇಲಾಗಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದ. ಬುಧವಾರ ರಾತ್ರಿ 9:30 ರ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದ್ದು, ಚಾರ್ಲ್ಸ್ ಮೃತದೇಹವನ್ನು ಸಿವಿ ರಾಮನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version