Site icon Vistara News

Suicide Case: ಮದುವೆಯಾಗಿ 5 ವರ್ಷವಾದರೂ ಮಕ್ಕಳಾಗಿಲ್ಲ ಎಂಬ ಕೊರಗಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ

Suicide Case

ಮೈಸೂರು: ಮದುವೆಯಾಗಿ ೫ ವರ್ಷವಾದರೂ ಮಕ್ಕಳು ಆಗಿಲ್ಲ ಎಂಬ ಕೊರಗಿನಲ್ಲಿ ವ್ಯಕ್ತಿಯೊಬ್ಬ ಇಲ್ಲಿನ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾನೆ. ಧರ್ಮರಾಜು (28) ಆತ್ಮಹತ್ಯೆ (Suicide Case) ಮಾಡಿಕೊಂಡ ದುರ್ದೈವಿ.

ಎಚ್.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್‌ನ ನೌಕರನಾಗಿರುವ ಧರ್ಮರಾಜುಗೆ ಮದುವೆ ಆಗಿ ಐದು ವರ್ಷಗಳು ಕಳೆದರೂ ಮಕ್ಕಳು ಇಲ್ಲ ಎಂಬ ಕೊರಗು ಹೆಚ್ಚಾಗಿ ಕಾಡುತ್ತಿತ್ತು ಎನ್ನಲಾಗಿದೆ. ಮಕ್ಕಳಾಗಿಲ್ಲ ಎನ್ನುವ ವಿಚಾರಕ್ಕೆ ಆಗಾಗ ಪತಿ-ಪತ್ನಿ ನಡುವೆ ಜಗಳವೂ ಆಗುತ್ತಿತ್ತು ಎನ್ನಲಾಗಿದೆ. ಹೀಗೆ ಇದೇ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದ್ದು, ಇದರಿಂದ ಧರ್ಮರಾಜುವಿನ ಪತ್ನಿ ತವರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸೊರಬದಲ್ಲಿ ಅರಣ್ಯಾಧಿಕಾರಿಗಳಿಂದಲೇ ಅಕ್ರಮ ನಾಟ ಸಾಗಾಟ; ಖಚಿತ ಮಾಹಿತಿ ಮೇರೆಗೆ ಎಸಿಎಫ್‌ ಪ್ರವೀಣ್‌ ಕುಮಾರ್‌ ಬಸ್ರೂರ್‌ ತಂಡ ದಾಳಿ

ಪತ್ನಿ ಊರಿನಲ್ಲಿ ಇಲ್ಲದ ವೇಳೆ ಕೆಲಸಕ್ಕೆ ರಜೆ ಹಾಕಿ ಧರ್ಮರಾಜು ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಮೃತದೇಹವನ್ನು ರವಾನಿಸಿದ್ದಾರೆ. ಧರ್ಮರಾಜು ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version